ಬೆಂಗಳೂರು:’ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸ್ ತಮ್ಮ ಊರುಗಳಿಗೆ ಹೋಗುವುದೇ ಇಲ್ಲ. ಲಾಯರ್ ಗಳಂತೂ ವಾಪಸ್ ಹೋಗಲ್ಲ, ಇಲ್ಲಿನ ಕಾವೇರಿ ನೀರು ಹಾಗೂ ಇಲ್ಲಿನ ಹವಾಮಾನವೇ ಹಾಗಿದೆ. ಬೆಂಗಳೂರಿನ ಜನಸಂಖ್ಯೆ ಹಿಂದೆ ಶೇ. 35 ರಷ್ಟಿತ್ತು, ಈಗ ಶೇ. 47 ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಳೆದ ದಿನ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದ ಶಾಸಕರು ಕೂಡ ಆಮೇಲೆ ಈ ನಗರವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ’ ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ. ನನ್ನ ಬಳಿ ಅಂತಹ ಡಜನ್‌ಗಟ್ಟಲೆ ಶಾಸಕರ ಸಂಪೂರ್ಣ ಲಿಸ್ಟ್ ಇದೆ. ಅದನ್ನೆಲ್ಲ ಇಲ್ಲಿ ಹೇಳೋಕೆ ಹೋಗಲ್ಲ, ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಿಂದ ಬಂದವರ ಹಿಸ್ಟರಿಯನ್ನೂ ನಾನು ಹೇಳಬಲ್ಲೆ. ಆದರೆ ಈಗ ಆ ಇತಿಹಾಸವನ್ನೆಲ್ಲಾ ಬಿಚ್ಚಿಡುವುದು ಬೇಡ ಎಂದರು.
ವಿಧಾನಸಭೆಯ ಕಲಾಪದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, ಬೆಂಗಳೂರು ನಗರದ ಬೆಳವಣಿಗೆ, ಜನಸಂಖ್ಯೆ ಬಗ್ಗೆ ಮಾತನಾಡುವ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರ ವೈಯಕ್ತಿಕ ಬದುಕಿನ ಕುರಿತು ನೀಡಿದ ನಿನ್ನೆ ಸ್ಫೋಟಕ ಹೇಳಿಕೆ ನೀಡಿದರು.
ಬೆಂಗಳೂರು ನಗರ ಬೆಳೆಯುತ್ತಿರುವ ವೇಗ ಹಾಗೂ ಇಲ್ಲಿನ ಜಲ ಮತ್ತು ವಾತಾವರಣದ ಪ್ರಭಾವದ ಕುರಿತು ಮಾತನಾಡುತ್ತಾ ಶಿವಕುಮಾರ್ ಈ ವಿಚಾರವನ್ನು ವಿಧಾನಸಭೆಯಲ್ಲಿ ಹೇಳಿದರು.
ಬೆಂಗಳೂರಿಗೆ ಬಂದವರು, ಇಲ್ಲಿ ನೆಲೆ ನಿಂತವರು ಇಲ್ಲಿನ ಜನಸಂಖ್ಯೆ, ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ, ಆದರೆ ಬೆಂಗಳೂರು ಬಿಟ್ಟು ಹೋಗುವುದಿಲ್ಲ, ಅಷ್ಟೇ ಏಕೆ ಬೆಂಗಳೂರಿಗೆ ಬಂದು ನೆಲೆಸಿದ ಬೇರೆ ಜಿಲ್ಲೆಗಳ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಸದನದಲ್ಲಿದ್ದವರ ಗಮನ ಸೆಳೆದರು.
ಡಿ.ಕೆ. ಶಿವಕುಮಾರ್ ಅವರ ಈ ‘ಎರಡು ಮದುವೆ’ ಹೇಳಿಕೆ ಬರುತ್ತಿದ್ದಂತೆ ಶಾಸಕ ಬಿ.ಪಿ. ಹರೀಶ್ ತಕ್ಷಣವೇ ಮಧ್ಯಪ್ರವೇಶಿಸಿ ಕಾಲೆಳೆದರು. “ಸರ್ ಅದೇನೋ ಎರಡು-ಮೂರು ಮದುವೆ ಅಂತ ಹೇಳ್ತಿದ್ದೀರಲ್ಲ, ಯಾರದ್ದು ಸರ್ ಅದು? ಅವರ ಎರಡು-ಮೂರು ಮದುವೆಯ ಕಥೆ ನಿಮಗೆ ಹೇಗೆ ಗೊತ್ತು ಸರ್? ಅದನ್ನು ಹುಡುಕಿಕೊಂಡು ಹೊರಟಿದ್ದೀರಲ್ಲ, ಅದನ್ನು ನೋಡಿದರೆ ನೀವು ಎಂತಾ ಮಹಾನ್ ಕಲಾವಿದ ಇರಬೇಕು ಸರ್!” ಎಂದು ತಮಾಷೆ ಮಾಡಿದ್ದಾರೆ.
ಶಾಸಕ ಹರೀಶ್ ಅವರ ಈ ಹಾಸ್ಯಮಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಅದೆಲ್ಲಾ ಈಗ ಬೇಡ ಬಿಡಿ, ವೈಯಕ್ತಿಕ ವಿಷಯಗಳನ್ನು ಸದನದಲ್ಲಿ ಚರ್ಚಿಸುವುದು ಬೇಡ. ಅದನ್ನೆಲ್ಲಾ ಆಮೇಲೆ ಪರ್ಸನಲ್ ಆಗಿ ಕುಳಿತು ಮಾತನಾಡೋಣ,” ಎಂದು ನಗುತ್ತಾ ವಿಷಯವನ್ನು ಕ್ಲೋಸ್ ಮಾಡಿದ್ದಾರೆ.





