ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ 2400 ಕೋಟಿ ಬಿಡುಗಡೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ 24,00ಕೋಟಿ ರೂ. ಹಣ ಬಿಡುಗಡೆ ಆಗಿದೆ.  1,24,48,000 ಕುಟುಂಬದ ಮನೆಯ ಯಜಮಾನಿಯರಿಗೆ 30 ಕಂತುಗಳಲ್ಲಿ ತಲಾ 2000 ರೂ.ಗಳಂತೆ 60,000 ರೂ.ಗಳನ್ನು ಡಿಬಿಟಿ ಮುಖಾಂತರ ಜಮೆ ಮಾಡಲಾಗಿತ್ತು. ಈಗ 31ನೇ ಕಂತಿನ 24,00ಕೋಟಿ ರೂ. ಹಣ ಬಿಡುಗಡೆ ಆಗಿದೆ.  ಈ ಮೂಲಕ ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯ ಸರ್ಕಾರ ಇದುವರೆಗೂ 74,650 ಕೋಟಿ ರೂ.ಗಳನ್ನು ವ್ಯಯಿಸಿದೆ. ಇದರಿಂದ ಒಬ್ಬ ಮನೆ ಯಜಮಾನಿ ಖಾತೆಗೆ […]

ನ್ಯೂಜಿಲೆಂಡ್‌ನಲ್ಲಿ 5.9 ತೀವ್ರತೆಯಲ್ಲಿ ಪ್ರಬಲ ಭೂಕಂಪ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದಲ್ಲಿ (South Island) ಗುರುವಾರ ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ರಿಕ್ಟರ್ ಮಾಪಕದಲ್ಲಿ 5.9 ರಷ್ಟು ತೀವ್ರತೆ ದಾಖಲಾಗಿರುವ ಈ ಭೂಕಂಪದ ಬೆನ್ನಲ್ಲೇ, ಅಧಿಕಾರಿಗಳು ಆರಂಭದಲ್ಲಿ ಸುನಾಮಿ ಮುನ್ನೆಚ್ಚರಿಕೆಯನ್ನು ಹೊರಡಿಸಿದ್ದರು. ಪ್ರವಾಸಿ ತಾಣದ ಬಳಿ ಕೇಂದ್ರಬಿಂದು ನ್ಯೂಜಿಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ‘ಫಿಯೋರ್ಡ್‌ಲ್ಯಾಂಡ್’ನ ಹೆಬ್ಬಾಗಿಲು ಎನಿಸಿಕೊಂಡಿರುವ ‘ತೇ ಅನಾವು’ (Te Anau) ಪಟ್ಟಣದ ಉತ್ತರಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಇತ್ತೆಂದು ನ್ಯೂಜಿಲೆಂಡ್‌ನ […]

ಸಿದ್ದರಾಮಯ್ಯನವರಿಗೆ ಟೌನ್​​ಶಿಪ್​​ ಬಗ್ಗೆ ಇರದ ಆಸಕ್ತಿ ಡಿಕೆಶಿಗೆ ಯಾಕೆ? : ಪ್ರಹ್ಲಾದ್​​ ಜೋಶಿ ಕೌಂಟರ್​​

ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರನ್ನು ಯಾರೂ ಜೈಲಿಗೆ ಕಳುಹಿಸಲ್ಲ. ಅವರು ಮಾಡಿದ ತಪ್ಪು ಮತ್ತು ಭ್ರಷ್ಟಾಚಾರಕ್ಕೆ ಜೈಲಿಗೆ ಹೋದರೆ ಯಾರು ಏನೂ ಮಾಡಲು ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಟಾಂಗ್‌ ಕೊಟ್ಟಿದ್ದಾರೆ. ಬಿಡದಿಯಲ್ಲಿ ವಿವಾದಿತ ಟೌನ್​​ಶಿಪ್​​ ನಿರ್ಮಾಣ ವಿಚಾರವಾಗಿ, ಸಿಎಂ ಡಿಕೆ ಶಿವಕುಮಾರ್​​ ಹೇಳಿಕೆಯೊಂದನ್ನು ನೀಡಿದ್ದರು. ನಾನು ಸಿಎಂ ಆಗಿದ್ದರಿಂದ ತಡೆದುಕೊಳ್ಳುವುದಕ್ಕೆ ಅವರಿಗೆ ಆಗುತ್ತಿಲ್ಲ. ಜೈಲಿಗೆ ಕಳುಹಿಸಲು ಎಷ್ಟು ಸಂಚು ನಡೀತು ಎಂದು ಮುಂದೆ ಹೇಳ್ತೇನೆ. ಜೈಲು ನನಗೆ ಹೊಸದೇನಲ್ಲ ಎಂದು ತಿಳಿಸಿದ್ದರು. ಈ […]

