ಗಂಡನಿಗೆ ದೋಸೆ ಮಾಡಿಕೊಡಿ ಅನ್ನೋದು ಅಪರಾಧವೇ?: ಸೊಸೆಗೆ ಹೈಕೋರ್ಟ್ ತರಾಟೆ!

ಬೆಂಗಳೂರು: ಪತಿಗೆ ಬಿಸಿಯಾದ ದೋಸೆ ಹಾಗೂ ರಾಗಿ ಮುದ್ದೆ ಮಾಡಿ ಕೊಡುವಂತೆ ಅತ್ತೆ ಕೇಳುವುದು ಅಥವಾ ಕಿರುಕುಳದ ನೆಪದಲ್ಲಿ ತಲೆಕೂದಲು ಉದುರುವುದು ಎಂದಿಗೂ ವರದಕ್ಷಿಣೆ ಕಿರುಕುಳ ಎನಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬರ ವೈಯಕ್ತಿಕ ದೂರುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ‘ಕ್ರೌರ್ಯ’ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೊಸೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ತಮ್ಮ ಮೇಲಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಅತ್ತೆ ಮತ್ತು ಅವರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ […]

ಕೆಪಿಎಸ್‌ಸಿ ಪರೀಕ್ಷೆಗಳಲ್ಲಿನ ಅಕ್ರಮ ಆರೋಪಗಳ ತನಿಖೆ ಸಿಐಡಿಗೆ ವರ್ಗಾವಣೆ: ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಬದ್ಧ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಂಬಂಧ ಸಾರ್ವಜನಿಕ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಆರೋಪಗಳ ಕುರಿತು ದಾಖಲಾಗಿರುವ ಎರಡು ಪ್ರಕರಣಗಳ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವರ್ಗಾಯಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ಭ್ರಷ್ಟಾಚಾರ ಮತ್ತು ನೇಮಕಾತಿಯಲ್ಲಿನ ಅನ್ಯಾಯದ ವಿಧಾನಗಳ ತಡೆ) ಅಧಿನಿಯಮ, 2023ರ ಕಲಂ 10ರಡಿ ದಾಖಲಾಗಿರುವ ಎರಡು ಪ್ರಕರಣಗಳ ಕುರಿತು ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಸಮಗ್ರ […]

Zameer Ahmed Khan : ನನ್ನ ವಿರುದ್ಧ ಪಿತೂರಿ ಮಾಡಿದವರಿಗೂ ಒಳ್ಳೆಯದಾಗಲಿ, ಅವರೂ ಚೆನ್ನಾಗಿರಲಿ- ಜಮೀರ್‌

ಬೆಂಗಳೂರು: ನನ್ನ ವಿರುದ್ಧ ಪಿತೂರಿ ಮಾಡಿದವರಿಗೂ ಒಳ್ಳೆಯದಾಗಲಿ, ಅವರೂ ಚೆನ್ನಾಗಿರಲಿ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಾವಣಗೆರೆ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ಜೋರಾಗಿ ನಡೆಯುತ್ತಿರುವಂತೆಯೇ ರಾಜಕೀಯ ವಲಯದಲ್ಲಿ ಅತಿದೊಡ್ಡ ಬೆಳವಣಿಗೆಯೊಂದು ನಡೆದಿದ್ದು, ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯದ ಪ್ರಮುಖ ನಾಯಕರು ಕ್ಷಮೆಯಾಚಿಸಿದ್ದಾರೆ. ನಾನು […]

GBA ವ್ಯಾಪ್ತಿಯಲ್ಲಿ ಖಾಲಿ ನಿವೇಶನ‌ ಮಾಲೀಕರು ಸ್ವತಃ ಸ್ವಚ್ಛಗೊಳಿಸದಿದ್ದರೆ 25 ರಿಂದ 1 ಲಕ್ಷ ದಂಡ : ಮಹೇಶ್ವರ್ ರಾವ್ ವಾರ್ನಿಂಗ್

