DK Shivakumar: ಸರ್ಕಾರ ಮನೆ ಕಟ್ಟಲಿ ಅಂತ ಸೈಟ್‌ ಕೊಟ್ಟಿರೋದು, ಕಸ ಹಾಕಲಿ ಅಂತ ಅಲ್ಲ – ಸಿಎಂ ಡಿಕೆಶಿ

ಬೆಂಗಳೂರು: ಸರ್ಕಾರದಿಂದ ಹಂಚಿಕೆಯಾಗಿರುವ ಸೈಟ್‌ಗಳಲ್ಲಿ ಮನೆ ಕಟ್ಟದೇ ಖಾಲಿ ಬಿಟ್ಟರೆ ಅಂತಹವರಿಂದ ನಿವೇಶನಗಳನ್ನ ವಾಪಸ್‌ ಪಡೆಯಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ತ್ಯಾಜ್ಯ ಮುಕ್ತ ಹಾಗೂ ಸುಂದರ ಬೆಂಗಳೂರನ್ನ ನಿರ್ಮಿಸುವ ಉದ್ದೇಶದಿಂದ, ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಸಮೀಪದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರೊದಿಗೆ ʻತ್ಯಾಜ್ಯದಿಂದ ಸ್ವಾತಂತ್ರ್ಯʼ ಅಭಿಯಾನಕ್ಕೆ ಸಿಎಂ ಡಿಕೆ ಶಿವಕುಮಾರ್‌ ಚಾಲನೆ ನೀಡಿದರು. ಸರ್ಕಾರದಿಂದ ಪಡೆದ ಸೈಟ್‌ ಖಾಲಿ ಬಿಟ್ಟರೆ ಅಥವಾ ಮನೆ ಕಟ್ಟದೇ […]

ಸೋಮವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಮಂತ್ರಿ ಭಾಗ್ಯ!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಬರುವ ಸೋಮವಾರ ಹೊಸ ನಾಯಕರು ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಲವು ಶಾಸಕರಿಗೆ ಮೊದಲ ಬಾರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಮಂತ್ರಿ ಸ್ಥಾನದ ರೇಸ್‌ನಲ್ಲಿರುವ ಪ್ರಮುಖ ನಾಯಕರು: ವಿವಿಧ ವಲಯಗಳಿಂದ ಕೇಳಿಬರುತ್ತಿರುವ ಮಾಹಿತಿಯಂತೆ, ಈ ಕೆಳಗಿನ ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಿದೆ: ಪಕ್ಷದ ಆಂತರಿಕ ದಂಗೆ ಶಮನ ಹಾಗೂ ಪ್ರಾದೇಶಿಕ ಸಮತೋಲನ: ಆಡಳಿತಾರೂಢ ಪಕ್ಷದಲ್ಲಿದ್ದ ಆಂತರಿಕ ಅಸಮಾಧಾನವನ್ನು […]

DK Shivakumar: ತಮಿಳುನಾಡಿಗೆ ನೀರು ಬಿಡುವುದಾಗಿ ಹೇಳಿದ್ರಾ ಸಿಎಂ ಡಿಕೆ ಶಿವಕುಮಾರ್‌? ಒಂದೊಮ್ಮೆ ಇದನ್ನು ಓದಿ

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಇದರ ವಿವಾದ ದಶಕಗಳಿಂದ ನಡೆಯುತ್ತಲೇ ಇದೆ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹಳೆಯ ಸಮಸ್ಯೆ ಇದಾಗಿದ್ದು, ಈ ವಿವಾದ ನಿಲ್ಲುವಂತೆ ಕಾಣುತ್ತಿಲ್ಲ. ಇನ್ನು ಈ ವಿಚಾರಕ್ಕೆ ಇದೀಗ ಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡ್ಯಾಮ್‌ ತುಂಬಿದ್ರೆ ನೀರು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ವಪಕ್ಷ ಸಭೆಗೆ ಬಿಜೆಪಿ ಟೀಕೆ ವಿಚಾರ ಕುರಿತು ಮಾತನಾಡಿ, ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದೇ ಬಿಜೆಪಿಯವರು. […]

