ನ್ಯಾಯವಿರುವಲ್ಲಿ ಶಾಂತಿ ಇದೆ: ಅಂತರಾಷ್ಟ್ರೀಯ ನ್ಯಾಯ ದಿನದ ಮಹತ್ತ ಗೊತ್ತೇ? ಇಲ್ಲಿದೆ ನೋಡಿ

ಪ್ರತಿ ವರ್ಷ ಜುಲೈ 17 ರಂದು ಜಗತ್ತಿನಾದ್ಯಂತ ಅಂತರಾಷ್ಟ್ರೀಯ ನ್ಯಾಯ ದಿನ ಆಚರಿಸಲಾಗುತ್ತದೆ. 1998 ರ ಜುಲೈ 17 ರಂದು ಹೇಗ್‌ನಲ್ಲಿ “ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್” ಸ್ಥಾಪನೆಗೆ ರೋಮ್ ಶಾಸನಕ್ಕೆ ಸಹಿ ಹಾಕಿದ ದಿನವನ್ನು ನೆನಪಿಸುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಕಾರಣ ಇಲ್ಲಿದೆ ನೋಡಿ

ಈ ದಿನದ ಮಹತ್ವ ಏನು?
ಅಂತರಾಷ್ಟ್ರೀಯ ನ್ಯಾಯ ದಿನದ ಉದ್ದೇಶ ಒಂದೇ – “ಮಾನವ ವಿರುದ್ಧದ ಅಪರಾಧ, ಯುದ್ಧ ಅಪರಾಧ ಮತ್ತು ನರಮೇಧ”ದಂತಹ ಗಂಭೀರ ಅಪರಾಧಗಳಿಗೆ ಶಿಕ್ಷೆ ಖಚಿತಪಡಿಸುವುದು. ಯಾವುದೇ ವ್ಯಕ್ತಿ, ಎಷ್ಟೇ ದೊಡ್ಡವನಾಗಿದ್ದರೂ ಕಾನೂನಿನ ಮುಂದೆ ಸಮಾನ ಎಂಬ ಸಂದೇಶವನ್ನು ಜಗತ್ತಿಗೆ ಸಾರುವುದು. ನ್ಯಾಯವಿರುವ ಸಮಾಜವೇ ಶಾಂತಿಯನ್ನು ನಿರ್ಮಿಸುತ್ತದೆ. ಸಮಾನತೆ ಎಲ್ಲರ ಹಕ್ಕಾಗಲಿ, ನ್ಯಾಯ ಎಲ್ಲರ ಪಾಲಾಗಲಿ” ಎಂಬುದೇ ಈ ದಿನದ ಮೂಲ ತತ್ವವಾಗಿದೆ.

ನ್ಯಾಯ ಮತ್ತು ಸಮಾಜ

ನ್ಯಾಯ ಎಂದರೆ ಕೇವಲ ಕೋರ್ಟ್-ಕಚೇರಿಗೆ ಸಂಬಂಧಿಸಿದ್ದಲ್ಲ. ಅದು ನಮ್ಮ ದೈನಂದಿನ ಜೀವನದಲ್ಲೂ ಇರಬೇಕು.
ಸಾಮಾಜಿಕ ನ್ಯಾಯ ಜಾತಿ, ಧರ್ಮ, ಲಿಂಗ, ಬಡ-ಶ್ರೀಮಂತ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ.
ಆರ್ಥಿಕ ನ್ಯಾಯ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಮತ್ತು ಗೌರವಯುತ ಜೀವನ.
ಪರಿಸರ ನ್ಯಾಯ ಪ್ರಕೃತಿಯನ್ನು ನಾಶ ಮಾಡದೆ ಮುಂದಿನ ಪೀಳಿಗೆಗೂ ಸಂಪನ್ಮೂಲ ಉಳಿಸುವುದು.

