ಐದು ವರ್ಷದ ಮಗುವಿನ ಲಿವರ್ ದಾನದಿಂದ ಬಾಲಕಿಗೆ ಹೊಸ ಬದುಕು: ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿ ಲಿವರ್ ಟ್ರಾನ್ಸ್‌ಪ್ಲಾಂಟ್

ಬೆಂಗಳೂರು: ಐದು ವರ್ಷದ ಮಗುವಿನ ಅಂಗಾಂಗ ದಾನವು 13 ವರ್ಷದ ಬಾಲಕಿ ಲಕ್ಷ್ಮೀ ಪ್ರಿಯಾ ಅವರಿಗೆ ಹೊಸ ಬದುಕಿನ ಭರವಸೆ ನೀಡಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಪರೂಪದ ಜನ್ಮಜಾತ ಪಿತ್ತನಾಳದ ಕಾಯಿಲೆ ಬಿಲಿಯರಿ ಅಟ್ರೇಶಿಯಾ (Biliary Atresia) ಯಿಂದ ಬಳಲುತ್ತಿದ್ದ ಲಕ್ಷ್ಮೀ ಪ್ರಿಯಾ ಅವರಿಗೆ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಇದೀಗ ಆರೋಗ್ಯಕರ ಜೀವನದತ್ತ ಚೇತರಿಸಿಕೊಳ್ಳುತ್ತಿದ್ದಾರೆ. ಶಿಶುವಾಗಿದ್ದಾಗಲೇ ಕಾಯಿಲೆ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಕಸಾಯಿ ಪೋರ್ಟೋಎಂಟೆರೋಸ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. […]
ಒಂದೇ ಸೂರಿನಡಿಯಲ್ಲಿ ಸಮಗ್ರ ಆರೋಗ್ಯ ಸೇವೆ, ಕೋರಮಂಗಲದಲ್ಲಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭಿಸಿದ ‘ಹ್ಯಾಪಿಯೆಸ್ಟ್ ಹೆಲ್ತ್’

ಬೆಂಗಳೂರು: ಗುಣಮಟ್ಟದ ಆರೋಗ್ಯ ಸೇವೆಯನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ‘ಹ್ಯಾಪಿಯೆಸ್ಟ್ ಹೆಲ್ತ್’ ಸಂಸ್ಥೆಯು, ಬೆಂಗಳೂರಿನ ಕೋರಮಂಗಲದಲ್ಲಿ ನೂತನ ಸ್ಪೆಷಾಲಿಟಿ ಕ್ಲಿನಿಕ್‌ಗಳನ್ನು ಲೋಕಾರ್ಪಣೆಗೊಳಿಸಿದೆ. ಸಾಂಪ್ರದಾಯಿಕ ಆಸ್ಪತ್ರೆಗಳ ವಾತಾವರಣಕ್ಕಿಂತ ಭಿನ್ನವಾಗಿ, ಜನಸ್ನೇಹಿ ಕ್ಲಿನಿಕ್‌ಗಳನ್ನು ನಿರ್ಮಿಸುವ ಗುರಿಯೊಂದಿಗೆ ಕೋರಮಂಗಲದ 6ನೇ ಬ್ಲಾಕ್‌ನಲ್ಲಿರುವ ‘ಕರ್ತವ್ಯ’ದಲ್ಲಿ ಈ ನೂತನ ಕೇಂದ್ರವನ್ನು ಆರಂಭಿಸಿದೆ. ಬರೋಬ್ಬರಿ 9,000 ಚದರ ಅಡಿ ವಿಸ್ತೀರ್ಣದಲ್ಲಿ ನಾಲ್ಕು ಮಹಡಿಗಳಲ್ಲಿ ಹರಡಿಕೊಂಡಿರುವ ಈ ಕ್ಲಿನಿಕ್ ವಿಶಿಷ್ಟ ಆರೋಗ್ಯ ಸೇವೆಗೆ ನಾಂದಿ ಹಾಡಿದೆ. ಯಾವೆಲ್ಲಾ ಸೌಲಭ್ಯಗಳಿವೆ? ಈ ನೂತನ […]
ಮತ್ತೆ ಬೆಂಗಳೂರಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ನಗರೀಕರಣದ ಪರಿಣಾಮವಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ನುಗ್ಗುವ ಆತಂಕಕಾರಿ ಘಟನೆಗಳು ಮುಂದುವರಿದಿವೆ. ಈ ಹಿಂದೆ ದಕ್ಷಿಣ ಬೆಂಗಳೂರು ಹಾಗೂ ಮಾಗಡಿ ರಸ್ತೆಯ ಆಸುಪಾಸಿನಲ್ಲಿ ಚಿರತೆಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದವು. ಇದೀಗ ನಗರದ ಬಿಇಎಲ್ ಲೇಔಟ್ ಮತ್ತು ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳು ಆತಂಕದಿಂದ ದಿನದೂಡುವಂತಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆ ಸಂಚಾರ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್‌ನಲ್ಲಿ ನಿನ್ನೆ ತಡರಾತ್ರಿ ಚಿರತೆಯ ಸಂಚಾರ ಪತ್ತೆಯಾಗಿದೆ. ತಡರಾತ್ರಿ ಸುಮಾರು […]
ಅಭಿಮಾನಿಗಳ ಆಶೀರ್ವಾದದೊಂದಿಗೆ, ನನ್ನ ಹೊಸ ಜೀವನ ಮುಂದುವರಿಯುತ್ತದೆ: ನಟ ಜಯಂ ರವಿ

