ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ವಿಸ್ತರಣೆ: ಕರ್ನಾಟಕ ಸೇರಿದಂತೆ 4 ರಾಜ್ಯಗಳ ಹೊಸ ವೇಳಾಪಟ್ಟಿ ಪ್ರಕಟ!

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಸದ್ಯ ಪ್ರಗತಿಯಲ್ಲಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ದಿನಾಂಕಗಳನ್ನು ಚುನಾವಣಾ ಆಯೋಗವು ಮರುನಿಗದಿಪಡಿಸಿದೆ. ಮತದಾರರಿಂದ ವಿವರಗಳ ಸಲ್ಲಿಕೆ ತಡವಾಗುತ್ತಿರುವುದರಿಂದ ಮಾಹಿತಿ ಸಂಗ್ರಹದ ಕೆಲಸ ಮಂದಗತಿಯಲ್ಲಿ ಸಾಗುತ್ತಿದ್ದು, ಹೀಗಾಗಿ ಕರಡು ಮತ್ತು ಅಂತಿಮ ಪಟ್ಟಿ ಬಿಡುಗಡೆಯನ್ನು 10 ರಿಂದ 12 ದಿನಗಳ ಕಾಲ ಮುಂದೂಡಲಾಗಿದೆ. ಕರ್ನಾಟಕದ ಜೊತೆಗೆ ದೆಹಲಿ, ತೆಲಂಗಾಣ ಹಾಗೂ ಪಂಜಾಬ್ ರಾಜ್ಯಗಳ ವೇಳಾಪಟ್ಟಿಯಲ್ಲೂ ಮಹತ್ವದ ಬದಲಾವಣೆಗಳಾಗಿವೆ. ಇತ್ತೀಚೆಗಷ್ಟೇ ಹರಿಯಾಣ ಮತ್ತು ಆಂಧ್ರಪ್ರದೇಶದ ಕ್ಯಾಲೆಂಡರ್ ಸಹ ಬದಲಾಗಿದ್ದು, […]
2027 ಹಾಗೂ 2028ರ ವಿಶ್ವಕಪ್‌ಗಳಿಗೆ ಹೊಸ ಫಾರ್ಮ್ಯಾಟ್ ಘೋಷಿಸಿದ ಐಸಿಸಿ

ದುಬೈ: ವಿಶ್ವ ಕ್ರಿಕೆಟ್‌ನ ದೈತ್ಯ ಟೂರ್ನಿಗಳಾದ ಟಿ20 ಹಾಗೂ ಏಕದಿನ ವಿಶ್ವಕಪ್ ಪಂದ್ಯಾವಳಿಗಳನ್ನು ಮತ್ತಷ್ಟು ರೋಚಕಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹತ್ತರ ಹೆಜ್ಜೆ ಇಟ್ಟಿದೆ. ಮುಂಬರುವ ಮೆಗಾ ಈವೆಂಟ್‌ಗಳ ಸ್ವರೂಪವನ್ನು (Format) ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು, ಇನ್ಮುಂದೆ ಸಾಂಪ್ರದಾಯಿಕ ಲೀಗ್ ಹಂತಕ್ಕೂ ಮುನ್ನ ಹೈ-ವೋಲ್ಟೇಜ್ ‘ಸೂಪರ್ ಸೀರೀಸ್’ ಜರುಗಲಿದೆ. ಇದಾದ ನಂತರ ಸೆಮಿಫೈನಲ್‌ನ ನಾಲ್ಕು ಸ್ಥಾನಗಳಿಗಾಗಿ ಏಳು ಬಲಿಷ್ಠ ತಂಡಗಳ ನಡುವೆ ‘ಸೂಪರ್ 7’ ಜಿದ್ದಾಜಿದ್ದಿನ ಕದನ ನಡೆಯಲಿದೆ. ಅಸೋಸಿಯೇಟ್ ರಾಷ್ಟ್ರಗಳ ಮೂವರು ಸದಸ್ಯರಿರುವ ಐಸಿಸಿ ಬೋರ್ಡ್, […]
ಭಾರತ್ ಟೆಕ್ಸ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಕರ್ನಾಟಕ: 2,821 ಕೋಟಿ ಹೂಡಿಕೆ, 11,000ಕ್ಕೂ ಹೆಚ್ಚು ಉದ್ಯೋಗ ಸೃಷ್ಠಿ

