ಸಿಎಂ ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ : ರಾಜ್ಯಕ್ಕಾಗಿ ಪಕ್ಷಾತೀತವಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ

ನವದೆಹಲಿ: ಕರ್ನಾಟಕದ ಅಭಿವೃದ್ಧಿಗಾಗಿ ಸರ್ಕಾರ ಮುಂದಾಗಿದ್ದು , ಈ ವಿಚಾರವಾಗಿ ಸಿಎಂ ಡಿಕೆಶಿ ಪ್ರತಿಕ್ರಿಯೆ ನೀಡುತ್ತಲೇ ಇರುತ್ತಾರೆ. ಮೊನ್ನೆ ಅಷ್ಟೇ ದೇಹಲಿಯಲ್ಲಿ ಕಾಕ್ರೋಜ್‌ ಜನತಾ ಪಾರ್ಟಿ ಪ್ರತಿಭಟನೆ ಮಾಡಿತ್ತು, ಧರಣಿ ಮೂಲಕ ತಮ್ಮ ಬೇಡಿಕೆಗಳನ್ನು ಯುವಕರು ಪೂರೈಸಿಕೊಂಡರು.

ಈ ಪ್ರತಿಭಟನೆಯಲ್ಲಿ ಕಾಂಗ್ರೇಸ್‌ ಪಕ್ಷ ಕೈ ಸೇರಿಸಿತ್ತು, ನಂತರ ಇದರ ಬೆನ್ನಲ್ಲೇ, ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕರ್ನಾಟಕದ ಎಲ್ಲಾ ಸಂಸದರ ಸಭೆ ನಡೆಸಿದ್ದರು ಆದರೇ ಇದೀಗ ಸಭೆ ಅಂತ್ಯವಾಗಿದೆ.

ಸಭೆಯ ಅಂತ್ಯಯ ನಂತರ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಸಭೆ ಬಳಿಕ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಮಾತನಾಡಿ, ಸಿಎಂ ಮೊದಲ ಬಾರಿಗೆ ರಾಜ್ಯದ ಸಂಸದರ ಸಭೆ ಕರೆದಿದ್ದರು. ರಾಜ್ಯ ಸರ್ಕಾರದ ಬಾಕಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ವಿಚಾರ ಬಂದಾಗ ನಾವು ಸರ್ಕಾರದ ಜೊತೆ ಇರುತ್ತೇವೆ. ರಾಜ್ಯದ ವಿಚಾರ ಬಂದಾಗ ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ.ರಾಜ್ಯಕ್ಕಾಗಿ ಪಕ್ಷಾತೀತವಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.

ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಅವರ ಪಕ್ಷ ಬಿಜೆಪಿ ಆಗಿದ್ದರು, ಅವರು ಇದೀಗ ಡಿಕೆಶಿಗೆ ಭರವಸೆ ನೀಡಿರುವುದು ರಾಜ್ಯಕ್ಕೆ ಕೂತುಹಲವಾಗಿದೆ. ಅಲ್ಲದೇ ಅವರು ರಾಜ್ಯದ ವಿಚಾರ ರಾಜ್ಯದ ಅಭಿವೃದ್ದಿ ವಿಚಾರ ಬಂದಾರ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದಿರುವುದು ರಾಜ್ಯಕ್ಕೆ ಸಂತಸದ ವಿಚಾರವಾಗಿದೆ.

ಒಟ್ಟಿನಲ್ಲಿ ಇವರ ಹೇಳಿಕೆ ನಿಜವಾದರೇ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದ ಕಾದುನೋಡಬೇಕಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others