ರಾಜ್ಯದ ಆಸ್ಪತ್ರೆ, ಶಾಲೆಗಳ ಆವರಣದಲ್ಲಿ ಜಂಕ್ ಫುಡ್ ನಿಷೇಧ- ಸಚಿವ ಯು.ಟಿ. ಖಾದರ್

ಮಂಗಳೂರು: ವಿದ್ಯಾರ್ಥಿಗಳ ಆರೋಗ್ಯದ ವಿಚಾರವಾಗಿ ಉತ್ತಮ ಗುಣಮಟ್ಟದ ಆಹಾರವನ್ನು ತಿನ್ನಬೇಕು ಜಂಕ್ ಫುಡ್ ನಿಂದ ಆರೋಗ್ಯ ಅದೆಗೆಡುತ್ತದೆ ಎನ್ನುವ ಉದ್ದೇಶ ದಿಂದ ಸಚಿವ ಯು.ಟಿ ಖಾದರ್ ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದಾರೆ. ರಾಜ್ಯದ ಎಲ್ಲಾ ಆಸ್ಪತ್ರೆಗಳು ಮತ್ತು ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್ ಗಳಲ್ಲಿ ಜಂಕ್ ಫುಡ್ ನಿಷೇಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಮಂಗಳೂರಿನ ವೆನ್ಲಾಕ್ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕುಂದು ಕೊರತೆ, ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಒಂದರಿಂದ […]
Bengaluru Vehicle: ಬೆಂಗಳೂರಲ್ಲಿ ರಸ್ತೆಗಳನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸುವುದು ಸರಿಯಲ್ಲ : ಸಚಿವ ಕೃಷ್ಣಬೈರೇಗೌಡ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ನಗರ ಪಾಲಿಕೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವರಾಹಿ ದೇವಸ್ಥಾನದ ಬಳಿ ಬಿಡಾಡಿ ವಾಹನಗಳ ಟೋಯಿಂಗ್ ಕಾರ್ಯಕ್ಕೆ ಗಾಂಧಿನಗರದ ಎಂ.ಡಿ ಬ್ಲಾಕ್‌ನ ವಿರಾಹಿ ದೇವಸ್ಥಾನದ ಬಳಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ 1034 ವಾಹನಗಳಿಗೆ ನೋಟಿಸ್‌ಗಳನ್ನು ಅಂಟಿಸಲಾಗಿದ್ದು, 72 ವಾಹನಗಳ ಮಾಲಿಕರು ದಂಡ ಪಾವತಿಸಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ ಎಂದೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ […]
ನನ್ನ ಪತ್ನಿಗೆ ಉಸಿರಾಟದ ಸಮಸ್ಯೆ ಇದೆ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು

ಬೆಂಗಳೂರು: ಪತ್ನಿ ಚೆನ್ನಮ್ಮ ಅವರಿಗೆ ಬೇರೆ ಯಾವ ತೊಂದರೆಯೂ ಇಲ್ಲ, ಉಸಿರಾಟದ ಸಮಸ್ಯೆ ಇದೆ. ಅದೊಂದು ಬಗೆಹರಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪತ್ನಿ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಅವರು ಮಾಹಿತಿ ನೀಡಿದರು. ಮೊನ್ನೆ ನಿನ್ನೆ ಇವತ್ತು ಅವರನ್ನು ವಿಚಾರಿಸಿದ್ದೇನೆ.ಈ ವೇಳೆ, ಉಸಿರಾಟದ ಸಮಸ್ಯೆ ಇದೆ ಎಂದು ಬುಧವಾರ ಆಸ್ಪತ್ರೆಗೆ ದಾಖಲಿಸಿದ್ದೆವು ಎಂದರು. ನಮ್ಮ ಜೊತೆ ಅಭಿಮಾನಿಗಳು, ಕುಟುಂಬದವರು, ವೈದ್ಯರು ಎಲ್ಲರೂ ಇದ್ದಾರೆ. Mostly She may Recover ಎಂದರು. […]
ಇತಿಹಾಸಿಕ ನಗರ ಶ್ರೀರಂಗಪಟ್ಟಣದ ಮಹತ್ವ- ಕಲ್ಲಿನಲ್ಲಿ ಇತಿಹಾಸ ಬರೆದ ಬಿ.ಎಲ್. ರೈಸ್ : ಇದನ್ನೊಮ್ಮೆ ಓದಿ