ಕಾಣಿಗೆ ಹಣ ದೇವಾಲಯದ ಅಭಿವೃದ್ಧಿಗೆ ಮಾತ್ರವೇ ಬಳಕೆ : ಡಿಸಿಎಂ ಡಾ.ಜಿ.ಪರಮೇಶ್ವರ

ಶಿವಮೊಗ್ಗ: ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 39 ಸಾವಿರ ದೇವಸ್ಥಾನಗಳಿವೆ. ‘ಎ’ ವರ್ಗದ ದೇವಸ್ಥಾನಗಳಿಗೆ ಸಾಕಷ್ಟು ಹಣ ಬರುತ್ತಿದೆ. ಭಕ್ತರು ಹುಂಡಿಗಳಲ್ಲಿ ಕಾಣಿಕೆಯನ್ನು ಹಾಕುತ್ತಾರೆ. ಹೀಗಾಗಿ ಪ್ರತಿಯೊಂದು ಹುಂಡಿ ಮೇಲೆ ನಿಗಾವಹಿಸಲು 4 ಕಡೆಗಳಿಂದ ಸಿಸಿಟಿವಿ ಅಳವಡಿಸಿ, ಕೇಂದ್ರ ಕಚೇರಿಯಿಂದ ನಿಗಾವಹಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಮಾಧ್ಯಮಕ್ಕೆ ತಿಳಿಸಿದರು.  ದೇವಸ್ಥಾನಗಳನ್ನು ಸಂಪೂರ್ಣವಾಗಿ ಸಿಸಿಟಿವಿ ಮೂಲಕ ನಿಗಾವಹಿಸಲು ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್‌) ಮಾಡಲಾಗುವುದು.‌ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಕಳ್ಳತನ […]

ಗ್ರೇಡ್-1 ಕಾರ್ಯದರ್ಶಿಗಳಿಗೆ ಪಿಡಿಒ ಹುದ್ದೆಗೆ ಬಡ್ತಿಗೆ ಕೌನ್ಸಲಿಂಗ್ ಮೂಲಕ ಸ್ಥಳ ನಿಯೋಜನೆಗೆ ಈಶ್ವರ ಖಂಡ್ರೆ ಚಾಲನೆ 

ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸ್ಥಳೀಯ ವೃಂದದ ಕಾರ್ಯದರ್ಶಿ ಗ್ರೇಡ್-1 ಅಧಿಕಾರಿಗಳಿಗೆ ಪಿಡಿಒ ಆಗಿ ಮುಂಬಡ್ತಿ ನೀಡಲಾಗಿದ್ದು, ಇಂದು ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಚಾಲನೆ ನೀಡಿದರು. ಗಾಂಧೀನಗರದಲ್ಲಿರುವ ಇಲಾಖೆಯ ಆಯುಕ್ತಾಲಯದಲ್ಲಿ ನಡೆದ ಈ ಕೌನ್ಸೆಲಿಂಗ್ ನಲ್ಲಿ ಪಿಡಿಓ ಆಗಿ ಬಡ್ತಿ ಪಡೆದ 80 ಗ್ರೇಡ್ 1 ಕಾರ್ಯದರ್ಶಿಗಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ಖಂಡ್ರೆ, ಗ್ರಾಮಗಳಲ್ಲಿ ಶಾಶ್ವತ […]

ಹಾವುಗಳು ಪ್ರಕೃತಿಯನ್ನು ರಕ್ಷಣೆ ಮಾಡುತ್ತವೆಯೇ? ಹಾಗಾದ್ರೆ ಹಾವಿನ ಪಾತ್ರವೇನು? ಇಲ್ಲಿದೆ ನೋಡಿ ಮಾಹಿತಿ

ಪ್ರತಿ ವರ್ಷ ಜುಲೈ 16 ರಂದು “ವಿಶ್ವ ಹಾವುಗಳ ದಿನ” ಆಚರಿಸಲಾಗುತ್ತದೆ. ಆದರೆ ನಮ್ಮಲ್ಲಿ ಹಾವು ಎಂದಾಕ್ಷಣ ಭಯ, ಹಾವು ಕೊಲ್ಲೋದು, ಮಂತ್ರ ಮಾಡೋದು ನಡೆಯುತ್ತದೆ. ವಿಜ್ಞಾನ ಏನು ಹೇಳುತ್ತದೆ? ಪ್ರಕೃತಿಯಲ್ಲಿ ಹಾವುಗಳ ಪಾತ್ರವೇನು? ನೋಡೋಣ. ಪ್ರಕೃತಿಯಲ್ಲಿ ಹಾವುಗಳ ಪಾತ್ರ – “ಪರಿಸರದ ಪೊಲೀಸ್” ಆಗಿದ್ದು, ಹಾವುಗಳು ಆಹಾರ ಸರಪಳಿಯಲ್ಲಿ ಅತ್ಯಂತ ಮುಖ್ಯ ಕೊಂಡಿಯಾಗಿದೆ. ಇಲಿ-ಬೆಳೆ ರಕ್ಷಣೆ:ಒಂದು ಇಲಿ ವರ್ಷಕ್ಕೆ 25 ಕೆಜಿ ಧಾನ್ಯ ತಿನ್ನುತ್ತದೆ. ಒಂದು ಹಾವು ವರ್ಷಕ್ಕೆ 200-300 ಇಲಿಗಳನ್ನು ತಿನ್ನುತ್ತದೆ. ಅಂದರೆ ಒಂದು […]

ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ

ಬೆಂಗಳೂರು: ಯುವ ಜನತೆ ಭವಿಷ್ಯ ನಿರ್ಧರಿಸುವ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ತಪ್ಪು ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಯುವಕರಿಗೆ ಮೋಸ ಮಾಡಿದ್ದಾರೆ. ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿ ಅಕ್ರಮ ಮಾಡಿದ್ದಾರೆ ಎಂಬ ಆರೋಪಗಳು ಬೆಳಕಿಗೆ ಬಂದಿವೆ. ಈ ಕಾರಣಕ್ಕೆ ಕೆಪಿಎಸ್​​​ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶದ ವಿರುದ್ಧ ಇದೀಗ ಕಾನೂನು ಹೋರಾಟ ನಡೆಯುತ್ತಿದೆ. ಈ ಸಮಯದಲ್ಲಿಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು […]

ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ : ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ- ರಾಜ್ಯದಲ್ಲಿ ಪ್ರೀಮಿಯಂ ದರ ಇಳಿಕೆ!

ಬೆಂಗಳೂರು: ಈ ನಡುವೆ ಮದ್ಯೆ ದರ ಗಗನ ಏರಿದ್ದು ಕೆಲವು ಕಡೆ ಮದ್ಯ ಪ್ರೀಯರು ಪ್ರತಿಭಟನೆ ಮಾಡಿದ್ದು ಉದಾಹರಣೆ ಸಾಕಷ್ಟಿದೆ. ಆದರೆ ಇವತ್ತು ಸ್ಥಿತಿ ಬದಲಾಗಿದೆ ಏನಪ್ಪಾ ವಿಷಯ ಅಂತೀರಾ ಇಲ್ಲಿದೆ ನೋಡಿ ಭಾರತ -ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಜುಲೈ 15ರಿಂದ ಜಾರಿಗೆ ಬಂದಿದೆ. ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರೀಮಿಯಂ ಆಮದು ಮದ್ಯದ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಈಗಾಗಲೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ […]

ಕುಮಾರಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬನ್ನಿ ಅಂತಾರೆ, ಕುಸ್ತಿ ಆಡೋಕೆ ಹೋಗಬೇಕಾ?: ಚಲುವರಾಯಸ್ವಾಮಿ

ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಿರೋದು ಕೆಲವರಿಗೆ ಇಷ್ಟವಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಆಗಿರೋದನ್ನು ತಡೆಯಲು ಆಗದೇ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ದೇವೇಗೌಡ, ಕುಮಾರಸ್ವಾಮಿ, ಅಶೋಕ್ ಆರೋಪ ಮಾಡುತ್ತಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ಮಾತುಕತೆಗೆ ಕರೆದರೆ ವಿಧಾನಸೌಧಕ್ಕೆ ಬರಲ್ಲ ಅಂತಾರೆ. ಪಾಪ ಕುಮಾರಸ್ವಾಮಿ, ಅಶೋಕ್‌ಗೆ ನೋವಾಗಿದೆ ಎಂದು ತಿಳಿಸಿದರು.ಕುಮಾರಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬನ್ನಿ ಅಂತಾರೆ. ಕುಸ್ತಿ ಆಡೋಕೆ ಹೋಗಬೇಕಾ? ರೈತರ ಸಮಸ್ಯೆ ಇತ್ಯರ್ಥ ಮಾಡೋಕೆ ವಿಧಾನಸೌಧ ಇದೆ. ಕೆಂಗಲ್ ಹನುಮಂತಯ್ಯ […]

ಭಾರತ-ಯುಕೆ ಮುಕ್ತ ವ್ಯಾಪಾರದ ಎಫೆಕ್ಟ್: ಕರ್ನಾಟಕಕ್ಕೆ ಬರಲಿವೆ ಬ್ರಿಟಿಷ್ ವಿ.ವಿ.ಗಳು, ಶಾಲಾ ಕ್ಯಾಂಪಸ್ ಗಳು

ಬೆಂಗಳೂರು: ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಬುಧವಾರದಿಂದ ಅನುಷ್ಠಾನಕ್ಕೆ ಬಂದಿದೆ. ಇದರಿಂದ ರಾಜ್ಯದ ಜೈವಿಕ ತಂತ್ರಜ್ಞಾನ, ಫಾರ್ಮಸುಟಿಕಲ್ಸ್, ಜವಳಿ ಮತ್ತು ಗಾರ್ಮೆಂಟ್ಸ್, ಸಮುದ್ರ ಉತ್ಪನ್ನಗಳು, ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಮಷಿನರಿ, ಚಿಕ್ಕಮಗಳೂರು ಮತ್ತು ಕೊಡಗಿನ ಉತ್ಕೃಷ್ಟ ಕಾಫಿ ಹಾಗೂ ಸಾಂಬಾರ ಪದಾರ್ಥಗಳ ವಲಯಕ್ಕೆ ಭಾರೀ ಲಾಭವಾಗಲಿದೆ. ಉದ್ಯಮಿಗಳು ಈ ಸದವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹೆಗಲು ಕೊಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ […]