ಎನ್‌ಟಿಎ 47 ಸಿಬ್ಬಂದಿ ಸೇವೆಯಿಂದ ವಜಾ, ಪರೀಕ್ಷಾ ಸಂಸ್ಥೆಯ ಆಡಳಿತ ಅಮೂಲಾಗ್ರ ಪುನರ್ರಚನೆಗೆ ಕೇಂದ್ರ ಸಜ್ಜು- ಮೂಲಗಳು

ನವದೆಹಲಿ: ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಮತ್ತು ಭಾರಿ ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಇತಿಹಾಸದಲ್ಲೇ ಅತಿದೊಡ್ಡ ಸಾಂಸ್ಥಿಕ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಈ ಬೃಹತ್ ಸುಧಾರಣಾ ಕಾರ್ಯಾಚರಣೆಯ ಭಾಗವಾಗಿ ಈಗಾಗಲೇ ಸಂಸ್ಥೆಯ ಸುಮಾರು 47 ಸಿಬ್ಬಂದಿಗಳನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನೀಟ್-ಯುಜಿ, ಜೆಇಇ ಮೇನ್ (JEE Main) ಹಾಗೂ ಸಿಯುಇಟಿ (CUET) ಸೇರಿದಂತೆ ದೇಶದ 15 ರಿಂದ 20 ಪ್ರಮುಖ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು […]

ನೀಟ್ ಪೇಪರ್ ಲೀಕ್ ವಿವಾದ: ನಾಳೆ ಕಾಂಗ್ರೆಸ್‌ನಿಂದ ದೇಶಾದ್ಯಂತ ‘ಕ್ಯಾಂಡಲ್ ಮಾರ್ಚ್’!

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ದೆಹಲಿಯಲ್ಲಿ ಕಾಕ್ರೋಚ್ ಜಂಟಾ ಪಾರ್ಟಿ (CJP) ನಡೆಸುತ್ತಿರುವ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ಸೂಚಿಸಿ, ಶನಿವಾರ (ಜುಲೈ 25) ದೇಶಾದ್ಯಂತ ‘ಕ್ಯಾಂಡಲ್ ಮಾರ್ಚ್’ (ಮೇಣದಬತ್ತಿ ಮೆರವಣಿಗೆ) ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಶುಕ್ರವಾರ (ಜುಲೈ 24) ‘ಮೋಸ್ಟ್ ಅರ್ಜೆಂಟ್’ (ತೀರಾ ತುರ್ತು) ಸುತ್ತೋಲೆಯನ್ನು ಜಾರಿಗೊಳಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕ್ಯಾಂಡಲ್ ಮಾರ್ಚ್ […]

ಧರ್ಮಪತ್ನಿಯನ್ನು ನೆನೆದು ಮಾಜಿ ಪ್ರಧಾನಿಗಳ ಕಂಬನಿ: ನನ್ನ ಕೀರ್ತಿ, ಪ್ರಖ್ಯಾತಿಯ ಚೈತನ್ಯಶಕ್ತಿ ಚೆನ್ನಮ್ಮನೆಂದು ದೇವೇಗೌಡ ಭಾವುಕ ಪತ್ರ

ಬೆಂಗಳೂರು: ಇತ್ತೀಚೆಗೆ ಅಗಲಿದ ತಮ್ಮ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರಿಗೆ ರಾಜ್ಯದ ಜನತೆ ತೋರಿದ ಪ್ರೀತಿ, ಗೌರವ, ಅಭಿಮಾನಕ್ಕೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಅತ್ಯಂತ ಭಾವುಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಪ್ರಧಾನಿಗಳು; ತಮ್ಮ ಧರ್ಮಪತ್ನಿಗೆ ಅಶ್ರುತರ್ಪಣ ಅರ್ಪಿಸಿದ ಪ್ರತಿಯೊಬ್ಬರಿಗೂ ವಿನೀತನಾಗಿ ನಮಿಸುತ್ತೇನೆ ಎಂದು ತಿಳಿಸಿದ್ದಾರೆ. ಮಾಜ ಪ್ರಧಾನಿಗಳ ಹೇಳಿಕೆಯ ಪೂರ್ಣಪಾಠ ಇಲ್ಲಿದೆ; ಎಪ್ಪತ್ತೆರಡು ವರ್ಷಗಳ ಸುದೀರ್ಘಕಾಲ ನನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಇರಿಸಿ ನಡೆದಿದ್ದ ನನ್ನ ಸಹಧರ್ಮಿಣಿ ಶ್ರೀಮತಿ ಚೆನ್ನಮ್ಮ ಅವರು […]

ಕೇಂದ್ರ ಸರ್ಕಾರದಿಂದ ಮತ್ತೆ LPG ಸಬ್ಸಿಡಿ ಮುಂದುವರಿಕೆ: ಗ್ರಾಹಕರಿಗೆ ಬಿಗ್ ರಿಲೀಫ್!

