ಕರ್ನಾಟಕ ಸರ್ಕಾರವು ಪಡಿತರ ಚೀಟಿದಾರರ ಅನುಕೂಲಕ್ಕಾಗಿ ‘ಅನ್ನ ಸೇವೆ’ (Anna Seva) ಹೆಸರಿನ ಹೊಸ ಇ-ಕೆವೈಸಿ (e-KYC) ಮೊಬೈಲ್ ಆ್ಯಪ್ ಅನ್ನು ಅಕ್ಟೋಬರ್ 1, 2026 ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಬೆಂಗಳೂರಿನಲ್ಲಿ ಈ ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುವ ಹಾಗೂ ಸರ್ವರ್ ಡೌನ್ ಸಮಸ್ಯೆಯಿಂದ ಜನರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಈ ಆ್ಯಪ್ ತರಲಾಗಿದೆ.
ಬಯೋಮೆಟ್ರಿಕ್ ಅಥವಾ ಬೆರಳಚ್ಚು ಮೂಡದ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಮುಖದ ಗುರುತಿಸುವಿಕೆ ತಂತ್ರಜ್ಞಾನದ ಮೂಲಕ ಸುಲಭವಾಗಿ ಇ-ಕೆವೈಸಿ ಮಾಡಬಹುದು.
ಸ್ಮಾರ್ಟ್ಫೋನ್ ಹೊಂದಿರುವ ಸಾರ್ವಜನಿಕರು ನ್ಯಾಯಬೆಲೆ ಅಂಗಡಿ ಅಥವಾ ಸೈಬರ್ ಕೆಫೆಗಳಿಗೆ ಅಲೆಯದೆ, ಉಚಿತವಾಗಿ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್ ಇ-ಕೆವೈಸಿಯನ್ನು ಮನೆಯಲ್ಲೇ ಕುಳಿತು ಮಾಡಬಹುದು.
ಯಾವುದೇ ಸೇವಾ ಕೇಂದ್ರಗಳಿಗೆ ಹಣ ನೀಡುವ ಅಗತ್ಯವಿಲ್ಲದೆ ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ
ಸದ್ಯಕ್ಕೆ ಈ ‘ಅನ್ನ ಸೇವೆ’ ಆ್ಯಪ್ ಅನ್ನು ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಉಡುಪಿ
- ಹಾವೇರಿ
- ಕಾರವಾರ (ಉತ್ತರ ಕನ್ನಡ)
- ಬಳ್ಳಾರಿ
- ಬೀದರ್
- ಕೊಪ್ಪಳ
ಈ ಆಪ್ಗೆ ಅನ್ನಸೇವೆ ಎಂದು ಹೆಸರಿಡಲಾಗಿದ್ದು, ಎಂಟು ಜಿಲ್ಲೆಗೆ ಮಾತ್ರ ಲಾಂಚ್ ಮಾಡಲಾಗಿದೆ. ಈ ಆಪ್ ಮೂಲಕ ಮನೆಯಲ್ಲಿ ಕೂತು ಇ-ಕೆವೈಸಿ ಮಾಡಬಹುದು. ಸದ್ಯ ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಆಪ್ ಲಾಂಚ್ ಆಗಿದೆ. 20 ದಿನದ ಬಳಿಕ ಅಧಿಕೃತವಾಗಿ 31 ಜಿಲ್ಲೆಗೆ ಸಿಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಜಿಲ್ಲೆಗಳಲ್ಲಿನ ಪ್ರಾಯೋಗಿಕ ಯಶಸ್ಸಿನ ನಂತರ, ಮುಂದಿನ 20 ದಿನಗಳ ಬಳಿಕ ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದರೊಂದಿಗೆ ಇ-ಕೆವೈಸಿ ಪೂರ್ಣಗೊಳಿಸುವ ಗಡುವನ್ನು ಅಕ್ಟೋಬರ್ 20, 2026 ರವರೆಗೆ ವಿಸ್ತರಿಸಲಾಗಿದೆ