ಬೆಂಗಳೂರು : ಬೆಂಗಳೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವಾಗಿರಿಸುವ ಉದ್ದೇಶದಿಂದ ಆಗಸ್ಟ್-2026 ಮಾಹೆಯಲ್ಲಿ “ತ್ಯಾಜ್ಯದಿಂದ ಸ್ವಾತಂತ್ರ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಅಭಿಯಾನದಡಿಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಆಡಳಿತ ಹೊಂದಿರುವ ಎಲ್ಲಾ ನಗರ ಪಾಲಿಕೆಗಳು ಹಾಗೂ ಇತರೇ ಸಂಸ್ಥೆಗಳ ವತಿಯಿಂದ ನಗರದ ರಸ್ತೆಗಳಲ್ಲಿ ಕಪ್ಪುಚುಕ್ಕೆಗಳು, ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ, ಮರದ ಕೊಂಬೆಗಳು, ವಿದ್ಯುತ್ ಕಂಬಗಳು, ಪೈಪುಗಳನ್ನು ಸಾಮೂಹಿಕವಾಗಿ ತೆರವುಗೊಳಿಸಲು ಉದ್ದೇಶಿಸಲಾಗಿದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರ ಉಪವಿಧಿ 18(1)(ಬಿ) ರನ್ವಯ ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ […]

ಮುಲ್ಲಾ ಹೇಳಿಕೆ ವಿವಾದ: ಯಾವುದೇ ಭಾಷಣ ಮಾಡುವ ಮುನ್ನ ಯೋಚಿಸಿ ಮಾತನಾಡಬೇಕು- ಸಿ.ಟಿ ರವಿಗೆ ಮುಸ್ಲಿಂ ಮುಖಂಡರ ಎಚ್ಚರಿಕೆ

ಚಿಕ್ಕಮಗಳೂರು, ಜುಲೈ 28: ‘ಮುಲ್ಲಾಗಳಿಗೆ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ’ ಎಂಬ ಬಿಜೆಪಿ ಎಂಎಲ್​​ಸಿ ಸಿಟಿ ರವಿ ಹೇಳಿಕೆಯನ್ನು ಇದೀಗ ಮುಸ್ಲಿಂ ನಾಯಕರು ಖಂಡಿಸಿ,ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರವಾಗಿ, ಚಿಕ್ಕಮಗಳೂರಿನಲ್ಲಿ ಎಸ್.ಡಿ.ಪಿ.ಐ. ಮುಖಂಡ ಅತೀಕ್ ಮಾತನಾಡಿ, ಮುಸಲ್ಮಾನರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಸಿಟಿ ರವಿಗೆ ಆಗ್ರಹಿಸಿದ್ದಾರೆ. ದೇಶದ ಅಭಿವೃದ್ಧಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಬಿಳಿ ಕೂದಲಿನ ರಾಜಕೀಯ ಈಗ ನಡೆಯುವುದಿಲ್ಲ ಎಂದು ತಿಳಿಸಿದರು. ಮುಲ್ಲಾಗಳು ಯಾರೂ ಅನಕ್ಷರಸ್ಥರಲ್ಲ […]

ಖಡಕ್‌ ರೊಟ್ಟಿ, ಎಣ್ಣೆಗಾಯಿಪಲ್ಯ ತಿಂದು ನೋಡ್ರಿ, ಇದು ಉತ್ತರ ಕರ್ನಾಟಕದ ಭಕ್ಷ್ಯ ಭೋಜನ-ಹಾಗಾದ್ರೆ ಅಡುಗೆ ತಯಾರಿ ವಿಧಾನ ಇಲ್ಲಿದೆ ನೋಡಿ