ನವದೆಹಲಿ : ವಿಶ್ವದ ಪ್ರಮುಖ ಟೆಕ್ಸ್‌ಟೈಲ್ ಸಮಾವೇಶವಾದ ‘ ಭಾರತ್ ಟೆಕ್ಸ್–2026 ‘ರಲ್ಲಿ ಕರ್ನಾಟಕ ರಾಜ್ಯವು ಉತ್ತಮ ಸಾಧನೆ ಮಾಡಿದ್ದು, ವಿವಿಧ ಸಂಸ್ಥೆಗಳೊಂದಿಗೆ ₹2,821 ಕೋಟಿ ಮೌಲ್ಯದ 12 ಹೂಡಿಕೆ ಒಪ್ಪಂದಗಳಿಗೆ (MoU) ಸಹಿ ಹಾಕಿದೆ. ಈ ಬೃಹತ್ ಹೂಡಿಕೆಯಿಂದ ರಾಜ್ಯದಲ್ಲಿ 11,020ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ನವದೆಹಲಿಯ ಭಾರತ್ ಮಂಡಪದಲ್ಲಿ ಆಯೋಜಿಸಲಾಗಿದ್ದ “Investment Opportunities in Karnataka & MoU Signing” ಕಾರ್ಯಕ್ರಮದಲ್ಲಿ […]
ಮಹಿಳೆಯ ಎದೆ ಮುಟ್ಟುವುದು, ಬಟ್ಟೆ ತೆಗೆಯುವುದು ಅ*ತ್ಯಾಚಾ*ರ ಯತ್ನವಲ್ಲ: ಪಾಟ್ನ ಹೈಕೋರ್ಟ್

ಪಾಟ್ನಾ: ಲೈಂಗಿಕ ಸಂಪರ್ಕದ ಯತ್ನ ಅಥವಾ ಅತ್ಯಾಚಾರ ಎಸಗಲು ನಡೆಸಿರುವ ಸ್ಪಷ್ಟವಾದ ಯಾವುದೇ ಕೃತ್ಯದ ಬಲವಾದ ಪುರಾವೆಗಳಿಲ್ಲದೆ, ಕೇವಲ ಮಹಿಳೆಯ ಬಟ್ಟೆ ಕಳಚಲು ಯತ್ನಿಸಿದ್ದು ಮತ್ತು ಆಕೆಯನ್ನು ದೈಹಿಕವಾಗಿ ಮಲೆಸ್ಟ್ ಮಾಡಿರುವುದನ್ನು ಆಧರಿಸಿ ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ‘ಅತ್ಯಾಚಾರದ ಯತ್ನ’ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಿಹಾರದ ಬಂಕಾ ಜಿಲ್ಲೆಯ 2008 ರ ಹಳೆಯ ಪ್ರಕರಣವೊಂದರಲ್ಲಿ ಕೆಳ ನ್ಯಾಯಾಲಯ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ […]
ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ಆದೇಶ ಕೊಡಿ :ಶಿವಾನಂದ ಪಾಟೀಲ್