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲದ (ಎಲ್‌ಪಿಜಿ) ದರಗಳು ಗಗನಮುಖಿಯಾಗುತ್ತಿದ್ದರೂ, ದೇಶದ ಸಾಮಾನ್ಯ ನಾಗರಿಕರ ಜೇಬಿಗೆ ಕತ್ತರಿ ಬೀಳದಂತೆ ಭಾರತ ಸರ್ಕಾರ ಬೃಹತ್ ಮೊತ್ತದ ಆರ್ಥಿಕ ಹೊರೆಯನ್ನು ತಾನೇ ಭರಿಸುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಎದುರಾಗಿರುವ ಯುದ್ಧ ಸನ್ನಿವೇಶ ಮತ್ತು ಜಾಗತಿಕ ಪೂರೈಕೆ ಸಾಲಿನ ಬಿಕ್ಕಟ್ಟಿನ ನಡುವೆಯೂ ದೇಶೀಯ ಸಿಲಿಂಡರ್ ದರವನ್ನು ಭಾರತದಲ್ಲಿ ಸ್ಥಿರವಾಗಿಡಲಾಗಿದೆ. ಈ ಕುರಿತು ಲೋಕಸಭೆಗೆ ಉತ್ತರ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ರಾಜ್ಯ ಸಚಿವ ಸುರೇಶ್ ಗೋಪಿ, ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಏರಿಳಿತಗಳಿದ್ದರೂ […]

ನಂದಿನಿ ತುಪ್ಪ, ಬೆಣ್ಣೆ ದರ ಹೆಚ್ಚಳ

ಬೆಂಗಳೂರು: ಅಡುಗೆ ಎಣ್ಣೆ ಸೇರಿದಂತೆ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಗ್ರಾಹಕರಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ಮತ್ತೊಂದು ಆರ್ಥಿಕ ಹೊರೆ ನೀಡಿದೆ. ಸಾರ್ವಜನಿಕರ ಮೆಚ್ಚಿನ ‘ನಂದಿನಿ’ ಬ್ರ್ಯಾಂಡ್‌ನ ಬೆಣ್ಣೆ ಹಾಗೂ ತುಪ್ಪದ ದರಗಳನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದ್ದು, ನೂತನ ದರಗಳು ನಾಳೆಯಿಂದಲೇ ಜಾರಿಗೆ ಬರಲಿವೆ. ಯಾವ ಉತ್ಪನ್ನಕ್ಕೆ ಎಷ್ಟು ದರ ಏರಿಕೆ? ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆ ಮಾಡಿರುವ ಕೆಎಂಎಫ್, ತುಪ್ಪದ ಬೆಲೆಯನ್ನು ಪ್ರತಿ ಕೆಜಿಗೆ 15 ರೂಪಾಯಿ ಹಾಗೂ ಬೆಣ್ಣೆಯ […]

ನಾಳೆ ದೇಶಾದ್ಯಂತ NEET ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ CJP ಪ್ರತಿಭಟನೆಗೆ ಕರೆ!

ನವದೆಹಲಿ: NEET-UG ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಜುಲೈ 24ರ ಶುಕ್ರವಾರ ದೇಶಾದ್ಯಂತ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ನಿಯಂತ್ರಣ ಕುರಿತು ಕೇಂದ್ರ ಸರ್ಕಾರವು ನಿರಂತರ ಭರವಸೆ ಹಾಗೂ ಸುದೀರ್ಘ ಚರ್ಚೆಗೆ ಆಹ್ವಾನ ನೀಡುತ್ತಿದ್ದರೂ, ಅದಕ್ಕೆ ಸೊಪ್ಪು ಹಾಕದ ಸಿಜಿಪಿ ತನ್ನ ಹೋರಾಟವನ್ನು ದೇಶಾದ್ಯಂತ ವಿಸ್ತರಿಸಲು ಮುಂದಾಗಿದೆ. ಪೋಲಿಸ್ ದೌರ್ಜನ್ಯ ಖಂಡಿಸಿ ದೇಶಾದ್ಯಂತ […]

ರಾಜ್ಯದಲ್ಲಿ ಕೊತ್ವಾಲ್ ಆಡಳಿತ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಡಿಕೆ ಶಿವಕುಮಾರ್ ಹೇಳಿದ್ದೇನು? ಇಲ್ಲಿದೆ ನೋಡಿ

ಬೆಂಗಳೂರು : ಬಿಜೆಪಿ ಅವರಿಗೆ ನನ್ನ ಪರಿಶುದ್ದ ಆಡಳಿತ ಸಹಿಸೋಕೆ ಆಗ್ತಿಲ್ಲ. ಅವರು ನನ್ನ ‌ಮೇಲೆ ಏನೇನೋ ಮಾತಾಡ್ತಾ ಇದ್ದಾರೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿಎಂ ಡಿಕೆಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊತ್ವಾಲ್ ಆಡಳಿತ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ನಾನು ಎಷ್ಟು ಪರಿಶುದ್ಧ ರಾಜಕೀಯ ಮತ್ತು ಆಡಳಿತ ಮಾಡುತ್ತಿದ್ದೇನೆ ಎಂಬುದನ್ನು ಜನರು ನೋಡುತ್ತಿದ್ದಾರೆ.ಅವರು ಖುಷಿಗೆ ಏನು ಬೇಕಾದರೂ ಮಾತನಾಡಲಿ. ನಾನು ಹಳ್ಳಿಯಲ್ಲಿ ಹುಟ್ಟಿದ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ […]

