ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ ಅಂತ್ಯ: ಅರ್ಜಿ ಹಿಂಪಡೆದ ಪತ್ನಿ ಸಂಗೀತಾ

ತಮಿಳುನಾಡು: ತಮಿಳುನಾಡು ಮುಖ್ಯಮಂತ್ರಿ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ನಾಯಕ, ನಟ ಸಿ. ಜೋಸೆಫ್ ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ತಾವು ಚಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿವಾಹ ವಿಚ್ಛೇದನ (Divorce) ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ. ಇದರೊಂದಿಗೆ ಸುದೀರ್ಘ ಕೌಟುಂಬಿಕ ಹಾಗೂ ಕಾನೂನು ಸಮರಕ್ಕೆ ದಿಢೀರ್ ತೆರೆಬಿದ್ದಿದೆ. ಪ್ರಕರಣದ ಹಿನ್ನೆಲೆ ಹಾಗೂ ಆರೋಪಗಳು: 1999ರಲ್ಲಿ ವಿವಾಹವಾಗಿದ್ದ ವಿಜಯ್ ಹಾಗೂ ಸಂಗೀತಾ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು […]

ವಿಧಾನ ಪರಿಷತ್ ಸಭಾಪತಿಯಾಗಿ ಹೊರಟ್ಟಿ ಅವರನ್ನೇ ಮುಂದುವರೆಸಲು ರಾಜ್ಯಪಾಲರಿಗೆ ಶಿಫಾರಸ್ಸು: ಸಿಎಂ ಡಿಕೆಶಿ

ಬೆಂಗಳೂರು : “ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜಿನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಬದಲಿ ವ್ಯವಸ್ಥೆ ಆಗುವವರೆಗೂ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. “ಪ್ರಸಕ್ತ ರಾಜಕೀಯ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಹೊರಟ್ಟಿ ಅವರು ದೇಶದ ವಿಧಾನ ಪರಿಷತ್ […]

ಹೈಕಮಾಂಡ್‌ಗೆ ಸಾಕೆನಿಸಿದರೆ ಅದಕ್ಕೆ ನಾನು ಬದ್ಧ: ಪ್ರಿಯಾಂಕ್​​ ಖರ್ಗೆ ಹೀಗದಿಂದ್ಯಾಕೆ? ಇಲ್ಲಿದೆ ನೋಡಿ

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿಶೇಷಾಧಿಕಾರವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ ಎಂದು ಸಂಪುಟ ಪುನಾರಚನೆಯ ಸಾಧ್ಯತೆಯ ಕುರಿತು ಊಹಾಪೋಹಗಳು ಹರಿದಾಡುತ್ತಿರುವ ನಡುವೆಯೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ವಿಧಾನಸಭಾ ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಲ್ಲಿ ಉಂಟಾಗಿರುವ ವಿಳಂಬದ ಕುರಿತು, ಈ ಹೆಚ್ಚುವರಿ ಸಮಯವು ಸಚಿವರಿಗೆ ತಮ್ಮ ಇಲಾಖೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಮತ್ತು […]

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದು, ಈ ಕುರಿತು ಉಪ ಸಭಾಪತಿಯವರಿಗೆ ದಿನಾಂಕ 07.08.2026ರಂದು ಸಲ್ಲಿಸಲು ಸುದೀರ್ಘ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದಾರೆ. ಸಚಿವಾಲಯವು ಸಭಾಪತಿ ಸ್ಥಾನ ತೆರವಾಗಿರುವ ಕುರಿತು ಈಗಾಗಲೇ ಅಧಿಕೃತ ಅಧಿಸೂಚನೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಅವಿಶ್ವಾಸ ನಿರ್ಣಯದ ಭೀತಿ ಮತ್ತು ಪೀಠದ ಗೌರವ: ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತ ಗಳಿಸಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ತಮ್ಮದೇ ನಾಯಕರನ್ನು ಸಭಾಪತಿ ಪೀಠದಲ್ಲಿ ಕುಳ್ಳಿರಿಸಲು ನಿರ್ಧರಿಸಿತ್ತು. […]

DK Shivakumr: ನನಗೇನೂ ಬೇಸರವಾಗಿಲ್ಲ, ನಿಮಗೇನಾದರೂ ಬೇಸರವಾಗಿದೆಯೇ? – ಸಿಎಂ ಡಿಕೆಶಿ ಹೀಗೆ ಹೇಳಿದ್ದೇಕೆ?