ಇನ್ನು ಈ ದಿನ ಕಾರ್ಯಕ್ರಮವೊಂದನ್ನು ಶ್ರೀರಂಗಪಟ್ಟಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು. ಇದೇ ಸಭೆಯಲ್ಲಿ ವಕೀಲರಾದ ಸಿ ಎಸ್ ವೆಂಕಟೇಶ್ ಮಾತನಾಡಿದ್ದಾರೆ.
ಸಂವಿಧಾನ ಆಶಯದ ಆದರ್ಶವಾದಿ ಅವರು “ನೀರು, ನಿಧಿ, ನಿಯಾಮಕಗಳು” ದ ಮೂಲಕ ಪ್ರದೇಶಗಳ ನಡುವಿನ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು. ಅವರ ಪ್ರಕಾರ ನಿಜವಾದ ಅಭಿವೃದ್ಧಿ ಎಂದರೆ ಎಲ್ಲರಿಗೂ ನ್ಯಾಯ ಸಿಗುವುದು. ಅವರ ಮಾತಿನಂತೆ, “ಅನ್ಯಾಯ ಸಹಿಸುವುದೂ ಒಂದು ರೀತಿಯ ಅನ್ಯಾಯವೇ”. ಹೀಗಾಗಿ ತಪ್ಪು ಕಂಡಾಗ ಪ್ರಶ್ನಿಸುವ ಧೈರ್ಯ ನಮ್ಮಲ್ಲಿ ಇರಬೇಕು ಎಂದಿದ್ದಾರೆ.

ಕೆ ಎಸ್ ಜಯಶಂಕರ್ ಸಮರ್ಪಣಾ ಟ್ರಸ್ಟ್, ಕಡತನಾಳು ಹಾಗೂ ಸಿ ಎಸ್ ವೆಂಕಟೇಶ್ ಶ್ರೀರಂಗಪಟ್ಟಣ ಪ್ರಜ್ಞಾವಂತ ವೇದಿಕೆ ಸಹಯೋಗದಿಂದ ಈ ಅಂತರಾಷ್ಟ್ರೀಯ ನ್ಯಾಯ ದಿನದಂದು ಈ ಪ್ರತಿಜ್ಞೆ ಮಾಡಿದರು.

ಜಾಗೃತಿ ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳೋಣ. ಅನ್ಯಾಯಕ್ಕೆ ಒಳಗಾದವರಿಗೆ ಕಾನೂನಿನ ಸಹಾಯ ದೊರಕಿಸಿ ಕೊಡೋಣ.ಸಮಾನತೆ ಮನೆ, ಶಾಲೆ, ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡೋಣ
ಶಾಂತಿ ಮಾತಿನಿಂದ, ಸಹನೆಯಿಂದ ಸಮಸ್ಯೆ ಬಗೆಹರಿಸೋಣ ಎಂಬ ಹೇಳಿಕೆಗಳನ್ನು ಸಭೆಯಲ್ಲಿ ಹೇಳಿದರು.

ನ್ಯಾಯವಿಲ್ಲದ ಅಭಿವೃದ್ಧಿ, ಶಾಂತಿಯಿಲ್ಲದ ಪ್ರಗತಿ ಅರ್ಥಹೀನ. ಒಬ್ಬ ವ್ಯಕ್ತಿಗೆ ಆದ ಅನ್ಯಾಯ ಇಡೀ ಸಮಾಜಕ್ಕೆ ಆದ ಗಾಯ. ಈ ಜುಲೈ 17 ರಂದು ನಾವೆಲ್ಲರೂ “ಸಮರ್ಪಣೆಯಿಂದ ಸಂರಕ್ಷಣೆಗೆ” ಎಂಬ ಧ್ಯೇಯದೊಂದಿಗೆ ನ್ಯಾಯಪರ ಸಮಾಜ ಕಟ್ಟಲು ಕೈಜೋಡಿಸೋಣ. ಏಕೆಂದರೆ ನ್ಯಾಯ ಇದ್ದಾಗ ಮಾತ್ರ ಮಾನವತೆ ಬದುಕುತ್ತದೆ ಎಂದು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *