ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೆಲವು ಶಾಸಕರು ರಾಜಿನಾಮೆ ಕೊಡುತ್ತೇನೆ ಎಂದಿದ್ದು. ಇದೀಗ ಈ ವಿಚಾರವಾಗಿ ಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹಿಂದೆ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ನನಗೆ ಮಂತ್ರಿಸ್ಥಾನ ಕೈತಪ್ಪಿತ್ತು, ಆಮೇಲೆ ನಾನು ಸಚಿವನಾಗಿಲ್ವಾ? ಎಂದು ಅಸಮಾಧಾನಿತ ಶಾಸಕರ ರಾಜೀನಾಮೆ ನಡೆಗೆ ಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಲೋಕಭವನಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ತಾಳ್ಮೆಯಿಂದ ಇರಬೇಕು, ಎಲ್ಲರಿಗೂ ಅವಕಾಶ ಕೊಡಿಸುವ ಕೆಲಸ ಮಾಡುತ್ತೇನೆ. ಈಗ ನಾನು ಲೋಕಭವನಕ್ಕೆ ಹೋಗ್ತಿದ್ದೇನೆ ಎಂದು ತಿಳಿಸಿದ್ದಾರೆ.
ಯಾರಾದ್ರೂ ರಾಜೀನಾಮೆ ಕೊಟ್ರೆ ಸ್ವೀಕಾರ ಮಾಡಿ. ಸಚಿವ ಸ್ಥಾನ ವಂಚಿತರಿಗೆ ಬೇರೆ ಬೇರೆ ಸ್ಥಾನ ಕೊಡುತ್ತೇವೆ. ಅದನ್ನು ಮೀರಿ ರಾಜೀನಾಮೆ ಕೊಟ್ರೆ ರಾಜೀನಾಮೆ ಸ್ವೀಕರಿಸುವಂತೆ ರಾಜೀನಾಮೆ ಕೊಡುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದವರಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಸಿಎಂಗೆ ಹೈಕಮಾಂಡ್ ಸೂಚನೆ ನೀಡಿದೆ
ಶಾಸಕರು ಹೆಚ್ಚಿದ್ದಾರೆ ಎಲ್ಲರಿಗೂ ಕೊಡೋಕೆ ಆಗಲ್ಲ. ಎಲ್ಲರೂ ತಾಳ್ಮೆಯಿಂದ ಇರಬೇಕೆಂದು ಮನವಿ ಮಾಡುತ್ತೇನೆಹಿಂದೆ ನನಗೆ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಮಂತ್ರಿ ಸ್ಥಾನ ತಪ್ಪಿತ್ತು. ಆ ಮೇಲೆ ನಾನು ಮಂತ್ರಿ ಆಗಿರಲಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.