ಬೆಂಗಳೂರು: ಯಡಿಯೂರಪ್ಪ ಅವರು ಎಷ್ಟು ದಿನ ಒಬ್ಬರೇ ಸಿಎಂ ಆಗಿರಲಿಲ್ಲ? ಎಷ್ಟು ದಿನ ದೆಹಲಿಯಲ್ಲೇ ಉಳಿದುಕೊಂಡಿರಲಿಲ್ಲ? ಎಂದು ಸಿಎಂ ಡಿಕೆ ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ. ಖಾತೆ ಹಂಚಿಕೆ ವಿಳಂಬದಿಂದಾಗಿ ಸದನದಲ್ಲಿ ಹೊಸ ಸಚಿವರ ತಯಾರಿಗೆ ಅಡ್ಡಿಯಾಗಲಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರುಹಾಗೆಯೇ, ತಮ್ಮ ಮಧ್ಯೆ ಬೇಸರವಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಸಿಎಂ, ನನಗೇನೂ ಬೇಸರವಾಗಿಲ್ಲ, ನಿಮಗೇನಾದರೂ ಬೇಸರವಾಗಿದೆಯೇ? ಎಂದು ಪ್ರಶ್ನಿಸಿದರು.,ಖಾತೆ ಹಂಚಿಕೆ ಶೀಘ್ರದಲ್ಲೇ ಆಗಲಿದೆ. ನಾಗೇಂದ್ರ ವಿಚಾರದಲ್ಲಿ ಬಿಜೆಪಿ ಹೋರಾಟ ಮಾಡುವ ಕುರಿತು ಪ್ರತಿಕ್ರಿಯಿಸಿ, ಅವರು […]

ಜನ ಗಣ ಮನ ಅಧಿನಾಯಕ” ಶಿಕ್ಷಣತಜ್ಞರನ್ನು ಇಂದು ನೆನೆಯೋಣ -ಇಂದು ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರ ಪುಣ್ಯಸ್ಮರಣೆ

ಇಂದು ನಮ್ಮ ದೇಶದ ರಾಷ್ಟ್ರಗೀತೆಯ ರಚನಾಕಾರ, ವಿಶ್ವಕವಿ, ಮಹಾನ್ ಶಿಕ್ಷಣತಜ್ಞ ರವೀಂದ್ರನಾಥ ಟ್ಯಾಗೋರ್ ಅವರ ಪುಣ್ಯಸ್ಮರಣೆ . 1941ರ ಈ ದಿನದಂದು ಕಲ್ಕತ್ತಾದ ಜೋರಾಸಾಂಕೊ ಮನೆಯಲ್ಲಿ ಅವರು ಇಹಲೋಕ ತ್ಯಜಿಸಿದರು. ಆದರೆ ಅವರ ಚಿಂತನೆ, ಕಾವ್ಯ ಮತ್ತು ಸಂಗೀತ ಇಂದಿಗೂ ಭಾರತದ ಪ್ರತಿ ಉಸಿರಿನಲ್ಲೂ ಜೀವಂತವಾಗಿದೆ. “ಜನ ಗಣ ಮನ ಅಧಿನಾಯಕ ಜಯ ಹೇ” ಈ ಐದು ಸಾಲುಗಳು ಕೇವಲ ಗೀತೆಯಲ್ಲ. ಇದು 140 ಕೋಟಿ ಭಾರತೀಯರ ಆತ್ಮಗೀತೆ. 1911ರ ಡಿಸೆಂಬರ್ 27ರಂದು ಕಲ್ಕತ್ತಾದ ಭಾರತೀಯ ರಾಷ್ಟ್ರೀಯ […]

ಕೀಳುಮಟ್ಟದ ರಾಜಕೀಯ ಮಾಡಬೇಡಿ ಎಂದು ವಿಪಕ್ಷಗಳಿಗೆ ಟಾಂಗ್‌ ಕೊಟ್ಟ ತ.ನಾಡು ಸಿಎಂ – ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಚೆನ್ನೈ:ಇಂದು ತಮಿಳುನಾಡು ವಿಧಾನಸಭೆಯಲ್ಲಿ ಕಾವೇರಿ ನೀರಿನ ವಿಚಾರವಾಗಿ ಬಿಸಿ ಬಿಸಿ ಚರ್ಚೆಯಾಗಿದ್ದು, ಸಿಎಂ ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ಸದನದಲ್ಲಿ ತೀವ್ರ ವಾಗ್ವಾಳಿ ನಡೆಯಿತು. ಮೇಕೆದಾಟು ಅಣೆಕಟ್ಟು ಮತ್ತು ಕಾವೇರಿ ನೀರಿನ ವಿವಾದದ ಕುರಿತು ಸರ್ವಪಕ್ಷ ಸಭೆಯ ಅಗತ್ಯವಿಲ್ಲ ಎಂದು ಸಿಎಂ ವಿಜಯ್ ಸ್ಪಷ್ಟಪಡಿಸಿದ್ದು,ಕಾವೇರಿ ನೀರಿನ ಸಮಸ್ಯೆ ಮತ್ತು ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಕ್ರಮದ ಬಗ್ಗೆ ಸರ್ಕಾರದ ನಿಲುವನ್ನು ಪ್ರಶ್ನಿಸಿದ ಉದಯನಿಧಿ ಸ್ಟಾಲಿನ್, ನೆರೆಯ ರಾಜ್ಯದಲ್ಲಿ ಅಣೆಕಟ್ಟು ಯೋಜನೆಯನ್ನು […]