ರವಿ ಮೋಹನ್ ಅಲಿಯಾಸ್ ಜಯಂ ರವಿ, ತಮಿಳು ಚಿತ್ರರಂಗದ ಜನಪ್ರಿಯ ನಾಯಕ ನಟರಾಗಿದ್ದಾರೆ.ಹಲವಾರು ಚಿತ್ರಗಳಲ್ಲಿ ನಟನೆ ಮಾಡಿ ಜನ ಮೆಚ್ಚುಗೆ ಪಾತ್ರರಾಗಿದ್ದರು.ದೊಡ್ಡ ಸ್ಟಾರ್ ಎನಿಸಿಕೊಂಡಿಲ್ಲವಾದರೂ ಸಹ ಸಾಕಷ್ಟು ಅಭಿಮಾನಿಗಳನ್ನು, ಸಿನಿಮಾ ಅವಕಾಶಗಳನ್ನು ಹೊಂದಿರುವ ನಟ ರವಿ ಮೋಹನ್. 23 ವರ್ಷಗಳಿಂದ ನಾಯಕ ನಟನಾಗಿ ನಟಿಸುತ್ತಿರುವ ರವಿ ಮೋಹನ್, ಇತ್ತೀಚೆಗೆ ತಮ್ಮ ಖಾಸಗಿ ಬದುಕಿನ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದರು. ಪತ್ನಿ ಆರತಿ ರವಿ ಅವರೊಂದಿಗಿನ ಸಂಬಂಧ ಬಿಗಡಾಯಿಸಿದ್ದು, ಈ ಕುರಿತು ಕೆಲ ವಾರಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ, ತಮ್ಮ […]
ಪ್ರವಾಸಿಗರಿಗೆ ಭರ್ಜರಿ ಕೊಡುಗೆ: ‘ಒನ್ ಸರ್ಕಲ್’ ಗ್ಲೋಬಲ್ ರಿವಾರ್ಡ್ಸ್ ಪ್ರೋಗ್ರಾಂ ಆರಂಭಿಸಿದ ಮೇಕ್ ಮೈ ಟ್ರಿಪ್!

