ಸಿವಿಲ್ ಪೊಲೀಸ್ ಪರೀಕ್ಷೆ: ಕಲ್ಯಾಣ ಅಭ್ಯರ್ಥಿಗಳ ಸಮಯ ಬದಲಿಸಿದ ಕೆಇಎ

ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಆಗಸ್ಟ್ 2ರಂದು ನಡೆಯುವ ಲಿಖಿತ ಪರೀಕ್ಷೆಯ ಸಮಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬದಲಾವಣೆ ಮಾಡಿದೆ. ಈ ಮೊದಲು ನಿರ್ಧರಿಸಿದಂತೆ ಮಧ್ಯಾಹ್ನ 2.30ರ ಬದಲಿಗೆ ಸಂಜೆ 4 ಗಂಟೆಗೆ ಪರೀಕ್ಷೆ ಆರಂಭವಾಗಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ. ಕೆಲ ಅಭ್ಯರ್ಥಿಗಳು, ಮಧ್ಯಾಹ್ನದ ಪರೀಕ್ಷಾ ಕೇಂದ್ರಗಳು ಬೆಳಗಿನ ಪರೀಕ್ಷಾ ಕೇಂದ್ರದಿಂದ ದೂರ ಇದ್ದು ತೆರಳುವುದಕ್ಕೆ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ […]
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಮೇಲ್ಮನವಿಗೆ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್

ನವದೆಹಲಿ : “ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಅಡ್ವೊಕೇಟ್ ಜನರಲ್, ಕಾನೂನು ತಜ್ಞರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದ್ದು, ಮೇಲ್ಮನವಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ತಮಿಳುನಾಡಿಗೆ ನೀರು ಹರಿಸುವ […]
ಬೆಂಗಳೂರಲ್ಲಿ 5ನೇ ಬಾರಿಗೆ ಚಿರತೆ ಪ್ರತ್ಯಕ್ಷ, ಬೆಚ್ಚಿ ಬಿದ್ದ ಜನರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಬೆಳಗಿನ ಜಾವ ಮತ್ತೆ ಚಿರತೆಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬ್ಯಾಡರಹಳ್ಳಿಯ ಭಾರತ್ ನಗರ ಪ್ರದೇಶದಲ್ಲಿ ಇಂದು ಬೆಳಗಿನ ಜಾವ 3.27ರ ಸುಮಾರಿಗೆ ಚಿರತೆಯೊಂದು ಸೈಲೆಂಟ್ ಆಗಿ ಓಡಾಡಿದೆ. ಸ್ಥಳೀಯ ನಿವಾಸಿಯೊಬ್ಬರ ಮನೆಯ ಮುಂಭಾಗ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಚಿರತೆಯ ಚಲನವಲನದ ಭಯಾನಕ ದೃಶ್ಯಗಳು ಹೈಲೈಟ್ ಆಗಿ ಸೆರೆಯಾಗಿವೆ. ಒಂದೇ ತಿಂಗಳಲ್ಲಿ 5ನೇ ಬಾರಿ ಪ್ರತ್ಯಕ್ಷ! ಸ್ಥಳೀಯರ ಪ್ರಕಾರ, […]
ಲೋಕಸಭೆಯಲ್ಲಿ ‘ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ – 2026’ ಅಂಗೀಕಾರ!

ನವದೆಹಲಿ: ವಿಪಕ್ಷಗಳ ಕಲಾಪ ತಡೆ ಹಾಗೂ ಭಾರಿ ಹಂಗಾಮದ ನಡುವೆಯೇ ಲೋಕಸಭೆಯಲ್ಲಿ ಬುಧವಾರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ – 2026’ (Public Examination – Prevention of Unfair Means Amendment Bill, 2026) ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ. ಕಳೆದ ಜುಲೈ 20 ರಂದು ನವದೆಹಲಿಯ ಜಂತರ್ ಮಂತರ್‌ನಿಂದ ನಡೆದ ‘ಸಂಸದ್ ಚಲೋ’ ಜಾಗೃತಿ ಮಾರ್ಚ್ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ (Pellet Gun) ಪ್ರಹಾರ ನಡೆಸಲು ಕೇಂದ್ರ ಗೃಹ […]
ಕೆಲಸದ ಸಮಯದಲ್ಲಿ ಪಾರ್ಟಿ ಮಾಡಿದ್ದ PDO, ಕಾರ್ಯದರ್ಶಿ, SDA ಸಸ್ಪೆಂಡ್: ಸಚಿವ ಈಶ್ವರ್ ಖಂಡ್ರೆ ಆದೇಶ