ಚಿಕ್ಕಬಳ್ಳಾಪುರದಲ್ಲಿ ಹೆಣ್ಣುಮಗುವೆಂದು 13 ದಿನದ ಹಸುಗೂಸನ್ನೇ ಸಂಪಿಗೆ ಹಾಕಿ ಕೊಂದ ಪಾಪಿ ತಂದೆ

ಚಿಕ್ಕಬಳ್ಳಾಪುರ: ಹೆಣ್ಣು ಮಗು ಹುಟ್ಟಿದ್ದೇ ಮಹಾಪರಾಧ ಎಂಬಂತೆ ಭಾವಿಸಿದ ಪಾಪಿ ತಂದೆಯೊಬ್ಬ, ತನ್ನ 13 ದಿನದ ಎಳೆಯ ಕಂದಮ್ಮನನ್ನು ನೀರಿನ ಸಂಪ್‌ಗೆ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಕರುಳು ಹಿಂಡುವ ಘಟನೆ ನಗರದ ಶಾಂತಿನಗರ ಬಡಾವಣೆಯಲ್ಲಿ ವರದಿಯಾಗಿದೆ. ಪಾಪಿ ತಂದೆಯ ಸಂಚು ಇಲ್ಲಿನ ಇಮ್ರಾನ್ ಹಾಗೂ ಮುಸ್ಕಾನ್ ಜೋಡಿಗೆ 13 ದಿನಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು. ಆದರೆ ಹೆಣ್ಣು ಮಗುವಿನ ಆಗಮನದಿಂದ ಅಸಮಾಧಾನಗೊಂಡಿದ್ದ ಇಮ್ರಾನ್, ಜುಲೈ 22ರ ಬುಧವಾರ ತಡರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ತನ್ನ ವಿಕೃತ […]

ರಾಜ್ಯದಲ್ಲಿ 10,000 ಕೋಟಿ ಸಿಎಸ್ಆರ್ ನಿಧಿ ಇದೆ, ಅದನ್ನು ಗ್ರಾಮೀಣ ಭಾಗದ ಶಿಕ್ಷಣಕ್ಕೆ ವಿನಿಯೋಗ: ಸಿಎಂ ಡಿಕೆಶಿ

ಬೆಂಗಳೂರು: “ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಇದರ ಪ್ರತಿಯೊಂದು ಪೈಸೆ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗವಾಗಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು. ಕೆ.ಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ)ಯ ಎಂ.ವಿ ಸಭಾಂಗಣದಲ್ಲಿ ಎಫ್ ಕೆಸಿಸಿಐ ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು. “ನಾವು ಅಧಿಕಾರಕ್ಕೆ ಬಂದ ಬಳಿಕ ನಮ್ಮ ಸಚಿವರ ಜೊತೆ […]

ಟ್ರಾನ್ಸ್ ಫ್ಯಾಟ್-ಮುಕ್ತ ಕರ್ನಾಟಕಕ್ಕೆ ಪಣ: ರಾಜ್ಯ ಸರ್ಕಾರದಿಂದ ಬೃಹತ್ ಜಾಗೃತಿ ಹಾಗೂ ಕಟ್ಟುನಿಟ್ಟಿನ ಕ್ರಮ!

ಬೆಂಗಳೂರು : ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಇಲಾಖೆ ಕೈಗಾರಿಕೆಯಲ್ಲಿ ಉತ್ಪಾದಿಸಲ್ಪಡುವ ಟ್ರಾನ್ಸ್ ಫ್ಯಾಟ್‌ಗಳ ನಿರ್ಮೂಲನೆ ಕುರಿತು ರಾಜ್ಯಮಟ್ಟದ ಸಂವೇದನಾಶೀಲತಾ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಆಹಾರ ಸುರಕ್ಷತೆ ಇಲಾಖೆಯ ಹಿರಿಯ ಅಧಿಕಾರಿಗಳು, ಆಹಾರ ಸುರಕ್ಷತಾ ಅಧಿಕಾರಿಗಳು, ಆಹಾರ ಉದ್ಯಮದ ಪ್ರತಿನಿಧಿಗಳು, ಖಾದ್ಯ ತೈಲ ಉತ್ಪಾದಕರು, ತಾಂತ್ರಿಕ ತಜ್ಞರು ಹಾಗೂ ವಿವಿಧ ಅಭಿವೃದ್ಧಿ ಸಹಭಾಗಿಗಳು ಭಾಗವಹಿಸಿ, ಟ್ರಾನ್ಸ್ ಫ್ಯಾಟ್ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಚರ್ಚಿಸಿದರು. ಟ್ರಾನ್ಸ್ ಫ್ಯಾಟ್‌ಗಳು […]