ಬೆಂಗಳೂರು: ದೇಶದ ಅತಿದೊಡ್ಡ ಆನ್‌ಲೈನ್ ಟ್ರಾವೆಲ್ ಪ್ಲಾಟ್‌ಫಾರ್ಮ್ ‘ಮೇಕ್ ಮೈ ಟ್ರಿಪ್’ ಪ್ರವಾಸಿಗರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಭಾರತೀಯ ಪ್ರವಾಸಿಗರನ್ನೇ ಕೇಂದ್ರವಾಗಿಟ್ಟುಕೊಂಡು ವಿನ್ಯಾಸಗೊಳಿಸಲಾದ ‘ಒನ್ ಸರ್ಕಲ್’ ಎಂಬ ಬೃಹತ್ ಜಾಗತಿಕ ರಿವಾರ್ಡ್ಸ್ ಕಾರ್ಯಕ್ರಮಕ್ಕೆ ಸಂಸ್ಥೆ ಗುರುವಾರ ಚಾಲನೆ ನೀಡಿದೆ. ವಿಶ್ವದಾದ್ಯಂತ 1,002 ನಗರಗಳಲ್ಲಿರುವ ಬರೋಬ್ಬರಿ 13,376 ವಸತಿ ಪ್ರಾಪರ್ಟಿಗಳನ್ನು (ಹೋಟೆಲ್, ಹೋಮ್‌ಸ್ಟೇ, ವಿಲ್ಲಾಗಳು) ಒಂದೇ ವೇದಿಕೆಯಡಿ ತಂದಿರುವುದು ಈ ಯೋಜನೆಯ ಅತಿದೊಡ್ಡ ಮೈಲಿಗಲ್ಲಾಗಿದೆ. ಶೇ. 10ರಷ್ಟು ರಿವಾರ್ಡ್ ಗ್ಯಾರಂಟಿ, ಗ್ರಾಹಕರಿಗೆ ಬಂಪರ್ ಲಾಭ ‘ಒನ್ ಸರ್ಕಲ್’ ನೆಟ್‌ವರ್ಕ್ ಅಡಿ […]
ಬೆಂಗಳೂರು ದಕ್ಷಿಣದಲ್ಲಿ ಏರ್ಪೋರ್ಟ್ ಮಾಡಲು ಸರ್ಕಾರ ಒಲವು : 2ನೇ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಸಿಎಂ ಮಹತ್ವದ ಸಭೆ

DK Sivakumarಬೆಂಗಳೂರು: ರಾಜ್ಯ ಸರ್ಕಾರ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆಗೆ ವೇಗ ನೀಡಿದೆ. ಈ ಸಂಬಂಧ ಇಂದು ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ಮಾಡಲಾಗಿದೆ.ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವಿಮಾನ ಪ್ರಯಾಣಿಕರ ಸಂಖ್ಯೆ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಎರಡನೇ ಏರ್ಪೋರ್ಟ್ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಎರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ. ಒಂದು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯ ಚುಡಹಳ್ಳಿ–ಸೋಮನಹಳ್ಳಿ ಪ್ರದೇಶ. ಮತ್ತೊಂದು […]
ಸಿಎಂ ಡಿಕೆಶಿ ಬೆಳಗಾವಿಗೆ ಬರುವ ಮುನ್ನ, ಮಹಾರಾಷ್ಟ್ರದಲ್ಲಿ ಮಿಂಚಿನ ಬೆಳವಣಿಗೆಯಾಗಿದೆ: ಫಡ್ನವಿಸ್

Devendra Fadnavisಬೆಳಗಾವಿ: ಸಿಎಂ ಡಿಕೆಶಿ ಬೆಳಗಾವಿಗೆ ಬರುವ ಮುನ್ನ, ಮಹಾರಾಷ್ಟ್ರದಲ್ಲಿ ಮಿಂಚಿನ ಬೆಳವಣಿಗೆಯಾಗಿದೆ ಎಂದು ಸಿಎಂ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ. ಸಿಎಂ ದೇವೇಂದ್ರ ಫಡ್ನವಿ ನೇತೃತ್ವದಲ್ಲಿ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆಯನ್ನ ಮಹಾರಾಷ್ಟ್ರ ಸರ್ಕಾರ ಕೈಗೊಂಡಿದ್ದು, ಈ ಸಭೆಯಲ್ಲಿ ಸಿಎಂ ದೇವೇಂದ್ರ ಫಡ್ನವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮುಂಬೈನ ರಾಜಭವನದಲ್ಲಿ ನಡೆದ ಸಮಿತಿ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗವಹಿಸಿದ್ದರು. ಮಾಜಿ ಸಿಎಂ ಶರದ್ ಪವಾರ್, ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ಸುನೇತ್ರಾ ಪವಾರ್, ನಿತೇಶ್ ರಾಣಾ ಸೇರಿ […]
ಬರಗಾಲದಿಂದ ಬಸವಳಿದ್ದ ಕರ್ನಾಟಕದಲ್ಲಿ ಜೋರಾಯ್ತು ಮುಂಗಾರು ಮಳೆಯ ಆರ್ಭಟ

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ವರುಣಾಬ್ಬರ ಜೋರಾಗಿದ್ದು, ರೈತರ ಮೋಗದಲ್ಲಿ ಸಂತಸ ಮೂಡಿಸಿದೆ. ಬರಗಾಲದಿಂದ ಬಸವಳಿದ್ದ ರಾಜ್ಯದಲ್ಲಿ ಈಗ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಮುಂದಿನ 3 ದಿನಗಳ ಕಾಲ ಕರಾವಳಿ ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲಭಾಗಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಯಾದಗಿರಿ ರಾಯಚೂರು, ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. 3 ದಿನಗಳ ಬಳಿಕ ಈ […]
ಟ್ರಂಪ್ ಮಾಸ್ಟರ್ ಪ್ಲ್ಯಾನ್‌ಗೆ ಇರಾನ್ ಫುಲ್ ಸುಸ್ತು: ಯುದ್ಧ ಅಂತ್ಯ ಎಂದ ಬೆನ್ನಲ್ಲೇ ಕದನ ಆರಂಭ ಮಾಡಿದ ದೊಡ್ಡಣ್ಣ

ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಗತ್ತಿಗೆ ಬೀರುತ್ತಿದ್ದು, ಆದರೂ ಇದಕ್ಕೆ ವಿಶ್ವ ಸಂಸ್ಥೆ ಮಧ್ಯೆ ಪ್ರವೇಶ ಮಾಡುತ್ತಿಲ್ಲದಿರುವುದು ಆಶ್ಚರ್ಯಕವಾಗಿದೆ. ಇತ್ತ ಯುದ್ಧ ನಿಂತೇ ಬಿಡುತ್ತದೆ ಎಂದು ಬಲವಾಗಿ ನಂಬಿದವರಿಗೆ ಬರೆ ಮೇಲೆ ಬರೆ ಬೀಳುತ್ತಲೇ ಇದೆ. ಯುದ್ಧದ ಸ್ಥಿತಿ ಕಂಡು ಭಾರತದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಗಗನದತ್ತ ಏರುತ್ತಲೇ ಇದೆ. ಆದರೂ ಇತ್ತ ಶಾಶ್ವತ ಶಾಂತಿಯ ಕನಸು ಕಾಣುತ್ತಿದ್ದ ವಿಶ್ವಶಾಂತಿ ಪ್ರಿಯರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್ ಕೊಟ್ಟು ಇರಾನ್ ಗೆ ಮಾತ್ರವಲ್ಲದೆ […]
ಮನೆ ಮಾಲೀಕರು, ಬಾಡಿಗೆದಾರರಿಗೆ ಸಿಹಿ ಸುದ್ದಿ: ಗೃಹ ಜ್ಯೋತಿ ಬಗ್ಗೆ ಬೆಸ್ಕಾಂ ನೀಡಿದ ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು : ಮನೆ ಮಾಲೀಕರು, ಬಾಡಿಗೆದಾರರು ಗೃಹ ಜ್ಯೋತಿ ವಿಚಾರಕ್ಕೆ ಸುಸ್ತಾಗಿದ್ದರು. ಎಲ್ಲಿ ಕರೆಂಟ್ ಬಿಲ್ ಹೆಚ್ಚಿನ ಮಟ್ಟದಲ್ಲಿ ಬರುತ್ತದೆ ಎಂದು ಆದರೆ ಇದೇ ವಿಚಾರಕ್ಕೆ ಬೆಸ್ಕಾಂ ಮಾಹಿತಿ ನೀಡಿದೆ. ಹೌದು 023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇದೇ ವಿಚಾರಕ್ಕೆ ಸಾರ್ವಜನಿಕರಿಗೆ ಬೆಸ್ಕಾಂ ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಮುಖ್ಯವಾಗಿ ಬಾಡಿಗೆದಾರರ ಗೊಂದಲಗಳಿಗೆ ಸ್ಪಷ್ಟ ಮಾಹಿತಿ ಕೊಟ್ಟಿದೆ. ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ […]