ಇರಾನ್‌ಗೆ ಬಿಡಿಗಾಸನ್ನೂ ಕೂಡ ಕೊಡುವುದಿಲ್ಲ; ಸಿಡಿದೆದ್ದ ಟ್ರಂಪ್

ವಾಷಿಂಗ್ಟನ್: ಇನ್ನೇನು ಅಮೆರಿಕ-ಇರಾನ್‌ ಶಾಂತಿಯುತ ಒಪ್ಪಂದ ಮಾಡಿಕೊಳ್ಳುತ್ತವೆ ಎನ್ನುವಷ್ಟರಲ್ಲಿಯೇ, ಶಾಕ್‌ ಮೇಲೆ ಶಾಕ್‌ ಎದುರಾಗಿದೆ. ಒಂದೊಮ್ಮೆ ಇರಾನ್‌ ಸೋಲು ಒಪ್ಪೊಕೊಳ್ಳುವುದಿಲ್ಲ, ನಾವು ಶಾಂತಿಯುತ ಒಪ್ಪಂದಕ್ಕೆ ಸಿದ್ದರಿಲ್ಲ ಎನ್ನುತ್ತದೆ. ಇತ್ತ ದೊಡ್ಡಣ್ಣನ್ನು ಹೊಸ ವರಸೆ ತೆಗೆದಿದ್ದಾನೆ. ಯುದ್ಧದಿಂದಾಗಿ ಇರಾನ್ ನಾಶವಾಗಿದ್ದು, ನಾವು ಹತಾಶೆಯಿಂದ ಯಾವುದೇ ಮಾತುಕತೆ ನಡೆಸುತ್ತಿಲ್ಲ. ಇರಾನ್‌ ಅಸಹಾಯಕರಾಗಿ ಒಪ್ಪಂದಕ್ಕೆ ಬಂದಿದ್ದರು ಎಂದಿದೆ,. ಮುಂದಿನ 60 ದಿನಗಳವರೆಗೆ ಅವರಿಗೆ ಒಂದು ರೂಪಾಯಿ ಸಿಗುವುದಿಲ್ಲ. ಇರಾನ್ ಕತೆ ಇನ್ನು ಮುಂದೆ ಮುಗಿಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ […]

ಬಿಡದಿ ಭೂಸ್ವಾಧೀನಕ್ಕೆ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟ ಜೆಡಿಎಸ್

ಬೆಂಗಳೂರು: ಟೌನ್ ಶಿಪ್ ನೆಪದಲ್ಲಿ ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಜೆಡಿಎಸ್ ಪಕ್ಷವು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿತು. ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್ಎಂ ರಮೇಶ್ ಗೌಡ ಅವರ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾದ ಪಕ್ಷದ ನಿಯೋಗವು, ಬಿಡದಿ ಭಾಗದಲ್ಲಿ ನೀರಾವರಿ ಮತ್ತು ಕೃಷಿಯೋಗ್ಯ ಫಲವತ್ತಾದ ಭೂಮಿ ಇದ್ದು ಅದನ್ನು ರಿಯಲ್ ಎಸ್ಟೇಟ್ ಉದ್ದೇಶದ ಟೌನ್ಷಿಪ್ ಯೋಜನೆಗೆ ಕಸಿದುಕೊಳ್ಳುವುದು ಅಕ್ಷ್ಯಮ್ಯ […]

ಗ್ಯಾರಂಟಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಮರು ಅರ್ಜಿ ಸಲ್ಲಿಸುವಂತಿಲ್ಲ, ಅನರ್ಹರ ಪತ್ತೆಗೆ ಮರುಪರಿಶೀಲನೆಗೆ ಸಿಎಂ ಸೂಚನೆ

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಯೋಜನೆಗಳ ಮುಂದುವರಿಕೆ ಹಾಗೂ ಪರಿಷ್ಕರಣೆಗಾಗಿ ಫಲಾನುಭವಿಗಳು ಮತ್ತೆ ಸಾಲಿನಲ್ಲಿ ನಿಂತು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಶುಕ್ರವಾರ ಮುಖ್ಯಮಂತ್ರಿಗಳು ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುವ ಬದಲು, ಸದ್ಯ ಸೌಲಭ್ಯ ಪಡೆಯುತ್ತಿರುವವರ ಪಟ್ಟಿಯನ್ನೇ […]

ಮಂಡ್ಯ ZP CEO ಕೆ.ಆರ್. ನಂದಿನಿ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು

ಮಂಡ್ಯ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕೆ.ಆರ್. ನಂದಿನಿ ಅವರು ಪ್ರಯಾಣಿಸಬೇಕಿದ್ದ ಸರ್ಕಾರಿ ಕಾರಿಗೆ ಎದುರಿನಿಂದ ಬಂದ ಮತ್ತೊಂದು ವಾಹನ ಜೋರಾಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಈ ಭೀಕರ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ಅಧಿಕಾರಿ ನಂದಿನಿ ಅವರು ಸುರಕ್ಷಿತವಾಗಿದ್ದಾರೆ. ಮನೆ ಹತ್ತಿರವೇ ಜರುಗಿದ ಆಕಸ್ಮಿಕ ಘಟನೆ ದಿನದ ನಿತ್ಯದ ಕರ್ತವ್ಯದ ಭಾಗವಾಗಿ ಸಿಇಒ ಕೆ.ಆರ್. ನಂದಿನಿ ಅವರು ಮಧ್ಯಾಹ್ನದ ಭೋಜನ ಮುಗಿಸಿ ಮರಳಿ ಕಚೇರಿಗೆ ಹೊರಡಲು ಸಿದ್ಧರಾಗುತ್ತಿದ್ದರು. ಮಂಡ್ಯ ನಗರದಲ್ಲಿರುವ ಅವರ ಅಧಿಕೃತ […]

ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒಗೆ ಗ್ರೀನ್ ಸಿಗ್ನಲ್: 27 ಕೋಟಿ ಹೊಸ ಷೇರುಗಳ ವಿತರಣೆಗೆ ಅನುಮೋದನೆ | Jio IPO

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಬಹುನಿರೀಕ್ಷಿತ ‘ಜಿಯೋ ಪ್ಲಾಟ್‌ಫಾರ್ಮ್ಸ್’ ಐಪಿಒ (Initial Public Offering) ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಮಂಡಳಿಯು ಐಪಿಒ ದಾಖಲೆ ಪತ್ರಗಳಿಗೆ ಅನುಮೋದನೆ ನೀಡಿದ್ದು, ಇಂದು (ಜೂನ್ 19) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಗೆ ‘ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್’ (DRHP) ಸಲ್ಲಿಕೆಯಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ಕಂಪನಿಯ 49ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಮಾತನಾಡಿದ ಮುಖೇಶ್ ಅಂಬಾನಿ, > […]

ಭಾರತದ ಭವಿಷ್ಯಕ್ಕೆ ಜಿಯೋ ಎಐ ಮಾರ್ಗನಕ್ಷೆಯನ್ನು ತೆರೆದಿಟ್ಟ ಆಕಾಶ್ ಅಂಬಾನಿ

ಮುಂಬೈ: ಜಿಯೋ ಸಂಸ್ಥೆಯ ಮುಂದಿನ ದೊಡ್ಡ ಹೆಜ್ಜೆ ಅಥವಾ ಜಿಗಿತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ- ಕೃತಕ ಬುದ್ಧಿಮತ್ತೆ) ವಲಯದಲ್ಲಿ ಇರಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಮಾತನಾಡಿದ ಕಂಪನಿಯ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಡಿ. ಅಂಬಾನಿ, ವಿದೇಶಗಳಲ್ಲಿ ತಯಾರಾಗುವ ಎಐಗೆ ಕೇವಲ ಗ್ರಾಹಕ ದೇಶವಾಗಿ ಭಾರತವು ಉಳಿಯಬಾರದು; ಬದಲಿಗೆ ಭಾರತವು ಎಐ ಸೃಷ್ಟಿಕರ್ತ ಮತ್ತು ಜಾಗತಿಕ ನಾಯಕ ಆಗಬೇಕು ಎಂದು ಹೇಳಿದರು. ಇದೇ ಆಲೋಚನೆಯೊಂದಿಗೆ ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ಕಂಪನಿಯ […]

ಬೋಗಸ್ ಭೂ ಮಂಜೂರಾತಿ ಆರೋಪ: ಬೇಲೂರಿನ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸಿಐಡಿ ಅಧಿಕಾರಿಗಳ ಬಲೆಗೆ

ಹಾಸನ: ತಾಲೂಕು ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಹಂಚಿಕೆ ಮಾಡಿದ ಗಂಭೀರ ಆರೋಪದ ಮೇಲೆ, ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರನ್ನು ಅಪರಾಧ ತನಿಖಾ ದಳ (CID) ಅಧಿಕಾರಿಗಳು ಶುಕ್ರವಾರ ಮುಂಜಾನೆ ಬಂಧಿಸಿದ್ದಾರೆ. 2023ರಲ್ಲಿ ದಾಖಲಾಗಿದ್ದ ಈ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ, ಸದ್ಯ ಮಾಜಿ ಶಾಸಕರನ್ನು ಕಸ್ಟಡಿಗೆ ಪಡೆದಿದೆ. ದೂರಿನ ವಿವರ: ಕೆ.ಎಸ್. ಲಿಂಗೇಶ್ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು, ನಕಲಿ ದಾಖಲೆಗಳ ನೆರವಿನಿಂದ ನೈಜ […]

ಜೋಗ್ ಜಲಪಾತದಲ್ಲಿ ಶೀಘ್ರದಲ್ಲೇ ‘ರೋಪ್ ವೇ’ ಸಂಚಾರ: ಸಾಗರ ತಹಶೀಲ್ದಾರ್ ಪ್ರತಿಭಾ ನೇತೃತ್ವದಲ್ಲಿ ಸರ್ವೆ ಕಾರ್ಯ ಪೂರ್ಣ

