ರಾಜಕೋಟ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಷ: ತಪ್ಪಿದ ಭಾರೀ ಅನಾಹುತ

ರಾಜಕೋಟ್: ದುಬೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ (IndiGo) ಸಂಸ್ಥೆಯ ಪ್ರಯಾಣಿಕರ ವಿಮಾನದಲ್ಲಿ ಹಠಾತ್ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸೋಮವಾರ ಗುಜರಾತ್‌ನ ರಾಜಕೋಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತರಲಾಗಿದ್ದು, ಸಂಭಾವ್ಯ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ತುರ್ತು ಲ್ಯಾಂಡಿಂಗ್ ಮಾಡಿದ್ದು ಹೇಗೆ? ವಿಮಾನ ಪ್ರಯಾಣಿಸುತ್ತಿದ್ದಾಗ ಪೈಲಟ್ ಕಂಟ್ರೋಲ್ ರೂಂನಲ್ಲಿ ಹೊಗೆಯನ್ನು ಗಮನಿಸಿದ್ದಾರೆ. ತಕ್ಷಣವೇ ಜಾಗರೂಕರಾದ ಪೈಲಟ್ ರಾಜಕೋಟ್ ಏರ್ ಟ್ರಾಫಿಕ್ ಕಂಟ್ರೋಲ್ (ATC) […]

ಪೇಪರ್ ಲೀಕ್ ತಡೆಗೆ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕ 2026’ ಲೋಕಸಭೆಯಲ್ಲಿ ಮಂಡನೆ: ವಿಪಕ್ಷಗಳ ತೀವ್ರ ಗದ್ದಲ!

ನವದೆಹಲಿ: ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ‘ನೀಟ್’ (NEET) ಪರೀಕ್ಷೆಯ ಪೇಪರ್ ಲೀಕ್ ಪ್ರಕರಣದ ಬೆನ್ನಲ್ಲೇ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಸೋಮವಾರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ – 2026’ ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ಕಳೆದ ವಾರ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ (Pellet Guns) ಬಳಸಿದ್ದಕ್ಕೆ ಗೃಹ ಸಚಿವ ಅಮಿತ್ ಶಾ ಹೊಣೆ ಹೊರಬೇಕೆಂದು ಆಗ್ರಹಿಸಿ ವಿರೋಧ ಪಕ್ಷಗಳ ಸಂಸದರು ನಡೆಸಿದ ತೀವ್ರ ಗದ್ದಲ ಮತ್ತು ಕೋಲಾಹಲದ […]

ಗ್ರಾಮೀಣ ಯುವಜನತೆಗೆ AI ತಂತ್ರಜ್ಞಾನದ ಸ್ಪರ್ಶ: ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

​ಚಿಕ್ಕಬಳ್ಳಾಪುರ : ಕೃತಕ ಬುದ್ಧಿಮತ್ತೆ (Artificial Intelligence – AI) ರೂಪದ ಆಧುನಿಕ ತಂತ್ರಜ್ಞಾನವು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಪ್ರತಿಯೊಬ್ಬ ಪ್ರತಿಭಾವಂತ ಯುವಕ-ಯುವತಿಯರಿಗೂ ತಲುಪಿದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಐ.ಎ.ಎಸ್. ತಿಳಿಸಿದರು. ​ಅವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ‘ಸತ್ಯಸಾಯಿ ಗ್ರಾಮ’ದಲ್ಲಿ ಏರ್ಪಡಿಸಲಾಗಿದ್ದ ‘ರೂರಲ್ ಶೋರ್ಸ್ AI ಕೌಶಲ್ಯ ಮತ್ತು ಅನುಭವ ಕೇಂದ್ರ’ (RuralShores AI Skilling and Experience Centre) […]