ಯಾರಾದರೂ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಗೊತ್ತಾದ್ರೆ ಅವರನ್ನು ಮುಗಿಸುವ ಯತ್ನ ನಡೆಯುತ್ತವೆ: ಸಚಿವ ಜಮೀರ್​​

ಚಿತ್ರದುರ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಕೊನೆಯ ಕ್ಷಣದವರೆಗೂ ತೀವ್ರ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಗಿತ್ತು. ಅಂತಿಮ ಹಂತದಲ್ಲಿ ಹೈಕಮಾಂಡ್ ಸಚಿವರ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿ, ವಿವಾದಗಳ ನಡುವೆಯೂ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಮರು ಅವಕಾಶ ನೀಡಿದ್ದರು. ನಂತರ ಕೊನೆ ಕ್ಷಣದ ರಾಜಕೀಯ ಬೆಳವಣಿಗೆಗಳ ನಡುವೆ ಎಸ್‌.ಎಸ್‌. ಮಲ್ಲಿಕಾರ್ಜುನಗೂ ಸಚಿವ ಸ್ಥಾನ ಒಲಿಯಿತು. ಮತ್ತೊಂದೆಡೆ, ಆರಂಭಿಕ ಪಟ್ಟಿಯಲ್ಲಿ ಹೆಸರು ಇದ್ದರೂ ಮಂಕಾಳು ವೈದ್ಯ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರಿ. […]

ಶಿವಮೊಗ್ಗದಲ್ಲಿ 8 ಕಾಲು, 2 ಬಾಲ ಹೊಂದಿದ ವಿಚಿತ್ರ ಮೇಕೆ ಮರಿ ಜನನ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ಗ್ರಾಮದ ಸಮೀಪವಿರುವ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ವಿಸ್ಮಯಕಾರಿ ಘಟನೆಯೊಂದು ಸಂಭವಿಸಿದ್ದು, ಅಸಾಮಾನ್ಯ ದೈಹಿಕ ಲಕ್ಷಣಗಳನ್ನು ಹೊಂದಿರುವ ವಿಚಿತ್ರ ಆಡಿನ ಮರಿಯೊಂದು ಬುಧವಾರ ಜನಿಸಿದೆ. ಈ ಅಪರೂಪದ ಜನನವನ್ನು ಕಂಡು ಗ್ರಾಮಸ್ಥರು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಘಟನೆಯ ವಿವರ: ಉದ್ರಿ ವಡ್ಡಿಗೆರೆ ಗ್ರಾಮದ ಕಾಳಿಂಗಪ್ಪ ಭಾವಿಕಟ್ಟೇರ್ ಹಾಗೂ ಪುಟ್ಟಮ್ಮ ದಂಪತಿ ಕೃಷಿಯ ಜೊತೆಗೆ ಕುರಿ ಮತ್ತು ಆಡು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ ಅವರ ಮನೆಯ ಆಡೊಂದು ಜನ್ಮ […]

ವಿಶ್ವದ ಮೊದಲ mRNA ಫ್ಲೂ ಲಸಿಕೆಗೆ ಅಮೆರಿಕ FDA ಅನುಮೋದನೆ: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು!

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಜಾಗತಿಕವಾಗಿ ಅಪಾರ ಜನಪ್ರಿಯತೆ ಪಡೆದಿದ್ದ ಎಂಆರ್‌ಎನ್‌ಎ (mRNA) ತಂತ್ರಜ್ಞಾನವು ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಕಾಲೋಚಿತ ಶೀತ ಮತ್ತು ಜ್ವರವನ್ನು ತಡೆಗಟ್ಟಲು ಅಭಿವೃದ್ಧಿಪಡಿಸಲಾದ ವಿಶ್ವದ ಪ್ರಥಮ ಎಂಆರ್‌ಎನ್‌ಎ ಆಧಾರಿತ ಫ್ಲೂ ಲಸಿಕೆಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು (US FDA) ಅನುಮೋದನೆ ನೀಡಿದೆ. ‘ಮಾಡರ್ನಾ’ ಕಂಪನಿಯು ರೂಪಿಸಿರುವ ಈ ‘ಎಮ್‌ಫ್ಲೂಸಿವಾ’ (mFlusiva) ಲಸಿಕೆಯನ್ನು ಅಮೆರಿಕದಲ್ಲಿ 50 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಬಳಸಲು […]