ನನ್ನ ಪತ್ನಿಗೆ ಉಸಿರಾಟದ ಸಮಸ್ಯೆ ಇದೆ: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು

ಬೆಂಗಳೂರು: ಪತ್ನಿ ಚೆನ್ನಮ್ಮ ಅವರಿಗೆ ಬೇರೆ ಯಾವ ತೊಂದರೆಯೂ ಇಲ್ಲ, ಉಸಿರಾಟದ ಸಮಸ್ಯೆ ಇದೆ. ಅದೊಂದು ಬಗೆಹರಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ತಿಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪತ್ನಿ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಅವರು ಮಾಹಿತಿ ನೀಡಿದರು. ಮೊನ್ನೆ‌ ನಿನ್ನೆ ಇವತ್ತು ಅವರನ್ನು ವಿಚಾರಿಸಿದ್ದೇನೆ.ಈ ವೇಳೆ, ಉಸಿರಾಟದ ಸಮಸ್ಯೆ ಇದೆ ಎಂದು ಬುಧವಾರ ಆಸ್ಪತ್ರೆಗೆ ದಾಖಲಿಸಿದ್ದೆವು ಎಂದರು.

ನಮ್ಮ ಜೊತೆ ಅಭಿಮಾನಿಗಳು, ಕುಟುಂಬದವರು, ವೈದ್ಯರು ಎಲ್ಲರೂ ಇದ್ದಾರೆ. Mostly She may Recover ಎಂದರು. ನಿಧಾನವಾಗಿ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ವೈದ್ಯರು ಕೈ ಮೀರಿ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.

. ಬೇರೆ ಯಾವುದೇ ತೊಂದರೆ ಇಲ್ಲ. ತಜ್ಞರು ಚಿಕಿತ್ಸೆ ಕೊಡುತ್ತಿದ್ದಾರೆ. ತಕ್ಷಣ ಉಸಿರಾಟ ಸಮಸ್ಯೆ ಬಗೆ ಹರಿಯಲ್ಲಎಂದು ವೈದ್ಯರು ಹೇಳಿದ್ದಾರೆ. ಅವರ ಹಾರ್ಟ್, ಕಿಡ್ನಿ ಎಲ್ಲಾ ಸರಿಯಾಗಿದೆ. ಲಂಗ್ಸ್ ಸಮಸ್ಯೆ ಇದೆ. ಉಸಿರಟಾದ ಸಮಸ್ಯೆ ಒಂದು ಬಗೆಹರಿಯಬೇಕು ಎಂದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others