ನನ್ನ ರಕ್ತದಿಂದ ಸ್ವಾತಂತ್ರ್ಯದ ಬೆಳೆ ಬೆಳೆಯಲಿದೆ: ನೆನಪಾಯ್ತು ಶಹೀದ್ ಉಧಮ್ ಸಿಂಗ್ ಹೇಳಿಕೆ-ಯಾಕೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ನಾನು ಹುತಾತ್ಮನಾಗುತ್ತಿದ್ದೇನೆ, ಆದರೆ ನನ್ನ ರಕ್ತದಿಂದ ಸ್ವಾತಂತ್ರ್ಯದ ಬೆಳೆ ಬೆಳೆಯಲಿದೆ” ಎಂದು ಕೊನೆಯ ಉಸಿರಿನವರೆಗೂ “ಇಂಕಲಾಬ್ ಜಿಂದಾಬಾದ್” ಘೋಷಣೆ ಕೂಗಿದ್ದರು. ಇಂದು ಮಹಾನ್ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್ ಅವರ 86ನೇ ಪುಣ್ಯಸ್ಮರಣೆ ದು.ಪ್ರತಿ ವರ್ಷ ಜುಲೈ 31 ರಂದು ಇಡೀ ದೇಶ ಅವರ ತ್ಯಾಗವನ್ನು ಸ್ಮರಿಸಲಾಗುತ್ತದೆ. ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ಭಾರತೀಯರು ಎಂದು ಮರೆಯಲಾಗದ ಕರಾಳ ಘಟನೆಯೊಂದು ನಿಮ್ಮ ಮುಂದೆ ವಿವರಿಸಲಾಗಿದೆ. 1919 ರ ಏಪ್ರಿಲ್ 13. ಅಮೃತಸರದ ಜಲಿಯನ್ ವಾಲಾ ಬಾಗ್‌ನಲ್ಲಿ ವೈಶಾಖಿ ಹಬ್ಬದ […]

ರಾಷ್ಟ್ರೀಯ ಆವಕಾಡೋ ದಿನ”ಪ್ರಕೃತಿಯ ಬೆಣ್ಣೆ ಹಣ್ಣು” ಆರೋಗ್ಯ ಮತ್ತು ಕೃಷಿಗೆ ಹೊಸ ಭರವಸೆ

ಪ್ರತಿ ವರ್ಷ ಜುಲೈ 31 ರಂದು ಆಚರಿಸುವ ರಾಷ್ಟ್ರೀಯ ಆವಕಾಡೋ ದಿನ ಇಂದು. “ಪೋಷಕಾಂಶಗಳ ಗಣಿ, ಪ್ರಕೃತಿಯ ಬೆಣ್ಣೆ ಹಣ್ಣು” ಎಂದು ಕರೆಯುವ ಆವಕಾಡೋ, ಈಗ ಭಾರತದಲ್ಲೂ ಆರೋಗ್ಯ ಪ್ರಜ್ಞೆಯುಳ್ಳ ಜನರ ಮೊದಲ ಆಯ್ಕೆಯಾಗಿದೆ. ಒಮ್ಮೆ “ವಿಲಾಸಿ ಹಣ್ಣು” ಎಂದೇ ಕರೆಯುತ್ತಿದ್ದ ಆವಕಾಡೋ, ಇಂದು ಪ್ರತಿಯೊಬ್ಬರ ಅಡುಗೆ ಮನೆಗೂ ಕಾಲಿಟ್ಟಿದೆ. ಆವಕಾಡೋ ಎಂದರೇನು? : ಆವಕಾಡೋ ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದ ಮೂಲದ ಹಣ್ಣು. ವೈಜ್ಞಾನಿಕ ಹೆಸರು persea americana ಅಮೆರಿಕನ್. ಇದನ್ನು “ಆಲಿಗೇಟರ್ ಪಿಯರ್” ಎಂದೂ […]