ಬೆಂಗಳೂರು; ವಿಜಯಪುರ, ಬಾಗಲಕೋಟೆಯಲ್ಲಿ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ಆದೇಶ ಮಾಡಿಕೊಡಿ ಎಂದು ಶಾಸಕ, ಮಾಜಿ ಸಚಿವ ಶಿವಾನಂದ ಪಾಟೀಲ್ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಜಲಾಶಯ ಹಿಂಗಾರಿನಲ್ಲೂ ಭರ್ತಿಯಾದ ಹಲವು ನಿದರ್ಶನಗಳಿವೆ. ಆಲಮಟ್ಟಿ ಜಲಾಶಯ ಮುಂಗಾರಿನಲ್ಲಿ ಭರ್ತಿಯಾಗದಿದ್ದರೂ ಹಿಂಗಾರಿನಲ್ಲಿ ಭರ್ತಿಯಾಗುವ ವಿಶ್ವಾಸ ಇದೆ. ಹೀಗಾಗಿ ಈಗಲೇ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದರೆ ಭವಿಷ್ಯದ ದಿನಗಳಲ್ಲಿ ನೀರಿನ ಕೊರತೆಯಾಗಬಹುದು ಎಂದು […]
ದಳಪತಿ ವಿಜಯ್ ಕೊನೆಯ ಚಿತ್ರ ‘ಜನ ನಾಯಕನ್’ ಬಿಡುಗಡೆ ದಿನಾಂಕ ಫಿಕ್ಸ್! ಜುಲೈ.23ಕ್ಕೆ ವಿಶ್ವದಾದ್ಯಂತ ರಿಲೀಸ್

ಚೆನ್ನೈ: ಕಳೆದ ಏಳು ತಿಂಗಳುಗಳಿಂದ ಬಿಡುಗಡೆಯ ಭಾಗ್ಯ ಕಾಣದೆ ಕಾನೂನು ಕಸರತ್ತುಗಳಲ್ಲಿ ಸಿಲುಕಿದ್ದ ಕಾಲಿವುಡ್ ಸುಪರ್ ಸ್ಟಾರ್ ವಿಜಯ್ ಅವರ ಹೈ-ವೋಲ್ಟೇಜ್ ಸಿನಿಮಾ ‘ಜನ ನಾಯಕನ್’ (Jana Nayagan) ಕೊನೆಗೂ ರಿಲೀಸ್‌ಗೆ ಹಸಿರು ನಿಶಾನೆ ಪಡೆದುಕೊಂಡಿದೆ. ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿರುವ ಚಿತ್ರತಂಡ, ಜುಲೈ 23 ರಂದು ಜಾಗತಿಕವಾಗಿ ಸಿನಿಮಾವನ್ನು ತೆರೆಗೆ ತರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯೊಂದಿಗಿನ ಸುದೀರ್ಘ ಜಟಾಪಟಿ ಹಾಗೂ ಕೋರ್ಟ್ ಮೆಟ್ಟಿಲೇರಿದ್ದ ವಿವಾದಕ್ಕೆ ಈಗ ಪೂರ್ಣವಿರಾಮ ಬಿದ್ದಿದೆ. […]
ಮಾಲೀಕರು ಆಸ್ತಿಯನ್ನು ಯಾವುದೇ ಅಡೆತಡೆಯಿಲ್ಲದೆ ಅನುಭವಿಸಬೇಕು: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಕಷ್ಟದಿಂದ ಗಳಿಸಿದ ಆಸ್ತಿಯ ಸಂಪೂರ್ಣ ಹಕ್ಕು ಅದರ ಮಾಲೀಕರಿಗೇ ಸೇರಬೇಕು. ಆಸ್ತಿ ಖರೀದಿ ಮತ್ತು ನಿರ್ವಹಣೆಯಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಕಾಸಸೌಧದಲ್ಲಿ ನಡೆದ ‘ಕರ್ನಾಟಕ ಅಪಾರ್ಟ್‌ಮೆಂಟ್ ಕರಡು ವಿಧೇಯಕ 2026’ ಕುರಿತಾದ ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗಿನ ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಡಳಿತ ವಿಕೇಂದ್ರೀಕರಣ ಹಾಗೂ ಈಸ್ ಆಫ್ ಬಿಸಿನೆಸ್‌ಗಾಗಿ ನಗರದಲ್ಲಿ ಐದು ಪ್ರತ್ಯೇಕ ಕಾರ್ಪೊರೇಷನ್‌ಗಳನ್ನು ರಚಿಸಲಾಗಿದೆ. ಬೆಂಗಳೂರಿನಲ್ಲಿ ಹೈ-ರೈಸ್ […]
ಬಿಡದಿ ಟೌನ್‌ಶಿಪ್ ನನ್ನ ಕನಸಿನ ಯೋಜನೆಯಲ್ಲ: ಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: “ನನಗೆ ಯಾವುದೇ ಟೌನ್‌ಶಿಪ್ ಯೋಜನೆಯ ಕ್ರೆಡಿಟ್ ಬೇಕಾಗಿಲ್ಲ. ನಾನು ಕೃಷಿಕನ ಮಗ, ಅನ್ನದಾತರು ತೋರಿಸಿದ ಹಾದಿಯಲ್ಲೇ ಸಾಗುತ್ತಿದ್ದೇನೆ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಿಧಾನಸೌಧದಲ್ಲಿ ಹರಿಹಾಯ್ದಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಎಚ್.ಡಿ. ಕುಮಾರಸ್ವಾಮಿ ಅವರು ನಡೆಸುತ್ತಿರುವ ಪ್ರತಿಭಟನಾ ಧರಣಿ ಹಾಗೂ ನಿನ್ನೆ ಬಿಡದಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ಹಿಂದಿನ ಸರ್ಕಾರದ ನಿರ್ಧಾರ, ನನ್ನ ಕನಸಲ್ಲ! ಸುದ್ದಿಗಾರರೊಂದಿಗೆ ಮಾತನಾಡಿದ […]
ಬಿಡದಿ ಟೌನ್ ಶಿಪ್ ಯೋಜನೆ ವಿವಾದ: ಸ್ವ-ಇಚ್ಛೆಯಿಂದ ಕೊಟ್ರೆ ಭೂಸ್ವಾಧೀನ – ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿಂದು ಪ್ರಮುಖ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಮತ್ತು ಅನ್ನದಾತರ ಅಹವಾಲುಗಳನ್ನು ಆಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವುದಾಗಿ ಸಿಎಂ ತಿಳಿಸಿದ್ದಾರೆ. ಯೋಜನೆ ಬೇಕೋ, ಬೇಡವೋ? ಸಮಿತಿ ನಿರ್ಧಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಬಿಡದಿ ಯೋಜನೆಯ ಕುರಿತು ಉದ್ಭವಿಸಿರುವ ಗೊಂದಲಗಳಿಗೆ ತೆರೆ ಎಳೆಯಲು ಸಮಿತಿ ರಚಿಸಲಾಗುತ್ತಿದೆ. ಈ ಸಮಿತಿಯು ನೇರವಾಗಿ ಸ್ಥಳೀಯ ರೈತರನ್ನು […]
ರಾಜ್ಯ ಸಂಪುಟ ವಿಸ್ತರಣೆಗೆ ಚುರುಕು: ನಾಳೆ ದೆಹಲಿಗೆ ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ಧರಾಮಯ್ಯ ಪಯಣ

ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆಗಳಿಗೆ ಕೊನೆಗೂ ಚಾಲನೆ ಸಿಕ್ಕಿದೆ. ಹೈಕಮಾಂಡ್ ಜೊತೆಗಿನ ಉನ್ನತ ಮಟ್ಟದ ಮಾತುಕತೆಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನೊಳಗೊಂಡ ರಾಜ್ಯ ನಾಯಕರ ತಂಡ ಇಂದು ರಾತ್ರಿ ದೆಹಲಿ ತಲುಪಲಿದೆ. ನಾಳೆ ಪ್ರಾಥಮಿಕ ಸುತ್ತಿನ ಹೈಕಮಾಂಡ್ ಸಭೆ ದೆಹಲಿಯಲ್ಲಿ ನಾಳೆ ಮೊದಲ ಹಂತದ ಮಹತ್ವದ ಸಭೆ ಆಯೋಜನೆಯಾಗಿದ್ದು, ಎಐಸಿಸಿ ನಾಯಕರು ರಾಜ್ಯದ ವಿದ್ಯಮಾನಗಳ ಕುರಿತು ಚರ್ಚೆ […]