ನನ್ನ ರಕ್ತದಿಂದ ಸ್ವಾತಂತ್ರ್ಯದ ಬೆಳೆ ಬೆಳೆಯಲಿದೆ: ನೆನಪಾಯ್ತು ಶಹೀದ್ ಉಧಮ್ ಸಿಂಗ್ ಹೇಳಿಕೆ-ಯಾಕೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ನಾನು ಹುತಾತ್ಮನಾಗುತ್ತಿದ್ದೇನೆ, ಆದರೆ ನನ್ನ ರಕ್ತದಿಂದ ಸ್ವಾತಂತ್ರ್ಯದ ಬೆಳೆ ಬೆಳೆಯಲಿದೆ” ಎಂದು ಕೊನೆಯ ಉಸಿರಿನವರೆಗೂ “ಇಂಕಲಾಬ್ ಜಿಂದಾಬಾದ್” ಘೋಷಣೆ ಕೂಗಿದ್ದರು. ಇಂದು ಮಹಾನ್ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್ ಅವರ 86ನೇ ಪುಣ್ಯಸ್ಮರಣೆ ದು.ಪ್ರತಿ ವರ್ಷ ಜುಲೈ 31 ರಂದು ಇಡೀ ದೇಶ ಅವರ ತ್ಯಾಗವನ್ನು ಸ್ಮರಿಸಲಾಗುತ್ತದೆ.

ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ಭಾರತೀಯರು ಎಂದು ಮರೆಯಲಾಗದ ಕರಾಳ ಘಟನೆಯೊಂದು ನಿಮ್ಮ ಮುಂದೆ ವಿವರಿಸಲಾಗಿದೆ. 1919 ರ ಏಪ್ರಿಲ್ 13. ಅಮೃತಸರದ ಜಲಿಯನ್ ವಾಲಾ ಬಾಗ್‌ನಲ್ಲಿ ವೈಶಾಖಿ ಹಬ್ಬದ ಸಭೆ ನಡೆಯುತ್ತಿತ್ತು. ಬ್ರಿಟಿಷ್ ಜನರಲ್ ಡಯರ್ ಆದೇಶದಂತೆ ಬ್ರಿಟಿಷ್ ಸೈನ್ಯ ಮನಬಂದಂತೆ ಗುಂಡಿನ ದಾಳಿ ನಡೆಸಿತು. ಸಾವಿರಕ್ಕೂ ಹೆಚ್ಚು ನಿರಾಯುಧ ಭಾರತೀಯರು ಹುತಾತ್ಮರಾದರು. ಜಲಿಯನ್ ವಾಲಾ ಬಾಗ್ ಹತ್ಯಾಖಂಡದಲ್ಲಿ ಗಾಯವಾದ 21 ವರ್ಷದ ಯುವಕ ಸರ್ದಾರ್ ಉಧಮ್ ಸಿಂಗ್ ಗುಂಡು ತಗುಲಿ ಪ್ರಜ್ಞೆ ತಪ್ಪಿ ಬಿದ್ದರು. ಸತ್ತವರ ರಾಶಿಯಲ್ಲಿ ರಕ್ತದಲ್ಲಿ ನೆನೆದು ಮಲಗಿದ್ದ ಆತನ ಕಣ್ಣ ಮುಂದೆ ಸಾವಿರಾರು ಅಮಾಯಕರ ಸಾವು ಕಂಡಿತು. ಆ ದಿನವೇ ಆತ ಪ್ರತಿಜ್ಞೆ ಮಾಡಿದ “ಈ ರಕ್ತಕ್ಕೆ ಪ್ರತೀಕಾರ ತೀರಿಸುತ್ತೇನೆ” ಎಂದು ದೇಶದ ಮೇಲೆ ಆತನು ಅಪಾರ ಪ್ರೀತಿ ಹೊಂದಿದ್ದನು.

21 ವರ್ಷಗಳವರೆಗೂ ಪ್ರತೀಕಾರದ ಯೋಜನೆ ಗಾಯದಿಂದ ಚೇತರಿಸಿಕೊಂಡ ಉಧಮ್ ಸಿಂಗ್ ದೇಶ ಬಿಟ್ಟು ಹೋದರು. ಆಫ್ರಿಕಾ, ಅಮೇರಿಕಾ, ಜರ್ಮನಿ ಸುತ್ತಿದರು. ಕಾರಣ ಆತನ ಗುರಿ ಒಂದೇಯಾಗಿತ್ತು. ಡಯರ್‌ನನ್ನು ಕೊಲ್ಲುವುದು. 1940 ರ ಮಾರ್ಚ್ 13. ಲಂಡನ್‌ನ ಕೇಕ್ಸ್ಟನ್ ಹಾಲ್‌ನಲ್ಲಿ ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿ ಸಭೆ ಇತ್ತು. ಅಲ್ಲಿ ಅತಿಥಿಯಾಗಿ ಬಂದಿದ್ದ ಜನರಲ್ ಡಯರ್‌ನ ಎದೆಯೊಳಗೆ ಉಧಮ್ ಸಿಂಗ್ 6 ಗುಂಡು ಹಾರಿಸಿದರು. ಡಯರ್ ಸ್ಥಳದಲ್ಲೇ ಕುಸಿದು ಬಿದ್ದ. ಬ್ರಿಟಿಷ್ ಪೊಲೀಸರು ಆತನನ್ನು ಬಂಧಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶ “ನಿನ್ನ ಹೆಸರೇನು?” ಎಂದು ಕೇಳಿದಾಗ “ರಾಮ್ ಮೊಹಮ್ಮದ್ ಸಿಂಗ್ ಆಜಾದ್” ಎಂದು ಉತ್ತರಿಸಿದರು. ಇದರ ಅರ್ಥ: ಭಾರತದ ಹಿಂದೂ, ಮುಸ್ಲಿಂ, ಸಿಖ್ ಎಲ್ಲರೂ ಒಂದೇ ಎಂದು