ಉದಯಪುರ ಬಳಿಕ ಪಿಂಕ್ ಸಿಟಿ ಜೈಪುರಕ್ಕೂ ಬೆಂಗಳೂರಿನಿಂದ ನೇರ ವಿಮಾನ ಸಂಚಾರ ಆರಂಭ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಗುಲಾಬಿ ನಗರ ಜೈಪುರಕ್ಕೆ ಪ್ರವಾಸ ಅಥವಾ ವ್ಯಾಪಾರ – ವಹಿವಾಟಿಗೆ ತೆರಳುವ ಕನ್ನಡಿಗರಿಗೆ ಒಂದು ಶುಭ ಸುದ್ದಿ ಇದೆ. ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾದ ‘ಆಕಾಶ ಏರ್’ ಮುಂಬರುವ ಅಕ್ಟೋಬರ್ 11, 2026 ರಿಂದ ಬೆಂಗಳೂರು ಮತ್ತು ಜೈಪುರ ನಡುವೆ ದೈನಂದಿನ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ತನ್ನ ದೇಶೀಯ ಜಾಲವನ್ನು ವಿಸ್ತರಿಸುತ್ತಿರುವ ಆಕಾಶ ಏರ್‌ ಪಾಲಿಗೆ ಜೈಪುರ 29ನೇ ತಾಣವಾಗಿದೆ. ರಾಜಸ್ಥಾನದ ಪ್ರಮುಖ ಪ್ರವಾಸಿ ಮತ್ತು […]

ಬಿಜೆಪಿ ನಾಯಕರಿಂದ ಕಾಟಾಚಾರದ ಬರ ಅಧ್ಯಯನ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದ ಬಿಜೆಪಿ ನಾಯಕರಿಗೆ ರೈತರ ಬಗ್ಗೆಯೂ ಕಾಳಜಿ ಇಲ್ಲ, ವಿದ್ಯಾರ್ಥಿಗಳ ಬಗ್ಗೆಯೂ ಕಾಳಜಿ ಇಲ್ಲ, ಕಾಟಾಚಾರಕ್ಕೆ ಬರ ಅಧ್ಯಯನ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ಬರ ಪರಿಸ್ಥಿತಿಯ ಅಧ್ಯಯನ ಮಾಡಲು ತೆರಳುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಬರ, ನೆರೆ ಪೀಡಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ, ಅಧಿಕಾರದ ಹಪಾಹಪಿಗೆ ಹೀಗೆ ಮಾಡುತ್ತಿದ್ದಾರೆ ಎಂದರು. ನಿಜಕ್ಕೂ […]

Eshwar Khandre: ನೀರು ಸಿಗದಿದ್ರೆ, ಖಾಸಗಿ ಕೊಳವೆ, ಬಾವಿ ಮೂಲಕ ನೀರು ಕೊಡಬೇಕು – ಈಶ್ವರ್ ಖಂಡ್ರೆ

ಬೆಂಗಳೂರು: ಕುಡಿಯುವ ನೀರಿಗಾಗಿ 224 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ,ನೀರು ಸಿಗದಿದ್ರೆ, ಖಾಸಗಿ ಕೊಳವೆ, ಬಾವಿ ಮೂಲಕ ನೀರು ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಅನೇಕ ಬೆಳೆ ಹಾಳಾಗಿದ್ದು, ನೀರಿನ ಸಮಸ್ಯೆ ಇರೋದು ಕಂಡುಬಂದಿದೆ. ಹೀಗಾಗಿ ಮೊದಲು ಬರದ ಬಗ್ಗೆ ಆದ್ಯತೆ ಕೊಡಲಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಸಿಗದಿದ್ರೆ ಹೊಸದಾಗಿ ಬೋರ್ ಕೊರೆಸಿ […]

C.T Ravi: ನನಗೆ ಒಂದು ವಾರ ಕಾಲಾವಕಾಶ ಬೇಕು – ಸಿ.ಟಿ ರವಿ

ಚಿಕ್ಕಮಗಳೂರು: ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಂಎಲ್‌ಸಿ ಸಿ.ಟಿ ರವಿ ಇದೀಗ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಒಂದು ವಾರ ಸಮಯ ಕೇಳಿದ್ದಾರೆ. ನಾನು ಹಾಲಿ ಪರಿಷತ್ ಸದಸ್ಯ ಆಗಿರುವುದರಿಂದ ಪಕ್ಷದ ಬೇರೆ ಜವಾಬ್ದಾರಿಗಳಿವೆ. ರಾಯಚೂರು-ಕೊಪ್ಪಳ ಜಿಲ್ಲೆಗೆ ಬರ ಪರೀಶಿಲನೆಗೆ ತೆರಳಬೇಕಿದೆ. ಜು.29 ಹಾಗೂ 30ರಂದು ಪಕ್ಷದ ತುರ್ತು ಕೆಲಸಗಳಿಗೆ ತೆರಳಬೇಕಿದೆ. ನಂತರ ಕಾನೂನು ಸಲಹೆಗಾರರ ಸಲಹೆ ಪಡೆದು ಸಮಾಜಾಯಿಷಿ ನೀಡುತ್ತೇನೆ. ನನಗೆ ಸಮಾಜಾಯಿಷಿ ನೀಡಲು 7 ದಿನಗಳ ಕಾಲಾವಕಾಶಬೇಕು ಎಂದು […]

