ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಗತ್ತಿಗೆ ಬೀರುತ್ತಿದ್ದು, ಆದರೂ ಇದಕ್ಕೆ ವಿಶ್ವ ಸಂಸ್ಥೆ ಮಧ್ಯೆ ಪ್ರವೇಶ ಮಾಡುತ್ತಿಲ್ಲದಿರುವುದು ಆಶ್ಚರ್ಯಕವಾಗಿದೆ. ಇತ್ತ ಯುದ್ಧ ನಿಂತೇ ಬಿಡುತ್ತದೆ ಎಂದು ಬಲವಾಗಿ ನಂಬಿದವರಿಗೆ ಬರೆ ಮೇಲೆ ಬರೆ ಬೀಳುತ್ತಲೇ ಇದೆ.
ಯುದ್ಧದ ಸ್ಥಿತಿ ಕಂಡು ಭಾರತದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಗಗನದತ್ತ ಏರುತ್ತಲೇ ಇದೆ. ಆದರೂ ಇತ್ತ ಶಾಶ್ವತ ಶಾಂತಿಯ ಕನಸು ಕಾಣುತ್ತಿದ್ದ ವಿಶ್ವಶಾಂತಿ ಪ್ರಿಯರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್ ಕೊಟ್ಟು ಇರಾನ್ ಗೆ ಮಾತ್ರವಲ್ಲದೆ ಜಗತ್ತನ್ನು ಬೇರಗಾಗುವಂತೆ ಮಾಡುತ್ತಿದ್ದಾರೆ.
ಹಾರ್ಮುಜ್ ದಾಳಿಗೆ ಪ್ರತೀಕಾರವಾಗಿ ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಭೀಕರ ದಾಳಿ ನಡೆಸಿದ್ದ ಅಮೆರಿಕ ಪಡೆಗಳು ಇಂದು ಮತ್ತೊಂದು ಸುತ್ತಿನ ದಾಳಿ ನಡೆಸಲು ಮುಂದಾಗಿದೆ.
ಬಂದರ್ ಅಬ್ಬಾಸ್ ಮತ್ತು ಸಿರಿಕ್ ಪ್ರದೇಶಗಳಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಇರಾನ್ ಮೇಲಿನ ದಾಳಿಯಲ್ಲಿ ಇಬ್ಬರು ಮೀನುಗಾರರೂ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ಖಚಿತಪಡಿಸಿವೆ. ಇವರು ಯುದ್ಧಕ್ಕೆ ಬಡ ಜೀವಿಗಳು ಬಲಿಯಾಗುತ್ತಿರುವುದು ಬೇಸರ ತಂದಿದೆ.
ಇರಾನ್ ಜೊತಗಿನ ಕದನ ವಿರಾಮನ ಅಂತ್ಯಗೊಂಡಿದೆ ಎಂದು ಟ್ರಂಪ್ ಹೇಳಿದ ಮರು ದಿನ ಘಟನೆ ಸಂಭವಿಸಿದೆ. ಬಂದರ್ ಅಬ್ಬಾಸ್ ಮತ್ತು ಸಿರಿಕ್ ಸೇರಿದಂತೆ ಇರಾನ್‌ನ ಹಲವಾರು ಪ್ರದೇಶಗಳನ್ನ ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಪಡೆಗಳಿಗೆ ಬೆದರಿಕೆಯೊಡ್ಡುವ ಇರಾನ್ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಲು ಅಮೆರಿಕ ಸೇನೆಯು ಇರಾನ್ ವಿರುದ್ಧ ಹೊಸ ಮಿಲಿಟರಿ ದಾಳಿ ನಡೆಸಿದೆ.
