ಸಾಮಾನ್ಯವಾಗಿ ಮಾನವ ಎಷ್ಟೆಲ್ಲಾ ಇತಿಹಾಸ ಹೊಂದಿದ್ದಾನೋ? ಆತನಷ್ಟೇ ಚರಿತ್ರೆಯನ್ನು ಪುಟ್ ಪಾತ್ ಸಹ ಹೊಂದಿದೆ. ಹೌದು ಪುಟ್ ಪಾತ್ ಎಂದರೆ, ಅದಕ್ಕೊಂದು ಮಹತ್ವವಿದ್ದು, ಗತಿಸಿ ಹೊದ ಕಾಲಕ್ಕೆ ತಿರುವು ನೀಡುತ್ತದೆ.
ಈ ಮೊದಲು ನಮ್ಮ ದೇಶವನ್ನು ಆಂಗ್ಲರು ಆಡಳಿತ ಮಾಡುತ್ತಿದ್ದರು. ಇವರು ಆಡಳಿತಕ್ಕೆ ಬರುವ ಮುನ್ನ, ನಮ್ಮ ದೇಶಕ್ಕೆ ವ್ಯಾಪಾರಕ್ಕೆಂದು ಬಂದಿದ್ದರು ಅಲ್ಲವೇ? ನಮ್ಮಗೆಲ್ಲಾ ಗೊತ್ತಿರುವಂತೆ ಈ ಬ್ರೀಟಿಷ್‌ರು ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುವುದಕ್ಕೆಂದು ಬಂದು ನಮ್ಮಲ್ಲಿಯೇ ನೆಲಿಸಿ, ನಮ್ಮ ಮೇಲೆ ಸವಾರಿ ಮಾಡಿದ್ದರು. ಇದೆಲ್ಲರಿಗೂ ಗೊತ್ತಿರುವ ವಿಚಾರ ಆದರೇ ಇವರು ಆಡಳಿತ ಮಾಡುವ ಮುನ್ನ ವ್ಯಾಪಾರ ಎಲ್ಲಿ ಮಾಡುತ್ತಿದ್ದರು? ಅವತ್ತಿನ ಕಾಲದಲ್ಲಿ ಮಾರಾಟ ಮಾಡುವುದಕ್ಕೆ ಯಾವುದೇ ರೀತಿಯ ಮಾರುಕಟ್ಟೆಯ ವ್ಯವಸ್ಥೆ ಇರಲಿಲ್ಲ , ಆಗ ವ್ಯಾಪಾರ- ವ್ಯವಹಾರವನ್ನು ಬೀದಿಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಕಂಡುಕೊಂಡಿದ್ದರು.
ಇದಷ್ಟೇ ಅಲ್ಲದೇ ವಿಜಯನಗರದ ಸಾಮ್ರಾಜ್ಯದಲ್ಲಿಯೂ ಚಿನ್ನ-ಬೆಳ್ಳಿ ಮಾರಾಟವನ್ನು ಇದೇ ಪುಟ್-ಪಾತ್ ಮೇಲೆ ಮಾಡುತ್ತಿದ್ದರು. ಆಗ ಯಾವುದೇ ರೀತಿಯ ತೆರಿಗೆ ಇರಲಿಲ್ಲ, ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಇರಲಿಲ್ಲ ಸಿಕ್ಕ-ಸಿಕ್ಕ ಸ್ಥಳದಲ್ಲಿ ಸುಲಭವಾಗಿ ವಸ್ತುಗಳನ್ನು ಶೇಲ್ ಮಾಡುತ್ತಿದ್ದರು. ಭಾರತ ಅಭಿವೃತ್ತಿಯತ್ತ ಸಾಗುತ್ತಾ, ಸಾಗುತ್ತಾ ಮಾರುಕಟ್ಟೆ.ಸುಂಕ, ಅಂಗಡಿಗಳು, ಹಲವಾರು ರೀತಿಯ ವ್ಯವಸ್ಥೆಗಳು ಹುಟ್ಟಿಕೊಂಡವು. ಇದರ ಮೊದಲು ದೊಡ್ಡ-ದೊಡ್ಡ ವ್ಯಕ್ತಿಗಳು ಸಹ ಪುಟ್ ಪಾತ್ ಮೇಲೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
ಡಿಜಿಟಲ್ ಯುಗದಲ್ಲಿ ಬದುಕುತ್ತಿರುವ ನಾವೆಲ್ಲಾ, ರಸ್ತೆ ಬದಿಗಿಳಿದು ವ್ಯಾಪಾರ ಮಾಡುವುದಿಕ್ಕಿಂತ ಹೆಚ್ಚಾಗಿ ಸೊಷಿಯಲ್ ಮೀಡಿಯಾಗಳ ಮೂಲಕ ಮಾರುವುದು ಕೊಂಡುಕೊಳ್ಳುವುದು ಮಾಡುತ್ತಿದ್ದೇವೆ. ಸದ್ಯಕ್ಕೆ ನಮಗೆಲ್ಲಾ ಪುಟ್ ಪಾತ್ ಎಂದರೆ ಕೇಲವ ಎನ್ನುವ ಮನಸ್ಥಿತಿಯನ್ನು ಭೀಗಿಯಾಗಿ ಒಪ್ಪಿಕೊಂಡಿದ್ದೇವೆ. ಆದರೇ, ಅದಕ್ಕೂ ನಮ್ಮಷ್ಟೇ ಇತಿಹಾಸವಿದೆ ಎನ್ನುವುದನ್ನು ಮರೆತಿದ್ದೇವೆ. ಇತಿಹಾಸ ಆರಂಭಕ್ಕೆ ಪುಟ್ ಪಾತ್ ಕಾರಣ ಎನ್ನವುದನ್ನು ಮರೆಯಬಾರದು ಅಲ್ಲವೇ? ಪುಟ್ ಪಾತ್‌ಗೂ ಮೌಲ್ಯವಿದೆ ಎನ್ನುವುದಕ್ಕೆ ನಮ್ಮ ಇತಿಹಾಸ ಸಾಕ್ಷಿಯಾಗಿದೆ.