Karnataka Rains: ಇಂದಿನಿಂದ ರಾಜ್ಯದ 14 ಜಿಲ್ಲೆಗಳಲ್ಲಿ ವರುಣನ ಅಬ್ಬರ-ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ವಾರದಿಂದ ಭಾರೀ ಮಳೆ ಆಗುತ್ತಿದ್ದು, ಇನ್ನು ಕೆಲವು ಕಡೆ ಮಳೆ ಬಾರದಂತಹ ಸನ್ನಿವೇಶ ಎದುರಾಗಿದೆ. ಹಲವು ಕಡೆ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದ್ದು, ಜನರು ಹೊರ ಬರಲು ಆಗದಂತಹ ಸ್ಥಿತಿ ಎದುರಾಗಿದೆ. ಇತ್ತ ಮುಂಗಾರು ಬಿತ್ತಿದ ರೈತರಲ್ಲಿ ಈ ಮಳೆ ವಾತಾವರಣ ಸಂಪೂರ್ಣ ಖುಷಿ ತಂದಿಲ್ಲ. ಕಾರಣ ಹಾವೇರಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ದಿನವಿಡೀ ಮೋಡ […]

Karavali Movie : ಸಂಸ್ಕೃತಿಯತ್ತ ಸಾಗಿದ ಕರಾವಳಿ ಚಿತ್ರ – ಬಾಕ್ಸ್ ಆಫೀಸ್‌ನಲ್ಲಿ ಫುಲ್‌ ಕಲೆಕ್ಷನ್

ಸಿನಿ ಪ್ರೀಯರಿಗೆ ರಾಜ್‌ ಬಿ ಶೆಟ್ಟಿ ಸಿಹಿ ಸುದ್ದಿ ಕೊಡುತ್ತಲೇ ಇರುತ್ತಾರೆ ಮತ್ತು ಅವರ ಚಿತ್ರಕ್ಕೆ ಅಭಿಮಾನಿಗಳ ಸಂಖ್ಯೆಯೂ ಸಾಗರದಷ್ಟಿದೆ. ಹೀಗಿರುವಾಗ ಕರಾವಳಿ ಚಿತ್ರದ ಮೂಲಕ ಮತ್ತೆ ಎಂಟ್ರಿಯಾಗಿದ್ದಾರೆ. ಕಂಬಳದ ಕಥೆ ಹೊಂದಿರುವ ‘ಕರಾವಳಿ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರು ನಟನೆ ಮಾಡಿದ್ದಾರೆ, ಇತ್ತೀಚೆಗೆ ಬಿಡುಗಡೆ ಆಗಿರುವ ಈ ಸಿನಿಮಾಗೆ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.. ಗುರುದತ್ ಗಾಣಿಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕರಾವಳಿ ಭಾಗದ ಕಥೆಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ವೀಕೆಂಡ್​ನಲ್ಲಿ ಹಲವು […]

ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್: ಅಪ್ರತಿಮ ದಾಖಲೆಗಳೊಂದಿಗೆ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು!

ನವದೆಹಲಿ: ಭಾರತದ ತಾರಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು ಭಾನುವಾರ (ಜುಲೈ 26) ನಡೆಯುತ್ತಿರುವ ಗ್ಲಾಸ್ಗೋ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್‌ ಗೇಮ್ಸ್ ಇತಿಹಾಸದಲ್ಲಿ ಸತತ ಮೂರನೇ ಬಾರಿಗೆ ಸ್ವರ್ಣ ಪದಕ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಬರೆದಿದ್ದಾರೆ. ದಾಖಲೆಯ ತೂಕ ಮತ್ತು ಬೃಹತ್ ಅಂತರದ ಗೆಲುವು ಪಂದ್ಯದುದ್ದಕ್ಕೂ ಸಂಪೂರ್ಣ ಆಧಿಪತ್ಯ ಸಾಧಿಸಿದ ಮೀರಾಬಾಯಿ ಚಾನು, ‘ಸ್ನ್ಯಾಚ್’ ಹಾಗೂ ‘ಕ್ಲೀನ್ ಅಂಡ್ ಜರ್ಕ್’ […]