ರಾಜ್ಯಾಧ್ಯಂತ ಶಾಲಾ–ಕಾಲೇಜು ಆವರಣಗಳಲ್ಲಿ ಜಂಕ್ ಫುಡ್ ಮಾರಾಟ ನಿಷೇಧ

ಬೆಂಗಳೂರು: ವಿದ್ಯಾರ್ಥಿಗಳಿಗೆ ಸುರಕ್ಷಿತ, ಗುಣಮಟ್ಟಯುತ ಹಾಗೂ ಆರೋಗ್ಯಕರ ಆಹಾರ ಲಭ್ಯವಾಗುವಂತೆ ಮಾಡಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಜುಲೈ 2026ರಲ್ಲಿ ರಾಜ್ಯದ 134 ಶಾಲೆಗಳು ಮತ್ತು ಕಾಲೇಜುಗಳ ಆವರಣ ಹಾಗೂ ಸುತ್ತಮುತ್ತಲಿನ ಆಹಾರ ವ್ಯಾಪಾರ ಕೇಂದ್ರಗಳಲ್ಲಿ ವಿಶೇಷ ಪರಿಶೀಲನಾ ಅಭಿಯಾನ ನಡೆಸಲಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟ, ಸ್ವಚ್ಛತೆ, ನೈರ್ಮಲ್ಯ, ಲೇಬಲಿಂಗ್, ಅವಧಿ ಮೀರಿದ ಉತ್ಪನ್ನಗಳ ಮಾರಾಟ ಹಾಗೂ ಪರವಾನಗಿ/ನೋಂದಣಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಪರಿಶೀಲನೆಯ ವೇಳೆ ಸಂಶಯಾಸ್ಪದವಾಗಿ ಕಂಡುಬಂದ 53 […]

ಕಾವೇರಿ ಜಲ ವಿವಾದ: ಆಗಸ್ಟ್.13ರಂದು ‘ಕರ್ನಾಟಕ ಬಂದ್’- ವಾಟಾಳ್ ನಾಗರಾಜ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆ ಸಂಘರ್ಷ ಮತ್ತೆ ತೀವ್ರಗೊಂಡಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿರುವುದಕ್ಕೆ ರಾಜ್ಯಾದ್ಯಂತ ಶಮನವಿಲ್ಲದ ಆಕ್ರೋಶ ವ್ಯಕ್ತವಾಗಿದೆ. ಈ ಆದೇಶವನ್ನು ಖಂಡಿಸಿ ವಿವಿಧ ಕನ್ನಡಪರ ಮತ್ತು ರೈತ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಆಗಸ್ಟ್ 13 ರಂದು ‘ಕರ್ನಾಟಕ ಬಂದ್‌’ಗೆ ನಿರ್ಧರಿಸಿವೆ. ಆಗಸ್ಟ್ 13 ರಂದು […]

ಕರ್ನಾಟಕ ಬಂದ್ ಮಾಡುವುದರಿಂದ ತಮಿಳುನಾಡಿಗೆ ತೊಂದರೆ ಆಗುವುದಿಲ್ಲ: ಕೇಂದ್ರ ಸಚಿವ HDK

ಹಾಸನ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸದಸ್ಯರು ನವದೆಹಲಿಯಲ್ಲಿ ಎಸಿ ರೂಂನಲ್ಲಿ ಕೂತು ನೀರು ಬಿಡಿ ಎಂದು ಕರ್ನಾಟಕಕ್ಕೆ ಆದೇಶ ನೀಡುವುದು ಸರಿಯಲ್ಲ. ಆಯಾ ರಾಜ್ಯಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿದ ನಂತರ ಆದೇಶ ಹೊರಡಿಸಬೇಕಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3,500 ನೀರನ್ನು ಹರಿಸಬೇಕು ಎಂದು ಕಾವೇರಿ ಪ್ರಾಧಿಕಾರ ಊಹಾತ್ಮಕವಾಗಿ ಆದೇಶ ನೀಡಿದೆ. ಬರುವ ದಿನಗಳಲ್ಲಿ ಕಾವೇರಿ ಕಣಿವೆ ಜಲಾಶಯಗಳಿಗೆ 12 […]

ವಿಶ್ವದಲ್ಲೇ ಮೊದಲ ಬಾರಿಗೆ ಪ್ರತಿಷ್ಠಿತ ಐಎಫ್‌ಇಎಂ ಗೋಲ್ಡ್‌ ಲೆವಲ್‌ ಪ್ರಮಾಣ ಪತ್ರದ ಪಡೆದ ಹೆಗ್ಗಳಿಕೆ ಸ್ಪರ್ಶ್ ಆಸ್ಪತ್ರೆ ಪಾತ್ರ

ಬೆಂಗಳೂರು: ತುರ್ತು ಚಿಕಿತ್ಸಾ ವಿಭಾಗದಲ್ಲಿ ಜಾಗತಿಕ ಮಟ್ಟದ ಅತ್ಯನ್ನತ ಗುಣಮಟ್ಟಗಳ ಮಾನದಂಡ ಹೊಂದಿರುವ ಹಿನ್ನೆಲೆಯಲ್ಲಿ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ವಿಶ್ವದಲ್ಲೇ ಮೊದಲ ಬಾರಿಗೆ ಪ್ರತಿಷ್ಠಿತ ಐಎಫ್‌ಇಎಂ ಗೋಲ್ಡ್‌ ಲೆವಲ್‌ ಪ್ರಮಾಣ ಪತ್ರದ ಗರಿ ಮುಡಿಗೇರಿಸಿಕೊಂಡಿದೆ. ಈ ಮೂಲಕ, ತುರ್ತು ಚಿಕಿತ್ಸಾ ವಿಭಾಗದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ತುರ್ತು ಚಿಕಿತ್ಸೆಯ ಅಂತಾರಾಷ್ಟ್ರೀಯ ಒಕ್ಕೂಟ (ಇಂಟರ್‌ನ್ಯಾಷನಲ್‌ ಫೆಡರೇಷನ್‌ ಫಾರ್‌ ಎಮರ್ಜೆನ್ಸಿ ಮೆಡಿಸಿನ್‌/ಐಎಫ್‌ಇಎಂ) ಈ ಪ್ರಮಾಣಪತ್ರವನ್ನು ನೀಡಿದ್ದು, ಜರ್ಮನಿಯಲ್ಲಿ ಇತ್ತೀಚೆಗೆ ನಡೆದ ತುರ್ತು ಚಿಕಿತ್ಸಾ ವಿಭಾಗದ ಅಂತಾರಾಷ್ಟ್ರೀಯ […]

ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ

ನವದೆಹಲಿ: ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಾರನೇ ದಿನವೇ, ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ತಡೆಯುವ ಮಹತ್ವದ ತಿದ್ದುಪಡಿ ವಿಧೇಯಕಕ್ಕೆ (Anti-Paper Leak Amendment Bill 2026) ರಾಜ್ಯಸಭೆಯೂ ಗುರುವಾರ ಒಪ್ಪಿಗೆ ಸೂಚಿಸಿದೆ. ದೇಶಾದ್ಯಂತ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ ಹಾಗೂ ನೀಟ್ (NEET) ವಿವಾದದ ಬೆನ್ನಲ್ಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ, ಕೇಂದ್ರ ಸರ್ಕಾರವು ಈ ಕಠಿಣ ಕಾನೂನನ್ನು ಜಾರಿಗೆ ತರಲು ತುರ್ತು ಕ್ರಮ ಕೈಗೊಂಡಿದೆ. ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 20 […]