ಬಾಗಲಕೋಟೆ: ಜಿಲ್ಲೆಯ ಕಳೆದ ದಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿದೆ. ಕೆಲವು ಕಡೆ ಮಳೆಯ ಅಬ್ಬರಕ್ಕೆ ಜನ ಹೈರಾಣಾಗಿದ್ದು, ಆಚೆ ಬರುವುದಕ್ಕೂ ಬಿಡದಂತೆ ಮಳೆ ಸುರಿದಿದೆ.
ಇನ್ನು ಇಳಕಲ್ ನಗರದಲ್ಲಿ ರಾತ್ರಿ ಸತತ 6 ರಿಂದ 7 ಗಂಟೆಗಳ ಕಾಲ ಸುರಿದ ಭರ್ಜರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆ ನೀರು ಸರಾಗವಾಗಿ ಹರಿದು ಹೋಗದ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇನ್ನು ಹಲವು ವಸತಿ ಪ್ರದೇಶಗಳಲ್ಲಿ ಮಳೆ ನೀರು ಮನೆಗಳ ಬಾಗಿಲಿಗೆ ಬಂದು ನಿಂತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸುಮಾರು ಎರಡು ಅಡಿಯಷ್ಟು ನೀರು ನಿಂತಿದ್ದರಿಂದ ಕಾರು ಮತ್ತು ಬೈಕ್ ಸವಾರರು ತೀವ್ರ ಸಂಕಷ್ಟ ಎದುರಿಸಿದರು.
ಮತ್ತು ಇಲಕಲ್ ಅಕ್ಕ-ಪಕ್ಕ ಬರುವ ಹಳ್ಳಿಗಳಲ್ಲಿಯೂ ಭಾರೀ ಮಳೆಯಾಗಿದ್ದು, ದಿನ ಪೂರ್ತಿ ಗ್ರಾಮಸ್ಥರು ಮನೆಯಲ್ಲಿಯೇ ಇರುವಂತಹ ಸನ್ನಿವೇಶ ಎದುರಾಗಿತ್ತು.
ಇನ್ನು ಹಲವು ಕಡೆ ಮಳೆಯ ಪರಿಣಾಮಕ್ಕೆ ಕರೆಂಟ್ ಇಲ್ಲದೆ ಗ್ರಾಮಸ್ಥರು ಪರಿದಾಡಿದ್ದಾರೆ. ಈ ಜಿಲ್ಲೆಯ ಸೈಡ್ ಮೊದಲು ಕಡಿಮೆ ಮಳೆ ಬರುತ್ತಿತ್ತು. ಬಿತ್ತಿದ ಬೆಳೆ ಕಣ್ಮರೆಯಾಗುತ್ತಿತ್ತು. ಈ ಕಾರಣಕ್ಕೆ ಗ್ರಾಮಸ್ಥರು ಪೂಜೆ-ಪುನಸ್ಕಾರಗಳನ್ನು ಮಾಡಿದ್ದರು.
ಇವರು ಪೂಜೆಯ ಫಲಕ್ಕೆ ಕಳೆದ ದಿನ ಭರ್ಜರಿ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಸಂತಸ ವ್ಯಕ್ತಪಡಿಸಿದ್ದು ಮಳೆ ಬಂದರೆ ಸಾಕು ಕರೆಂಟ್ ಇರುವುದಿಲ್ಲ ಎಂದು ಕೆಲ ಗ್ರಾಮಸ್ಥರು ಹೇಳಿದ್ದಾರೆ.