ಉತ್ತರ ಕರ್ನಾಟಕದ ಊಟ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರ ಅಚ್ಚುಮೆಚ್ಚಿನ ಊಟ ಅಂದ್ರೆ ಉತ್ತರಕರ್ನಾಟಕದ ಭೋಜನ ಅಲ್ಲವೇ? ಹೌದು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟಕ್ಕಾಗಿ ಜನ ಬಕಪಕ್ಷಿಯಂತೆ ಹುಡುಕಾಟ ನಡೆಸುತ್ತಾರೆ. ಬೆಂಗಳೂರಿನಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಉತ್ತರ ಕರ್ನಾಟಕದ ಊಟಕ್ಕೆ ಮಹತ್ತರ ಮೌಲ್ಯವಿದೆ. ಈ ಊಟದಲ್ಲಿ ಮೆಚ್ಚುಗೆಯಾಗುವುದು ಖಡಕ್‌ ರೊಟ್ಟಿ, ಎಣ್ಣೆಗಾಯಿಪಲ್ಯ ಇದರಲ್ಲಿ ಸ್ವಲ್ಪ ಮೋಸರು ತಿಂದ್ರೆ ಸ್ವರ್ಗ ಹತ್ತಿರವಿದ್ದಂತೆ ಎಂದು ಫುಡ್‌ ಪ್ರೀಯರು ಹೇಳುತ್ತಲೇ ಇರುತ್ತಾರೆ. ಹಾಗಾದ್ರೆ ರೊಟ್ಟಿ ಮಾಡುವುದು ಹೇಗೆ ಎಂದು ನಾವು ಮೋದಲು […]

ಅಬ್ದುಲ್ ಕಲಾಂ ಮತ್ತು ಶ್ರೀರಂಗಪಟ್ಟಣ “ಕನಸಿನ ನಗರದ ಬಗ್ಗೆ ವಿಜ್ಞಾನಿಯ ಮಾತು” : ಇಲ್ಲಿದೆ ನೋಡಿ ಮಾಹಿತಿ

“ನೀವು ಸಣ್ಣ ಊರಿನಿಂದ ಬಂದರೂ ದೊಡ್ಡ ಕನಸು ಕಾಣಬಹುದು” ಎಂದು ದೇಶದ ಯುವಕರಿಗೆ ಸ್ಫೂರ್ತಿ ನೀಡಿದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ಜೀವನದಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವುಗಳಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕೂಡ ಒಂದಾಗಿದೆ. ವಿಜ್ಞಾನಿ, ಶಿಕ್ಷಕ, ಮಾಜಿ ರಾಷ್ಟ್ರಪತಿ ಮತ್ತು “ಮಿಸೈಲ್ ಮ್ಯಾನ್” ಎಂದೇ ಹೆಸರಾದ ಕಲಾಂ ಅವರು ಶ್ರೀರಂಗಪಟ್ಟಣದ ಇತಿಹಾಸ, ಟಿಪ್ಪು ಸುಲ್ತಾನರ ದೂರದೃಷ್ಟಿ ಮತ್ತು ಭಾರತದ ವೈಜ್ಞಾನಿಕ ಪರಂಪರೆಯ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಟಿಪ್ಪು […]

ಸಿಎಂ ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ : ರಾಜ್ಯಕ್ಕಾಗಿ ಪಕ್ಷಾತೀತವಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ

ನವದೆಹಲಿ: ಕರ್ನಾಟಕದ ಅಭಿವೃದ್ಧಿಗಾಗಿ ಸರ್ಕಾರ ಮುಂದಾಗಿದ್ದು , ಈ ವಿಚಾರವಾಗಿ ಸಿಎಂ ಡಿಕೆಶಿ ಪ್ರತಿಕ್ರಿಯೆ ನೀಡುತ್ತಲೇ ಇರುತ್ತಾರೆ. ಮೊನ್ನೆ ಅಷ್ಟೇ ದೇಹಲಿಯಲ್ಲಿ ಕಾಕ್ರೋಜ್‌ ಜನತಾ ಪಾರ್ಟಿ ಪ್ರತಿಭಟನೆ ಮಾಡಿತ್ತು, ಧರಣಿ ಮೂಲಕ ತಮ್ಮ ಬೇಡಿಕೆಗಳನ್ನು ಯುವಕರು ಪೂರೈಸಿಕೊಂಡರು. ಈ ಪ್ರತಿಭಟನೆಯಲ್ಲಿ ಕಾಂಗ್ರೇಸ್‌ ಪಕ್ಷ ಕೈ ಸೇರಿಸಿತ್ತು, ನಂತರ ಇದರ ಬೆನ್ನಲ್ಲೇ, ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕರ್ನಾಟಕದ ಎಲ್ಲಾ ಸಂಸದರ ಸಭೆ ನಡೆಸಿದ್ದರು ಆದರೇ ಇದೀಗ ಸಭೆ ಅಂತ್ಯವಾಗಿದೆ. ಸಭೆಯ ಅಂತ್ಯಯ ನಂತರ […]