ಸಾಗರ: ಕರ್ನಾಟಕದ ಪ್ರಕೃತಿ ಸೌಂದರ್ಯದ ಹೆಮ್ಮೆಯಾಗಿರುವ ವಿಶ್ವವಿಖ್ಯಾತ ಜೋಗ್ ಫಾಲ್ಸ್‌ನಲ್ಲಿ ಪ್ರವಾಸಿಗರಿಗೆ ಹೊಸ ಅನುಭವ ನೀಡಲು ಉದ್ದೇಶಿಸಲಾಗಿರುವ ‘ರೋಪ್ ವೇ (ಕೇಬಲ್ ಕಾರ್)’ ಯೋಜನೆಗೆ ಚಾಲನೆ ಸಿಕ್ಕಿದೆ. ಜಾಗ ಗುರುತಿಸುವಿಕೆಗೆ ಸಂಬಂಧಿಸಿದಂತೆ ತಾಲೂಕು ಆಡಳಿತ ನಡೆಸಿದ ಜಂಟಿ ಸರ್ವೆ ಕಾರ್ಯವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ತಳಮಟ್ಟದಲ್ಲಿ ಆರಂಭವಾಗಲಿದೆ. ರಾಜ್ಯದ ಏಳು ಅದ್ಭುತಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಜೋಗ್ ಜಲಪಾತವನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಜೋಗ್ ನಿರ್ವಹಣಾ ಪ್ರಾಧಿಕಾರವು ಈಗಾಗಲೇ ಹಲವಾರು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. […]

Theft : ಎಚ್ಚರ ಎಚ್ಚರ : ಸ್ಕೇಚ್ ಹಾಕಿ, ಪಕ್ಕಾ ಪ್ಲ್ಯಾನ್ ಮಾಡಿ ಕಳ್ಳತನ – ಬೈಕ್‌ ಮತ್ತು ಬಂಗಾರ ಕದ್ದವರು ಅಂದರ್‌

ದೊಡ್ಡಬಳ್ಳಾಪುರ : ಹೌದು ಮನೆಯ ಕೆಲಸಕ್ಕಾಗಿ ಯಾರನ್ನಾದರೂ ಆಯ್ಕೆ ಮಾಡುವ ಮುನ್ನ ಒಮ್ಮೆ ಸಾರಿ ಯೋಚಿಸಿ ಆಯ್ಕೆ ಮಾಡಿ, ಇಲ್ಲವಾದ್ರೆ ನಿಮ್ಮ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ ಎನ್ನುವುದಕ್ಕೆ ಈ ಕೆಳಗಿನ ಘಟನೆ ಸಾಕ್ಷಿಯಾಗಿದೆ. ಮನೆ ಕಟ್ಟಲು ಬಿಹಾರದಿಂದ ಬಂದಿದ್ದ ಇಬ್ಬರು ಗಾರೆ ಕೆಲಸಗಾರರು, ಮನೆ ಮಾಲೀಕನ ಮನೆಯ ಬೀರುವಿನಲ್ಲಿಟ್ಟ ಚಿನ್ನಾಭರಣ, 1 ಲಕ್ಷ ನಗದು ಹಣ ಮತ್ತು ಬೈಕ್ ಕದ್ದು ಪರಾರಿಯಾಗಿ, ಮತ್ತೆ ಖಾಕಿ ಕೈಗೆ ಸೆರೆಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು […]

ಇಸ್ಲಾಮಾಬಾದ್ ಶಾಂತಿ ಒಪ್ಪಂದಕ್ಕೆ ಬ್ರೇಕ್‌ : ರೋಚಕ ತಿರುವಿನತ್ತ ಅಮೆರಿಕ-ಇರಾನ್

ಟೆಹ್ರಾನ್: ಯುದ್ಧ ಆರಂಭಿಸಿದ ಅಮೆರಿಕ ಶಾಂತಿಗಾಗಿ ಸಿದ್ಧವಾಗಿತ್ತು, ಈ ವಿಚಾರಕ್ಕೆ ಇರಾನ್‌ ಅಮೆರಿಕವನ್ನು ಆಟವಾಡಿಸುತ್ತಿದೆ. ಇನ್ನೇನು ಅಮೆರಿಕ-ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬೇಕು ಎಂದು ಸಂಧಾನವೇ ಮುರಿದು ಬಿದ್ದಿದೆ. ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಐತಿಹಾಸಿಕ ‘ಇಸ್ಲಾಮಾಬಾದ್ ಶಾಂತಿ ಒಪ್ಪಂದ’ವನ್ನು ಜಗತ್ತಿನ ಎದುರು ಅಧಿಕೃತವಾಗಿ ಘೋಷಿಸಲು ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾರಂಭದಿಂದ ಇರಾನ್ ಕೊನೆ ಘಳಿಗೆಯಲ್ಲಿ ಹಿಂದೆ ಸರಿದಿದೆ. ಮೂಲಗಳ ಪ್ರಕಾರ, ಅಮೆರಿಕ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡರೆ ದೇಶದೊಳಗೆ […]