ಇಸ್ಲಾಮಾಬಾದ್ ಶಾಂತಿ ಒಪ್ಪಂದಕ್ಕೆ ಬ್ರೇಕ್‌ : ರೋಚಕ ತಿರುವಿನತ್ತ ಅಮೆರಿಕ-ಇರಾನ್

ಟೆಹ್ರಾನ್: ಯುದ್ಧ ಆರಂಭಿಸಿದ ಅಮೆರಿಕ ಶಾಂತಿಗಾಗಿ ಸಿದ್ಧವಾಗಿತ್ತು, ಈ ವಿಚಾರಕ್ಕೆ ಇರಾನ್‌ ಅಮೆರಿಕವನ್ನು ಆಟವಾಡಿಸುತ್ತಿದೆ. ಇನ್ನೇನು ಅಮೆರಿಕ-ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬೇಕು ಎಂದು ಸಂಧಾನವೇ ಮುರಿದು ಬಿದ್ದಿದೆ.

ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಐತಿಹಾಸಿಕ ‘ಇಸ್ಲಾಮಾಬಾದ್ ಶಾಂತಿ ಒಪ್ಪಂದ’ವನ್ನು ಜಗತ್ತಿನ ಎದುರು ಅಧಿಕೃತವಾಗಿ ಘೋಷಿಸಲು ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾರಂಭದಿಂದ ಇರಾನ್ ಕೊನೆ ಘಳಿಗೆಯಲ್ಲಿ ಹಿಂದೆ ಸರಿದಿದೆ.

ಮೂಲಗಳ ಪ್ರಕಾರ, ಅಮೆರಿಕ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡರೆ ದೇಶದೊಳಗೆ ತೀವ್ರ ಜನಾಕ್ರೋಶ ವ್ಯಕ್ತವಾಗಬಹುದು ಎಂದು ತೀವ್ರಗಾಮಿಗಳು ಎಚ್ಚರಿಸಿದ ಹಿನ್ನೆಲೆಯಲ್ಲಿ ಇರಾನ್ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಇತ್ತ ಶ್ವೇತಭವನ ಕೂಡ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿಸಿದೆ.

ಅಮೆರಿಕದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಸಾವನ್ನಪ್ಪಿದ್ದರು, ಇದರ ಹಿನ್ನಲೆ ಅವರ ಅಂತ್ಯಕ್ರಿಯೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಅಮೆರಿಕದ ಅಧಿಕಾರಿಗಳೊಂದಿಗೆ ಹಸ್ತಲಾಘವ ಮಾಡುವ ವಿಚಾರ ಬೆಳಕಿಗೆ ಬಂದಿತು. ಮತ್ತು ಟಿವಿ ಕ್ಯಾಮೆರಾಗಳ ಮುಂದೆ ನಗುತ್ತಾ ನಿಲ್ಲುವ ಚಿತ್ರಗಳು ಹೊರಬಂದರೆ, ಅದು ಸಂಘರ್ಷದಲ್ಲಿ ಮಡಿದವರಿಗೆ ಮಾಡುವ ದ್ರೋಹ ಎಂದು ಇರಾನ್‌ ಭಾವಿಸುತ್ತಾರೆ ಎಂದು ತೀವ್ರಗಾಮಿ ಬಣಗಳು ಎಚ್ಚರಿಸಿದ್ದವು. ಇರಾನಿಯನ್ನರು ಸೇಡು ತೀರಿಸಿಕೊಳ್ಳಲು ಬಯಸುತ್ತಾರೆಯೇ ಹೊರತು ಸಾರ್ವಜನಿಕ ಸ್ನೇಹದ ಪ್ರದರ್ಶನವನ್ನಲ್ಲ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಒಪ್ಪಂದಕ್ಕೆ ಇರಾನ್‌ ಹಿಂದೇಟು ಹಾಕಿರುವುದು ದೊಡ್ಡಣ್ಣನಾದ ಅಮೆರಿಕಗೆ ಶಾಕ್‌ ಎದುರಾಗಿದೆ, ಯುದ್ಧ ಮತ್ತೊಷ್ಟು ಟ್ವಿಸ್ಟ್‌ ಪಡೆದುಕೊಳ್ಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

Share it :

Leave a Reply

Your email address will not be published. Required fields are marked *