ಬೆಂಗಳೂರಲ್ಲಿ ನಮ್ಮ ಮೆಟ್ರೋ ರೈಲು ಹಳಿಯ ಮೇಲೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

ಬೆಂಗಳೂರು: ರಾಜಧಾನಿಯ ‘ನಮ್ಮ ಮೆಟ್ರೋ’ ಹಳದಿ ಮಾರ್ಗದಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದ್ದು, ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಹಳಿಗೆ ಜಿಗಿದ ಪ್ರಯಾಣಿಕನೊಬ್ಬ ಮೆಟ್ರೋಗೆ ಸಿಲುಕಿ ಕ್ರೂರವಾಗಿ ಸಾವನ್ನಪ್ಪಿದ್ದಾನೆ. ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮಸಂದ್ರ ಕಡೆಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದ (Yellow Line) ಹುಸ್ಕೂರು ಮೆಟ್ರೋ ನಿಲ್ದಾಣದಲ್ಲಿ ಈ ಭೀಕರ ದುರಂತ ಸಂಭವಿಸಿದೆ. ವಿದ್ಯುತ್ ಸ್ಥಗಿತಗೊಳಿಸಿದರೂ ತಪ್ಪದ ಸಾವಿನ ಅಟ್ಟಹಾಸ ರೈಲು ಪ್ಲಾಟ್‌ಫಾರ್ಮ್‌ಗೆ ಧಾವಿಸುತ್ತಿದ್ದಂತೆಯೇ ಅಲ್ಲೇ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರನೆ ಹಳಿಗೆ ಜಿಗಿದಿದ್ದಾನೆ. ಇದನ್ನು ಕಂಡ ಮೆಟ್ರೋ ಭದ್ರತಾ […]

KPSC ಹಗರಣದ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಕೆಪಿಎಸ್‍ಸಿಯ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ₹80 ಲಕ್ಷದವರೆಗೆ ಲಂಚ ಪಡೆದಿರುವ ಗಂಭೀರ ಆರೋಪಗಳಿದ್ದು, ಸಿಬಿಐ ಅಥವಾ ಕರ್ನಾಟಕ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ನಿಯೋಗವು ಒತ್ತಾಯಿಸಿದೆ. ಈ ಸಂಬಂಧ ಮನವಿ ಸಲ್ಲಿಸಿ ಆಗ್ರಹಿಸಿದೆ. ಈ ಹಗರಣವು ಕರ್ನಾಟಕದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ನಂಬಿಕೆಗೆ ದೊಡ್ಡ ಆಘಾತ ನೀಡಿವೆ. ಇಂತಹ ಸಂದರ್ಭದಲ್ಲಿ ಕೆಪಿಎಸ್‍ಸಿಯೇ ತನ್ನ ವಿರುದ್ಧದ ಆರೋಪಗಳನ್ನು ಆಂತರಿಕವಾಗಿ ತನಿಖೆ ನಡೆಸುವುದರಿಂದ ಸತ್ಯ ಹೊರಬರುವುದಿಲ್ಲ; ಸಾರ್ವಜನಿಕರ ವಿಶ್ವಾಸವೂ ಮೂಡುವುದಿಲ್ಲ ಎಂದು ಮನವಿ ತಿಳಿಸಿದೆ. […]