ಚಿಕ್ಕಮಗಳೂರು, ಜುಲೈ 28: ‘ಮುಲ್ಲಾಗಳಿಗೆ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ’ ಎಂಬ ಬಿಜೆಪಿ ಎಂಎಲ್ಸಿ ಸಿಟಿ ರವಿ ಹೇಳಿಕೆಯನ್ನು ಇದೀಗ ಮುಸ್ಲಿಂ ನಾಯಕರು ಖಂಡಿಸಿ,ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ, ಚಿಕ್ಕಮಗಳೂರಿನಲ್ಲಿ ಎಸ್.ಡಿ.ಪಿ.ಐ. ಮುಖಂಡ ಅತೀಕ್ ಮಾತನಾಡಿ, ಮುಸಲ್ಮಾನರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಸಿಟಿ ರವಿಗೆ ಆಗ್ರಹಿಸಿದ್ದಾರೆ. ದೇಶದ ಅಭಿವೃದ್ಧಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಬಿಳಿ ಕೂದಲಿನ ರಾಜಕೀಯ ಈಗ ನಡೆಯುವುದಿಲ್ಲ ಎಂದು ತಿಳಿಸಿದರು. ಮುಲ್ಲಾಗಳು ಯಾರೂ ಅನಕ್ಷರಸ್ಥರಲ್ಲ ಎಂದು ಸ್ಪಷ್ಟಪಡಿಸಿದ ಅತೀಕ್, ಪ್ರತಿಯೊಬ್ಬರೂ ಶಿಕ್ಷಿತರು ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.
ಇಂತಹ ಮಾತು ಮುಂದುವರಿದರೆ, ಮುಸ್ಲಿಂ ಸಮುದಾಯ ಒಟ್ಟಾಗಿ ಸಿ.ಟಿ. ರವಿ ಅವರು ಚಿಕ್ಕಮಗಳೂರಿಗೆ ಪ್ರವೇಶಿಸದಂತೆ ತಡೆಯಲಿದೆ ಮುಂದೆ ಯಾವುದೇ ಭಾಷಣ ಮಾಡುವ ಮುನ್ನ ಯೋಚಿಸಿ ಮಾತನಾಡಬೇಕು. ಎಂದು ಅತೀಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನೇರ ಚರ್ಚೆಗೆ ಬರುವಂತೆ ಸಿ.ಟಿ. ರವಿಗೆ ಸವಾಲು ಹಾಕಿದ್ದಾರೆ.
ಇನ್ನು ರಾಯಚೂರು ನಲ್ಲಿ ಸಹ ಸಿಟಿ ರವಿ ವಿರುದ್ಧ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಕುಡುಕ ಎನ್ನುವ ರೀತಿ ಕೆಪಿಸಿಸಿ ಅಧಿಕೃತ ಖಾತೆಯಿಂದ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು ಇದಕ್ಕೆ ಸಿಟಿ ರವಿ ಅವರು ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ,ನಿ. ಆದ್ರೆ ನಾನು ಕುಡುಕ ಅಂತ ತೋರಿಸ್ತಾರೆ. ಅವರಿಗೆ ನಾಚಿಕೆ ಆಗ್ಬೇಕು. ನಾನು ಬಾರ್ ಮುಂದೆ ನಿಂತು ಕುಡಿದು ತೂರಾಡೋದನ್ನ ನೋಡಿದ್ದಿರಾ? ಆ ಪಕ್ಷದ ಅಧಿಕೃತ ಸೋಶಿಯಲ್ ಮಿಡಿಯಾದಲ್ಲಿ ಕುಡುಕ ಅಂತ ಹಾಕ್ತಾರೆ ಅಂದ್ರೆ, ಆ ಪಕ್ಷ ಚರಂಡಿ ನೀರಿಗಿಂತ ಕಡೆಯಾಗಿದೆ ಅನ್ನೋದಕ್ಕೆ ಸಾಕ್ಷಿ ಎಂದಿದ್ದಾರೆ.
ನಾನು ಹೇಗೆ ಅಂತ ಎಲ್ಲರಿಗೂ ಗೊತ್ತು. ನಾನು ಕಾಫೀ ಟೀ ಕುಡಿಯೋದಕ್ಕೂ ಹಿಂದೆ ಮುಂದೆ ನೋಡ್ತಿಒಬ್ಬ ವ್ಯಕ್ತಿಯನ್ನ ವೈಚಾರಿಕವಾಗಿ ಎದುರಿಸೋದಕ್ಕೆ ಆಗಲ್ವೋ ಆಗ ಅಪಪ್ರಚಾರ, ಅಪನಂಬಿಕೆ ಹುಟ್ಟುಹಾಕೋದನ್ನ ಮಾಡುತ್ತಾರೆ. ಇದಕ್ಕೆ ಅವರ ಅದೋಗತಿಯೇ ಸಾಕ್ಷಿ ಎಂದಿದ್ದಾರೆ.
ಆದರೇ ಚಿಕ್ಕಮಗಳೂರಿನಲ್ಲಿ ಎಸ್.ಡಿ.ಪಿ.ಐ. ಮುಖಂಡ ಅತೀಕ್ ಮಾತನಾಡಿ, ಮುಸಲ್ಮಾನರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಸಿಟಿ ರವಿಗೆ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಸಿಟಿ ರವಿ ಅವರು ಇನ್ನು ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೆ ಉತ್ತರ ನೀಡುತ್ತಾರೆ ಎನ್ನುವುದು ಕಾದು ನೋಡಬೇಕಿದೆ.



