D.K Shivakumar: ಸಿದ್ದರಾಮಯ್ಯ ಅವರಿಗೆ ಯಾವ ಅಸಮಾಧಾನವೂ ಇಲ್ಲ : ಸಿಎಂ ಡಿಕೆಶಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಇದ್ದಿದ್ದರಿಂದ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಕಾರಣಕ್ಕೆ ಅವರು ಮನೆಯಲ್ಲಿದ್ದು,ಪ್ರಮಾಣ ವಚನಕ್ಕೆ ಬಂದಿಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ವೇಳೆ, ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿಯಲ್ಲಿ ಅದಲು-ಬದಲು ವಿಚಾರವಾಗಿ, ಹೈಕಮಾಂಡ್ ಕಳಿಸಿದ ಪಟ್ಟಿಯಂತೆ ಸ್ಥಾನ ಸಿಕ್ಕಿದೆ. ತಾಂತ್ರಿಕ ಸಮಸ್ಯೆಯಾಗಿ ಗಾಯತ್ರಿ ಶಾಂತೇಗೌಡರನ್ನು ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ರಾಜಕೀಯ ಹೇಳಿಕೆಗಳನ್ನು ಅವರು ನೀಡಿರಲಿಲ್ಲ. ಹೀಗಿದ್ದರೂ ಮೊದಲ ಸಂಪುಟ ರಚನೆಯ ಸಂದರ್ಭದಲ್ಲಿ ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.ಸಿದ್ದರಾಮಯ್ಯ ಮತ್ತು ನಾನು ಸೇರಿ ಪಟ್ಟಿ ಸಿದ್ಧಪಡಿಸಿದ್ದೆವು ಎಂದರು.

ಅವ್ರ ಹುಟ್ಟುಹಬ್ಬ ಇತ್ತು ಅದಕ್ಕೇ ಅವರು ಬಂದಿಲ್ಲ. ಯಾವ ಅಸಮಾಧಾನವೂ ಇಲ್ಲ ಎಂದಿದ್ದಾರೆ.ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಸೈಲೆಂಟಾಗಿದ್ದರು. ಆದರೆ, ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಕೈಮೇಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಹಾಗಾಗಲಿಲ್ಲ. ಮತ್ತೆ ಸಿದ್ದರಾಮಯ್ಯ ಅವರ ಕೈಮೇಲಾಗಿದೆ ಎನ್ನಲಾಗ್ತಿದೆ ಎಂದರು.

ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನಗೊಂಡು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಹೊರಗುಳಿದಿರುವುದು ಗಮನ ಸೆಳೆದಿದೆ. ಮತ್ತು ನಾನಾ ಚರ್ಚೆಗೆ ಕಾರಣವಾಗಿದೆ. ತಮ್ಮ ಅಭಿಪ್ರಾಯ ಕಡೆಗಣಿಸಿ ರಾಜಧಾನಿಯ ಪ್ರಭಾವಿ ವ್ಯಕ್ತಿಗೆ ಮತ್ತೆ ಸಂಪುಟದಲ್ಲಿ ಅವಕಾಶ ಕಲ್ಪಿಸಿದ್ದು ಸಿದ್ದರಾಮಯ್ಯ ಅವರನ್ನು ಸಿಟ್ಟಿಗೇಳುವಂತೆ ಮಾಡಿದೆ ಎನ್ನಲಾಗಿದೆ ಎಂದರು.

ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಧಿಕೃತ ನಿವಾಸ ಕಾವೇರಿಯಲ್ಲೆ? ಉಳಿದು ಅಭಿಮಾನಿಗಳು, ಬೆಂಬಲಿಗರಿಂದ ಶುಭಾಶಯ ಸ್ವಿಕರಿಸುತ್ತಾ ಖುಷಿ ಖುಷಿಯಾಗಿದ್ದ ಸಿದ್ದರಾಮಯ್ಯ ಅವರು, ನೂತನ ಸಚಿವರ ಪಟ್ಟಿಯನ್ನು ಎಐಸಿಸಿ ಹೈಕಮಾಂಡ್ ಪ್ರಕಟಿಸುತ್ತಿದ್ದಂತೆ ಕೆರಳಿ ಕೆಂಡವಾದರು ಎನ್ನಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others