ನ್ಯೂಯಾರ್ಕ್ : ಪ್ರೀತಿಗಾಗಿ ಕೆಲವರು ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎನ್ನುವುದಕ್ಕೆ ಸದ್ಯಕ್ಕೆ ವೈರಲ್ ವಿಡಿಯೋಂದು ಸಾಕ್ಷಿಯಾಗಿದೆ. ಹೌದು ನ್ಯೂಯಾರ್ಕ್ ನಗರದಲ್ಲಿ ಬರುವ ಎಂಪೈರ್ ಸ್ಟೇಟ್ ಕಟ್ಟಡದ ಮೇಲ್ಭಾಗವನ್ನು ಇಬ್ಬರು ಕಪಲ್ ಹತ್ತಿದ್ದಾರೆ. ಅಲ್ಲದೇ ಅವರ ಹತ್ತಿರ ಯಾವುದೇ ರೀತಿಯ ಸುರಕ್ಷತಾ ಸಾಧನಗಳಿಲ್ಲದೆ ಹತ್ತಿ, ಬ್ಯಾನರ್ ಬಿಚ್ಚಿ ಸಾಹಸ ಮಾಡಿದ್ದರು. ಇದರ ನಂತರ ಇವರಿಬ್ಬರು ವಿಡಿಯೋ ಮಾಡಿ ಸಮಾಜೀಕ ಜಾಲತಾಣದಲ್ಲಿ ಅಂಚಿಕೊಂಡಿದ್ದಾರೆ. ವಿಡಿಯೋ ಫುಲ್ ವೈರಲ್ ಆಗಿದ್ದು, ಇದನ್ನು ಕಂಡ ಕೆಲ ಯುವತಿಯರು ನನಗೆ ಕ್ರಿಮಿನಲ್ ಹುಡುಗ ಬೇಕು, ನನಗೂ ಇದೇ ರೀತಿಯ ಹುಡುಗ ಬೇಕು ಎಂದು ರೀಲ್ಸ್ ಅಲ್ಲಿ ಬಿಜಿಯಾಗಿದ್ದಾರೆ.
ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಹತ್ತಿ, ಪ್ರದರ್ಶನದಲ್ಲಿ ತೊಡಗಿಕೊಂಡಿದ್ದ ಈ ಜೋಡಿಯನ್ನು ಖಾಕಿ ಬಂಧಿಸಿದೆ. ಈ ಜೋಡಿಯ ಹೆಸರು 32 ವರ್ಷದ ಇವಾನ್ ಕುಜ್ನೆಟ್ಸೊವ್ ಮತ್ತು 33 ವರ್ಷದ ಏಂಜಲೀನಾ ನಿಕೋಲೌ ಎಂದು ತಿಳಿದು ಬಂದಿದೆ.
ಕುಜ್ನೆಟ್ಸೊವ್ ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ಅವರನ್ನು ಇವಾನ್ ಬೀರ್ಕಸ್ ಎಂದು ಗುರುತಿಸುತ್ತಿದ್ದು, ನ್ಯೂಜೆರ್ಸಿಯ ಈಸ್ಟ್ ಆರೆಂಜ್‌ನಲ್ಲಿ ವಾಸಿಸುವ ಈ ಇಬ್ಬರು ಈ ರೀತಿಯ ವಿಡಿಯೋ ಮಾಡಿ ಸಮಸ್ಯೆಗೆ ಸಿಕ್ಕಿ ಬಿದ್ದಿದ್ದಾರೆ ಅಲ್ಲದೆ ಎತ್ತರ ಟವರ್ ಕಂಬದ ಮೇಲೆ ಏರಲು ಇವರ ಹತ್ತಿರ ಹಗ್ಗಗಳು ಅಥವಾ ರಕ್ಷಣಾತ್ಮಕ ಸಾಧನಗಳಿಲ್ಲದೆ ಹತ್ತಿ ಪ್ರಪ್ರೋಸ್ ಮಾಡಿಕೊಂಡಿದ್ದಾರೆ.
ಗಗನಚುಂಬಿ ಕಟ್ಟಡಗಳು ಮತ್ತು ಇತರ ಎತ್ತರದ ರಚನೆಗಳನ್ನು ಹತ್ತುವುದಕ್ಕೆ ಇವರು ಇದೀಗ ಹೆಸರುವಾಸಿಯಾಗಿದ್ದಾರೆ. ಇತ್ತ ಕೆಲವು ಮಾಹಿತಿ ಪ್ರಕಾರ ಈ ಜೋಡಿಯ ಮೇಲೆ ಕಳ್ಳತನ, ಅಜಾಗರೂಕ ಅಪಾಯ, ಕ್ರಿಮಿನಲ್ ದುಷ್ಕೃತ್ಯ, ಸ್ಥಳೀಯ ಕಾನೂನಿನ ಉಲ್ಲಂಘನೆ, ಕಳ್ಳರ ಉಪಕರಣಗಳನ್ನು ಹೊಂದಿರುವುದು, ಕ್ರಿಮಿನಲ್ ತಿರುಚುವಿಕೆ, ಕ್ರಿಮಿನಲ್ ಅತಿಕ್ರಮಣ ಮತ್ತು ಅವ್ಯವಸ್ಥೆಯ ನಡವಳಿಕೆಯ ಆರೋಪಗಳು ಇವರ ಮೇಲೆ ಇದೆ.
ಈ ಇಬ್ಬರು ಮುಖವಾಡಗಳನ್ನು ಧರಿಸಿದ್ದ ಪುರುಷ ಮತ್ತು ಮಹಿಳೆ ಇಬ್ಬರೂ ಎಂಪೈರ್ ಸ್ಟೇಟ್ ಕಟ್ಟಡದ ತುದಿಯಲ್ಲಿರುವ ಶಿಖರದ ಮೇಲೆ ಹತ್ತಿದ್ದಾರೆ. ಅವರ ಬಳಿ ಯಾವುದೇ ಗೋಚರ ಸುರಕ್ಷತಾ ಸಾಧನಗಳಿಲ್ಲದ ಕಾರಣ ಅವರು ಬಿಳಿ ಅಕ್ಷರಗಳನ್ನು ಹೊಂದಿರುವ ದೊಡ್ಡ ಕಪ್ಪು ಬ್ಯಾನರ್ ಅನ್ನು ಪ್ರದರ್ಶಿಸುತ್ತಾ ಇದ್ದರು. “ಪ್ರೀತಿಯ ಶಕ್ತಿಯು ಅಧಿಕಾರದ ಪ್ರೀತಿಯನ್ನು ಸೋಲಿಸಿದಾಗ ಜಗತ್ತು ಶಾಂತಿಯನ್ನು ತಿಳಿಯುತ್ತದೆ” ಎಂದು ಬ್ಯಾನರ್‌ನಲ್ಲಿ ಬರೆಯಲಾಗಿತ್ತು. ಈ ಭಾವುಟ ಹಿಡಿದು ಕಟ್ಟಡ ಹತ್ತಿ ತಮ್ಮ ಶಕ್ತಿ ಮತ್ತು ಪ್ರೀತಿಯನ್ನು ಈ ಜೋಡಿ ಎತ್ತಿ ಹಿಡಿದಿದೆ.
ಇತ್ತ ಕಟ್ಟಡದ 103 ನೇ ಮಹಡಿಯಲ್ಲಿರುವ ನೀರಿನ ಗೋಪುರದ ನಿರ್ವಹಣೆಗೆ ಸಾಮಾನ್ಯವಾಗಿ ಬಳಸಲಾಗುವ ಹ್ಯಾಚ್ ಮೂಲಕ ಈ ಜೋಡಿ ಶಿಖರವನ್ನು ಪ್ರವೇಶಿಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಜೋಡಿಯನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ಆರೋಹಣದ ಸಮಯದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಂತೆ ಕಂಡುಬಂದಿತು ಎನ್ನಲಾಗಿದೆ.
ಹೌದು ಈ ಜೋಡಿ ಎತ್ತರ ಮಟ್ಟದಲ್ಲಿ ಏರಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದೆ. ಈ ವಿಚಾರಕ್ಕೆ ಕೆಲವರು ಒಳ್ಳೆಯ ನಿರ್ಧಾರ ಎಂದರೆ, ಇನ್ನು ಕೆಲವರು ಮದುವೆ ನೆಪದಲ್ಲಿ ಯುವಕ ಯುವತಿಯನ್ನು ಸಾಯಿಸುವುದು,ಯುವತಿ ಯುವಕನನ್ನು ತಳ್ಳುವುದು ಇದೆಲ್ಲಾ ಕಂಡ ನೆಟ್ಟಿಗರು ಈ ಜೋಡಿಗೆ ಫಿದಾ ಆಗಿದ್ದಾರೆ. ಪ್ರೀತಿ ಮಾಡಿದರೆ ಇವರ ರೀತಿ ಪ್ರೀತಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅರೆಸ್ಟ್ ಆದ ಈ ಜೋಡಿ ಬೇಗ ಬಿಡುಗಡೆಯಾಗಲಿ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.