ಬೆಂಗಳೂರು: ಕೆಲಸದ ಅವಧಿಯಲ್ಲಿ ಗ್ರಾ.ಪಂ. ಅಧಿಕಾರಿ ಮತ್ತು ಸಿಬ್ಬಂದಿ ಸಿದ್ದರಬೆಟ್ಟದ ತಪ್ಪಲಲ್ಲಿ ಮದ್ಯ ಸಹಿತ ಪಾರ್ಟಿ ಮಾಡಿದ ಬಗ್ಗೆ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿ, ಇಬ್ಬರು ಕಾರ್ಯದರ್ಶಿ ಮತ್ತು ಒಬ್ಬ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಶುಕ್ರವಾರ (ಜು.24ರಂದು) ಸಂಜೆ ಸಿದ್ದರಬೆಟ್ಟದ ಬಳಿ ಮದ್ಯ, ಮಾಂಸ ಸೇವಿಸಿ ಮೋಜು ಮಸ್ತಿ […]
ಯುವಸಮೂಹದ ಧ್ವನಿಯನ್ನು ತಳ್ಳಿಹಾಕದೇ ಸರ್ಕಾರ ಆಲಿಸಬೇಕು: ರಾಹುಲ್ ಗಾಂಧಿ

ನವದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆ ಯಾವುದೇ ಕೋಪ ಅಥವಾ ಹಿಂದೆಯಲ್ಲ, ಅದು ʻಭಾರತದ ಯುವಜನತೆಯ ಭರವಸೆಯ ಅಭಿವ್ಯಕ್ತಿʼ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು. ಲೋಕಸಭೆಯಲ್ಲಿ ʻಸಾರ್ವಜನಿಕ ಪರೀಕ್ಷೆಗಳು ತಿದ್ದುಪಡಿ ಮಸೂದೆ, 2026ʼರ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು, ತ್ಮಮ ಆತಂಕ, ದುಗುಡವನ್ನು ಅಭಿವ್ಯಕ್ತಪಡಿಸಲು ಯುವ ಸಮೂಹ ಬೀದಿಗಿಳಿದಿರುವುದು ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಿದೆ. ನಮ್ಮ ದೇಶದ ಭವಿಷ್ಯವಾದ ಯುವಜನರು ಬೀದಿಗಿಳಿದು ಹೋರಾಟ ಮಾಡಿದ್ದು ನೋಡಿ ನಿಜಕ್ಕೂ ನನಗೆ ಅಪಾರ ಸಂತೋಷವಾಯಿತು, ಭರವಸೆಯೂ […]
B.Y Vijayendra: ಕಾವೇರಿ ನದಿ ನೀರಿನ ವಿಚಾರದಲ್ಲಿ ಸಿಎಂ ಡಿ.ಕೆ.ಶಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ- ಬಿವೈವಿ

ಬೆಂಗಳೂರು: ಮುಂದಿನ 2028ರ ಚುನಾವಣೆಯಲ್ಲಿ ಕೈ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸಿದ್ದರಾಮಯ್ಯನವರ ನಿರ್ಧಾರದಿಂದ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿದೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ ಎಂದರು. ಕಾವೇರಿ ಕೊಳ್ಳದ ರೈತರು ಮಳೆಯ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಸಿಡಬ್ಲ್ಯುಆರ್‍ಸಿ ಸೂಚನೆಗೂ ಮೊದಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದೆ. ಸಿಡಬ್ಲ್ಯುಆರ್‍ಸಿ ತೀರ್ಪಿನ ಕಾರಣ ರಾಜ್ಯವು ಹೆಚ್ಚು ನೀರನ್ನು […]
G Parameshwar:ನಾವು ಅಕ್ಕಪಕ್ಕದ ರಾಜ್ಯಗಳು ಏನು ಜಗಳ ಆಡ್ಕೋಬೇಕಾ? ಯಾರೂ ಹೊಂದಾಣಿಕೆಯಲ್ಲಿ ಹೋಗಬಾರದಾ? – ಪರಮೇಶ್ವರ್ ಕಿಡಿ

ಬೆಂಗಳೂರು: ನಾವು ಅಕ್ಕಪಕ್ಕದ ರಾಜ್ಯಗಳು ಏನು ಜಗಳ ಆಡ್ಕೋಬೇಕಾ? ಯಾರೂ ಹೊಂದಾಣಿಕೆಯಲ್ಲಿ ಹೋಗಬಾರದಾ? ಎಂದು ಡಿಸಿಎಂ ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ. ಸಿಎಂ ವಿಜಯ್-ಡಿಕೆಶಿ ಭೇಟಿಗೆ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ. ಎರಡೂ ರಾಜ್ಯಗಳ ಸಿಎಂ ಒಂದಷ್ಟು ವಿಚಾರದ ಬಗ್ಗೆ ಚರ್ಚೆ ಮಾಡ್ತಾರೆ. ಟಿಬಿ ಡ್ಯಾಮ್ ಕ್ರಸ್ಟ್ ಗೇಟ್ ಉದ್ಘಾಟನೆಗೆ ಮೂರು ರಾಜ್ಯಗಳ ಸಿಎಂಗಳು ಬಂದಿದ್ರು. ನಾವು ಅಕ್ಕಪಕ್ಕದ ರಾಜ್ಯಗಳು ಏನು ಜಗಳ ಆಡ್ಕೋಬೇಕಾ? ಯಾರೂ ಹೊಂದಾಣಿಕೆಯಲ್ಲಿ ಹೋಗಬಾರದಾ? ರಾಜ್ಯಗಳು ಜಗಳ […]
Fuel Price : ಇವತ್ತಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ ಇದನ್ನು ಓದಿ

ಹಲವು ದಿನಗಳಿಂದ ಶಾಂತವಾಗಿದ್ದ ಹಾರ್ಮುಜ್ ಜಲಸಂಧಿ ಮತ್ತೆ ಕಿಡಿ ಹತ್ತಿಕೊಂಡಿದೆ. ಇದರ ಪರಿಣಾಮ ಪ್ರತಿಯೊಂದು ದೇಶದ ಮೇಲೆ ಬೀಳುತ್ತಿದೆ. ಇರಾನ್ ಮತ್ತು ಅಮೆರಿಕ ನಡುವೆ ಮತ್ತೊಮ್ಮೆ ಯುದ್ಧದ ಕಾವು ಉಂಟಾಗಿದ್ದು, ಇದರ ಪರಿಣಾಮ ಕಚ್ಚಾ ತೈಲ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.ಈ ವಿಚಾರ ವಾಹನ ಸವಾರರಿಗೆ ಶಾಕ್ ಉಂಟು ಮಾಡಿದೆ. ಇಂದು ಹೆಚ್ಚಿನ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪೈಸೆ ಲೆಕ್ಕದಲ್ಲಿ ಏರಿಕೆ ಇಳಿಕೆ ಕಂಡು ಬಂದಿದೆ, ಯಾವುದೇ ಪ್ರಮುಖ ಬದಲಾವಣೆಗಳನ್ನು ಘೋಷಿಸಲಾಗಿಲ್ಲ. ಆದರೆ ಕೆಲವೊಂದು […]
ಗುರು ಪೂರ್ಣಿಮೆಯ ಮಹತ್ವ- ಪೂಜಾ ವಿಧಾನ, ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಸಾಕಷ್ಟು ಹಬ್ಬಗಳಲ್ಲಿ ಗುರು ಪೂರ್ಣಿಮಾ ಅತ್ಯಂತ ಮಹತ್ತರವಾದ ಅರ್ಥ ಹೊಂದಿರುವ ಪವಿತ್ರ ದಿನ. ‘ಗುರು’ ಮತ್ತು ಪೂರ್ಣಿಮಾ ಎಂಬ ಎರಡು ಶಬ್ದಗಳ ಸಮ್ಮಿಲನವೇ ಈ ಹೆಸರು. ‘ಗು’ ಎಂದರೆ ಅಂಧಕಾರ ಅಥವಾ ಅಜ್ಞಾನ, ‘ರು’ ಎಂದರೆ ಅದನ್ನು ಹೋಗಲಾಡಿಸುವವನು. ಅಂದರೆ, ನಮ್ಮಲ್ಲಿರುವ ಅಜ್ಞಾನ ದೂರಮಾಡಿ ಜ್ಞಾನದ ಬೆಳಕಿನತ್ತ ಮುನ್ನಡೆಸುವ ಮಹಾನ್ ಚೇತನವೇ ಗುರು. ಇದೆಲ್ಲಾ ಹೇಳುವುದಕ್ಕೆ ಪ್ರಮುಕ ಕಾರಣ ಇವತ್ತು ಗುರು ಪೂರ್ಣಿಮೆ ಹಾಗಾದ್ರೆ ಇದರ ಮಹತ್ವ ಇಲ್ಲಿದೆ ನೋಡಿ ಈ ದಿನವು ನಮಗೆ ಶಿಕ್ಷಣ ನೀಡಿದ […]