1940 ರ ಜುಲೈ 31 ರಂದು ಲಂಡನ್‌ನ ಪೆಂಟನ್ ವಿಲ್ಲೆ ಜೈಲಿನಲ್ಲಿ ಉಧಮ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು. ಕೊನೆಯವರೆಗೂ ಆತನ ಮುಖದಲ್ಲಿ ಭಯವಿರಲಿಲ್ಲ. “ನಾನು ಭಾರತದ ಮಗ. ನನ್ನ ಕೆಲಸ ಮುಗಿಸಿದೆ” ಎಂದು ನಗುತ್ತಲೇ ಗಲ್ಲು ಹತ್ತಿದರು.ಆ ದೇಶಪ್ರೇಮಿಯ ಚೀತಾಭಸ್ಮವನ್ನು ಮೂವತ್ತುಮೂರು ವರ್ಷಗಳ ನಂತರ 1974 ರಲ್ಲಿ ಭಾರತಕ್ಕೆ ತರಲಾಯಿತು. ಇಂದು ಪಂಜಾಬ್‌ನ ಸುನಾಮ್‌ನಲ್ಲಿ ಆತನ ಸಮಾಧಿ ಇದೆ. ಉಧಮ್ ಸಿಂಗ್ ನಮಗೆ ಕೊಟ್ಟ ಪಾಠವೇ ಸ್ವಾಭಿಮಾನ. ತನ್ನ ನೆಲದ ಅವಮಾನವನ್ನು ಸಹಿಸದ ಛಲ ಮತ್ತು ಸಾಮರಸ್ಯ ರಾಮ್-ಮೊಹಮ್ಮದ್-ಸಿಂಗ್ ಎಂಬ ಹೆಸರಿನಲ್ಲಿ ಧರ್ಮಾತೀತ ಭಾರತದ ಕನಸು. ಅವರ ತ್ಯಾಗ ವೈಯಕ್ತಿಕ ಜೀವನ, ಸುಖ ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ಜೀವನ ಸಮರ್ಪಣೆ.

ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ ಹುಲಿಯಂತೆ, ಬೋಸ್‌ರ ಐಎನ್‌ಎ ಹುಲಿಯಂತೆ, ಉಧಮ್ ಸಿಂಗ್ ಪ್ರತೀಕಾರದ ಹುಲಿಯಾಗಿದ್ದರು. ಸರ್ದಾರ್ ಉಧಮ್ ಸಿಂಗ್ ಕೇವಲ ಒಬ್ಬ ಕ್ರಾಂತಿಕಾರಿಯಲ್ಲ. ಅವರು ದೇಶಪ್ರೇಮಿಗಳಿಗೆ ಒಂದು ಸಂದೇಶ. “ಅನ್ಯಾಯವನ್ನು ಸಹಿಸುವುದು ಸಹ ಮಹಾ ಪಾಪ” ಎಂಬ ಸಂದೇಶದಿಂದ ಯುವ ಸ್ವಾತಂತ್ರ್ಯಹೋರಾಟಗಾರರೂ ಕೂಡ ಉಧಮ್ ಸಿಂಗ್‌ನಿಂದ ಪ್ರೇರಣೆ ಪಡೆದಿದ್ದರು.

ಇನ್ನು ಈ ವಿಚಾರವಾಗಿ ಶ್ರೀರಂಗಪಟ್ಟಣದ ಸಮರ್ಪಣ ಟ್ರಸ್ಟ್ ವತಿಯಿಂದ ಪ್ರತೀಕರಾದ ಪ್ರತೀಕ ಹುತಾತ್ಮ ಉಧಮ್ ಸಿಂಗ್ ರವರ ಪುಣ್ಯಸ್ಮರಣೆ ಮಾಡಿ,ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಕೆ ಎಸ್ ಜಯಶಂಕರ್ ಇಂದು ದೇಶದ ಯುವ ಜನತೆ ಉಧಮ್ ಸಿಂಗ್‌ನಂತಹವರು 21 ವರ್ಷ ಕಾದು ಪ್ರತೀಕಾರ ತೀರಿಸಿದ ಕಥೆ ನೆನಪಿಸಿಕೊಳ್ಳಬೇಕು. ಇಂತ ದೇಶಪ್ರೇಮಿಯ ಪುಣ್ಯಸ್ಮರಣೆಯಂದು ಭಾರತೀಯರಾದ ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ದೇಶದ ಗೌರವಕ್ಕೆ ಚ್ಯುತಿಯಾದಾಗ ಮೌನವಾಗುವುದಿಲ್ಲ.ಎಂದು ಹುತಾತ್ಮ ಉಧಮ್ ಸಿಂಗ್ ರನ್ನು ಹೃತ್ಪೂರ್ವಕ ಸ್ಮರಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others