ಶ್ರೀರಂಗಪಟ್ಟಣ : ನಾವು ಇವತ್ತು ಶ್ರೀರಂಗಪಟ್ಟಣವನ್ನು ‘ಇತಿಹಾಸಿಕ ನಗರ’ ಎಂದು ಕರೆಯುತ್ತೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಬಿ.ಎಲ್. ರೈಸ್” ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಆದರೆ ಬೆಂಜಮಿನ್ ಲೂಯಿಸ್ ರೈಸ್ ಅವರು ಮೈಸೂರು ಸಂಸ್ಥಾನದ ಪುರಾತತ್ವ ಇಲಾಖೆಯ ಮೊದಲ ನಿರ್ದೇಶಕರು. 1886 ರಿಂದ 1908 ರವರೆಗೆ ಅವರು ಮಾಡಿದ ಸಂಶೋಧನೆಯಿಂದಾಗಿ ಶ್ರೀರಂಗಪಟ್ಟಣದ ಮರೆತುಹೋದ ಅನೇಕ ಅಧ್ಯಾಯಗಳು ಬೆಳಕಿಗೆ ಬಂದವು. ಶಾಸನಗಳ ಮೂಲಕ ಇತಿಹಾಸ. ರೈಸ್ ಅವರು Epigraphia Carnatica – Vol 3 Mysore District ಕೃತಿಯಲ್ಲಿ […]
ನ್ಯಾಯವಿರುವಲ್ಲಿ ಶಾಂತಿ ಇದೆ: ಅಂತರಾಷ್ಟ್ರೀಯ ನ್ಯಾಯ ದಿನದ ಮಹತ್ತ ಗೊತ್ತೇ? ಇಲ್ಲಿದೆ ನೋಡಿ

ಪ್ರತಿ ವರ್ಷ ಜುಲೈ 17 ರಂದು ಜಗತ್ತಿನಾದ್ಯಂತ ಅಂತರಾಷ್ಟ್ರೀಯ ನ್ಯಾಯ ದಿನ ಆಚರಿಸಲಾಗುತ್ತದೆ. 1998 ರ ಜುಲೈ 17 ರಂದು ಹೇಗ್‌ನಲ್ಲಿ “ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್” ಸ್ಥಾಪನೆಗೆ ರೋಮ್ ಶಾಸನಕ್ಕೆ ಸಹಿ ಹಾಕಿದ ದಿನವನ್ನು ನೆನಪಿಸುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಕಾರಣ ಇಲ್ಲಿದೆ ನೋಡಿ ಈ ದಿನದ ಮಹತ್ವ ಏನು?ಅಂತರಾಷ್ಟ್ರೀಯ ನ್ಯಾಯ ದಿನದ ಉದ್ದೇಶ ಒಂದೇ – “ಮಾನವ ವಿರುದ್ಧದ ಅಪರಾಧ, ಯುದ್ಧ ಅಪರಾಧ ಮತ್ತು ನರಮೇಧ”ದಂತಹ ಗಂಭೀರ ಅಪರಾಧಗಳಿಗೆ ಶಿಕ್ಷೆ ಖಚಿತಪಡಿಸುವುದು. ಯಾವುದೇ ವ್ಯಕ್ತಿ, ಎಷ್ಟೇ […]
ಕುರುಡಾಯ್ತಾ ಸರ್ಕಾರ? ಸೋನಮ್ ವಾಂಗ್ಚುಕ್ ಆರೋಗ್ಯ ಕ್ಷೀಣ- ವಿಷಯ ತಿಳಿದ್ರು ಗೌರ್ಮೆಂಟ್ ಗಪ್ ಚುಪ್ : ಕಾರಣ ಇಲ್ಲಿದೆ ನೋಡಿ

ನವದೆಹಲಿ: ಶಿಕ್ಷಣ ಪ್ರಸ್ತುತ ಸಮಯದಲ್ಲಿ ಶಿಕ್ಷೆ ನೀಡುತ್ತಿದೆಯೋ, ಪರೀಕ್ಷೆ ಮಾಡುತ್ತಿದೆಯೋ ಎಂದು ಕಲಿತವರಿಗೆ ಅರ್ಥವಾಗದಂತಹ ಸನ್ನಿವೇಶ ಎದುರಾಗಿದೆ. ಕೆಲವೊಂದು ವಿಷಯದಲ್ಲಿ ಭ್ರಷ್ಟಚಾರ,ಲಂಚ ಪಡೆದುಕೊಳ್ಳುವುದು ಸರ್ವೆ ಸಮಾನ್ಯವಾಗಿದ್ದು, ಇದರ ವಿರುದ್ಧ ಧ್ವನಿ ಎತ್ತುವವರ ಸಂಖ್ಯೆ ತೀರಾ ವಿರಳವಾಗಿದೆ. ಆದರೂ ನೀಟ್ ಪರೀಕ್ಷೆಯಲ್ಲಿ ಆಗಿರುಂತಹ ಮೋಸಕ್ಕೆ ವಿದ್ಯಾವಂತರು ಹೈರಾಣಾಗಿದ್ದಾರೆ. ಈ ವಿಚಾರ ಜಗತ್ತಿಗೆ ಗೊತ್ತಿದ್ದು, ಆಡಳಿತ ಕುರುಡಾಗಿದ್ದು ಯುವ ಮನಸ್ಥಿತಿಗಳಿಗೆ ಬೇಸರ ತಂದಿದೆ. ಹೌದು ಜಂತರ್ ಮಂತರ್‌ನಲ್ಲಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು […]
253 ಖಾಲಿ ಇರುವ ಪಿಎಸ್‌ಐ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ!