ಇರಾನ್‌ನ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಅಬು ಮೂಸಾ ದ್ವೀಪದಲ್ಲಿ ಒಟ್ಟು 10 ಸ್ಫೋಟಗಳು ಸಂಭವಿಸಿದ್ದು, ಚಾಬಹಾರ್ ಮತ್ತು ಕೊನಾರಕ್‌ನಲ್ಲಿಯೂ ಹತ್ತು ಸ್ಫೋಟಗಳು ಸಂಭವಿಸಿವೆ. ಈ ವೇಳೆ ಅಗ್ನಿಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ. ಈ ಫೋಟೋವನ್ನ ಖುದ್ದು ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಷಿಯಲ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ʻನಿನ್ನೆ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಇದು ಪ್ರತಿಕ್ರಿಯೆ. ಅಂತಹ ಕ್ರಮ ಮತ್ತೆ ಸಂಭವಿಸಿದಲ್ಲಿ, ಪ್ರತಿಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ. ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ವಾರ್ನಿಂಗ್ ಕೊಟ್ಟಿದ್ದು, ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್ ಸೆಂಟ್ರಲ್ ಕಮಾಂಡರ್ ಮುಖ್ಯಸ್ಥರ ನಿರ್ದೇಶನದ ಮೇರೆಗೆ ಇರಾನ್ ಸಾಮರ್ಥ್ಯವನ್ನು ಕುಗ್ಗಿಸಲು ಇರಾನ್ ವಿರುದ್ಧ ದಾಳಿ ಪ್ರಾರಂಭಿಸಲಾಗಿದೆ ಎಂದಿದ್ದಾರೆ.
ಶಾಹಿದ್ ಬೆಹೆಶ್ಟಿ ಬಂದರು, ಕಲಾಂತರಿ ಬಂದರು ಮತ್ತು ಸಮುದ್ರ ಸಂಚಾರ ನಿಯಂತ್ರಣ ಗೋಪುರಕ್ಕೂ ಹಾನಿಯನ್ನುಂಟಾಗಿದ್ದು, ಪ್ರತೀಕಾರಕ್ಕೆ ಇರಾನ್ ವಾಯು ರಕ್ಷಣಾ ವ್ಯವಸ್ಥೆಯನ್ನ ಸಕ್ರಿಯಗೊಳಿಸಿದೆ ಎನ್ನಲಾಗಿದೆ. ಚಾಬಹಾರ್ ಮತ್ತು ಕೊನಾರಕ್ ಬಳಿಯೂ ಜೋರಾಗಿ ಸ್ಫೋಟಗಳು ಕೇಳಿಬಂದಿದೆ, ಅಕ್ಕಾಲಾದಲ್ಲಿ ರೈಲ್ವೆ ಸೇತುವೆ ಸ್ಫೋಟಗೊಂಡಿದೆ. ದಾಳಿ ಬಳಿಕ ಚಾಬಹಾರ್‌ನ ಕೆಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಒಟ್ಟಿನಲ್ಲಿ ದೊಡ್ಡಣ್ಣನ ಮಾಸ್ಟರ್ ಪ್ಲ್ಯಾನ್‌ಗೆ ಇರಾನ್ ಮತ್ತೆ ಮತ್ತೆ ಸೋಲುತ್ತಿದ್ದು, ಇದಕ್ಕೆ ಪರಿಹಾರವೇ ಇಲ್ಲದಂತ ಸ್ಥಿತಿ ಎದುರಾಗಿದೆ. ಅಲ್ಲದೇ ಇರಾನ್ ಜೊತಗಿನ ಕದನ ವಿರಾಮನ ಅಂತ್ಯಗೊಂಡಿದೆ ಎಂದು ಟ್ರಂಪ್ ಹೇಳಿದ ಮರು ದಿನ ಯುದ್ಧದ ತಯಾರಿ ಮಾಡಿಕೊಂಡು ಇರಾನ್ ಮೇಲೆ ದಾಳಿ ಮಾಡಿದ್ದಾರೆ ಎಂದರೆ, ಇದರ ಅರ್ಥ ಜಗತ್ತನ್ನು ಸೋಷಿಯಲ್ ಮೀಡಿಯಾದತ್ತ ಸೆಳೆದು ಗುಟ್ಟಾಗಿ ಪ್ಲ್ಯಾನ್ ಮಾಡಿ ಇರಾನ್ ಮೇಲೆ ದಾಳಿ ನಡೆಸಿದ್ದಾರೆ.
ಈ ಯುದ್ಧದ ಪರಿಸ್ಥಿತಿ ನೋಡುವುದಾದರೇ, ಜನ ಸಮಾನ್ಯರು ಬಲಿಯಾಗುತ್ತಾ ಇದ್ದು, ಜಗತ್ತಿಗೂ ನಷ್ಟವನ್ನುಂಟು ಮಾಡುತ್ತಿದೆ. ಇದು ಇಲ್ಲಿಗೆ ನಿಲ್ಲುತ್ತದೆಯೋ ಅಥವಾ ಮುಂದುವರೆಯುತ್ತದೆಯೇ? ಎಂದು ಕಾದುನೋಡಬೇಕಿದೆ.





