ನವದೆಹಲಿ: ಶಿಕ್ಷಣ ಪ್ರಸ್ತುತ ಸಮಯದಲ್ಲಿ ಶಿಕ್ಷೆ ನೀಡುತ್ತಿದೆಯೋ, ಪರೀಕ್ಷೆ ಮಾಡುತ್ತಿದೆಯೋ ಎಂದು ಕಲಿತವರಿಗೆ ಅರ್ಥವಾಗದಂತಹ ಸನ್ನಿವೇಶ ಎದುರಾಗಿದೆ. ಕೆಲವೊಂದು ವಿಷಯದಲ್ಲಿ ಭ್ರಷ್ಟಚಾರ,ಲಂಚ ಪಡೆದುಕೊಳ್ಳುವುದು ಸರ್ವೆ ಸಮಾನ್ಯವಾಗಿದ್ದು, ಇದರ ವಿರುದ್ಧ ಧ್ವನಿ ಎತ್ತುವವರ ಸಂಖ್ಯೆ ತೀರಾ ವಿರಳವಾಗಿದೆ. ಆದರೂ ನೀಟ್ ಪರೀಕ್ಷೆಯಲ್ಲಿ ಆಗಿರುಂತಹ ಮೋಸಕ್ಕೆ ವಿದ್ಯಾವಂತರು ಹೈರಾಣಾಗಿದ್ದಾರೆ. ಈ ವಿಚಾರ ಜಗತ್ತಿಗೆ ಗೊತ್ತಿದ್ದು, ಆಡಳಿತ ಕುರುಡಾಗಿದ್ದು ಯುವ ಮನಸ್ಥಿತಿಗಳಿಗೆ ಬೇಸರ ತಂದಿದೆ.
ಹೌದು ಜಂತರ್ ಮಂತರ್‌ನಲ್ಲಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಇದೀಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕಾರಣ ಎಲ್ಲರಿಗೂ ಗೊತ್ತೆ ಇದೆ. ನೀಟ್ ಪರೀಕ್ಷೆಯ ಮೋಸಕ್ಕೆ ಸಾಕಷ್ಟು ವಿದ್ಯಾರ್ಥಿಗಳು ಬಲಿಪಶು ಆಗಿದ್ದಾರೆ ಅವರಿಗೆ ನ್ಯಾಯ ಸಿಗಬೇಕು, ಮತ್ತು ವಾಸ್ತವದಲ್ಲಿ ಓದುವವರಿಗೆ ಬೆಂಬಲ,ಅನುಕೂಲ ಸಿಗಬೇಕು ಎಂದು ಸೋನಮ್ ವಾಂಗ್ಚುಕ್ ಯುವಜನತೆಯೊಂದಿಗೆ ಹೋರಾಟ ಮಾಡುತ್ತಿದ್ದರು. ಇವರ ಹೋರಾಟ ಮಾತ್ರ ಉಪವಾಸದಿಂದ ಕೂಡಿತ್ತು. ಈ ಉಪವಾಸದಿಂದ ಅವರ ಆರೋಗ್ಯ ಕ್ಷೀಣವಾಗಿದೆ.
ಇದಷ್ಟೆ ಅಲ್ಲದೇ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಕಾಕ್ರೋಚ್ ಜನತಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ವಾಂಗ್ಚುಕ್ ಅವರು ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವುದರಿಂದ ಹೈಕೋರ್ಟ್ ಆದೇಶಗಳಿಗೆ ಅನುಸಾರವಾಗಿ ಮತ್ತು ತಜ್ಞರ ವೈದ್ಯಕೀಯ ಸಲಹೆಯ ಮೇರೆಗೆ ಇದೀಗ ಆಸ್ಪತ್ರೆಗೆ ರವಾನಿಸಲಾಗಿದೆ.
ವಾಂಗ್ಚುಕ್ ಅವರ ದೈನಂದಿನ ವೈದ್ಯಕೀಯ ಆರೋಗ್ಯ ತಪಾಸಣೆ ನಡೆಸುವಂತೆ ನ್ಯಾಯಾಲಯ ಎರಡು ದಿನಗಳ ಹಿಂದೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ವಾಂಗ್ಚುಕ್ ಅವರನ್ನು ಪರೀಕ್ಷಿಸಿದ ವೈದ್ಯರು, ಅವರ ಅಂಗಾಂಗಗಳು ವಿಫಲಗೊಳ್ಳುತ್ತಿವೆ ಎಂದು ಕಳವಳಗೊಂಡಿದ್ದರು.
ವಾಂಗ್ಚುಕ್ ಅವರನ್ನು ಅಗತ್ಯ ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಇದೀಗ ಪೊಲೀಸ್ರು ಮಾಹಿತಿ ನೀಡಿದ್ದಾರೆ. ಪ್ರತಿಭಟನಾಕಾರರು ಜಂತರ್ ಮಂತರ್ ಅನ್ನು ಶಾಂತಿಯುತವಾಗಿ ತೆರವುಗೊಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಈ ವಿಚಾರಕ್ಕೆ ಗೌರವಾನ್ವಿತ ಹೈಕೋರ್ಟ್‌ನ ಆದೇಶಗಳನ್ನು ಪಾಲಿಸುವಾಗ ಪ್ರತಿಭಟನಾಕಾರರು ಅಡಚಣೆ ಉಂಟುಮಾಡಲು ಪ್ರಯತ್ನಿಸಿದ್ದಾರೆ.
ಇದರಿಂದ ಸ್ವಲ್ಪ ಗದ್ದಲ ಉಂಟಾಗಿದ್ದು, , ಪೊಲೀಸರು ಸಂಯಮ ವಹಿಸಿ ಸುರಕ್ಷಿತವಾಗಿ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವಿಚಾರ ಸರ್ಕಾರಕ್ಕೆ ತಿಳಿದರು ಖ್ಯಾರೆ ಎನ್ನದೆ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸ ಎನಿಸುತ್ತದೆ. ಸೋನಮ್ ವಾಂಗ್ಚುಕ್ ಯುವ ಜನಕ್ಕೆ ಬೆಂಬಲ ನೀಡಿ ದೇಶವನ್ನೇ ಗೆದ್ದಿದ್ದಾರೆ,ಇದವ ಕಾಯಕ್ಕೆ ಸರ್ಕಾರ ಮಾತ್ರ ಅಸ್ತು ಎನ್ನುತ್ತಿಲ್ಲ. ಈ ವಿಚಾರ ಮುಂದೆನಾಗುತ್ತದೆ ಎಂದು ಕಾದು ನೋಡಬೇಕಿದೆ.