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಕನಸು ಕಾಣುತ್ತಿರುವ ಯುವಜನತೆಗೆ ಇಲಾಖೆಯು ಮಹತ್ವದ ಮುನ್ಸೂಚನೆಯೊಂದನ್ನು ನೀಡಿದೆ. ಒಟ್ಟು 600 ಸಿವಿಲ್ ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ, ಸದ್ಯ ಖಾಲಿ ಇರುವ 253 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರು (DG&IGP) ಆದೇಶ ಹೊರಡಿಸಿದ್ದಾರೆ. ಜುಲೈ 16, 2026 ರಂದು ಹೊರಬಿದ್ದಿರುವ ಈ ಅಧಿಕೃತ ಪ್ರಕಟಣೆಯು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿರುವ ಅಭ್ಯರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. […]
ಗ್ರಾಮ ಪಂಚಾಯಿತಿಯಿಂದ ಕಾರ್ಪೊರೇಷನ್ ವರೆಗೆ ಈ ಬಾರಿ ಯುವಕರಿಗೆ ಹಾಗೂ ಹೊಸಬರಿಗೆ ಅವಕಾಶ: ಡಿಕೆಶಿ

ನವದೆಹಲಿ: “ಸಚಿವ ಸಂಪುಟದ ವಿಸ್ತರಣೆಯ ಬಗ್ಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಸಾಧ್ಯವಾಗದ ಕಾರಣ, ಅವರನ್ನು ಶನಿವಾರ ಭೇಟಿ ಮಾಡಲಾಗುವುದು. ವರಿಷ್ಠರಿಂದ ಮಾರ್ಗದರ್ಶನ ಪಡೆದು ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಹಳೇ ಕಚೇರಿ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಮಾರ್ಚ್ ಅಂತ್ಯದೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ “ಮತದಾರರ ಪಟ್ಟಿಯ ಸಮಗ್ರ […]
ರಾಜ್ಯದಲ್ಲಿ ಇ-ಸ್ವತ್ತು ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ ರಚನೆ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ಇ-ಸ್ವತ್ತು ಪಡೆಯಲು ಪಂಚಾಯ್ತಿ ಕಚೇರಿಗೆ ಗ್ರಾಮಸ್ಥರು ಅಲೆಯುವುದನ್ನು ತಪ್ಪಿಸಲು ಮನೆಬಾಗಿಲಿಗೇ ಇ-ಸ್ವತ್ತು ನೀಡಲು ತೀರ್ಮಾನಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ, ಇ-ಸ್ವತ್ತು ಪ್ರಕ್ರಿಯೆಯಲ್ಲಿನ ತೊಡಕುಗಳ ನಿವಾರಣೆಗೆ ಪಂಚ ಸದಸ್ಯರ ಸಮಿತಿ ರಚಿಸಲು ಸೂಚನೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ತಂತ್ರಾಂಶ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಸಾವಿರಾರು ಇ-ಸ್ವತ್ತು ಅರ್ಜಿಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ […]
ರಾಜ್ಯದಲ್ಲೂ ಸರ್ಕಾರಿ ನೌಕರರಿಗೆ ಸಿಜಿಎಚ್‌ಎಸ್ ವೈದ್ಯಕೀಯ ದರ ಪರಿಷ್ಕರಣೆಗೆ ಆದೇಶ!

ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ಆರೋಗ್ಯ ಹಿತರಕ್ಷಣೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲೇ ಚಿಕಿತ್ಸಾ ದರಗಳನ್ನು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ನೀಡಿದ್ದು, ಆರ್ಥಿಕ ಇಲಾಖೆಯು ಸಿ.ಜಿ.ಹೆಚ್.ಎಸ್. (CGHS) ದರ ಪರಿಷ್ಕರಣೆಯ ಅಧಿಕೃತ ಆದೇಶ ಹೊರಡಿಸಿದೆ. ನಗದುರಹಿತ ‘ಆರೋಗ್ಯ ಸಂಜೀವಿನಿ’ಗೆ ಹೊಸ ಚುರುಕು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜಾರಿಗೆ ತಂದಿದ್ದ 2025ರ ನೂತನ […]