ಸರ್ಕಾರಿ ಶಾಲೆಯ ಆವರಣ ನಿರ್ವಹಣೆಗೆ ತೊಡಕು, ಮುಖ್ಯ ಶಿಕ್ಷಕ ಕೃಷ್ಣ ರವರ ಅಳಲು

ಶ್ರೀರಂಗಪಟ್ಟಣ: ಕಡತನಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಪಕ್ಕದಲ್ಲಿ ಬೃಹದಾಕಾರದ ಮರಗಳು ಬೆಳೆದಿದ್ದು ಈ ಮುಂಗರ ಮಳೆಯಲ್ಲಿ ಬೀಸುವ ಗಾಳಿಗೆ ಮರಗಳು ಕಟ್ಟಡದ ಮೇಲೆ ಉರುಳುವ ಅಪಾಯವಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ನಮ್ಮ ದೂರುಗಳನ್ನು ನಿರ್ಲಕ್ಷಿಸಿದ್ದಾರೆ. ಶಾಲೆಯ ಕಾಂಪೌಂಡ್ ಪಕ್ಕದ ಚರಂಡಿ ಬೊಗ್ಗಡ ತುಂಬಿದ್ದು ವಾಸನೆಯು ನಾರುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಮಕ್ಕಳಿಗೆ ಅನಾರೋಗ್ಯದ ಆತಂಕ ಹೆಚ್ಚಾಗಿದೆ.

ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಸ್ವಚ್ಛತಾ ಕಾರ್ಯಕ್ಕೆ ದೂರು ನೀಡಿದ್ದರು ತಿರುಗಿ ನೋಡದ ಸ್ಥಿತಿ ಬಂದಿದೆ. ಯಾವ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದಿರುವಾಗ ಕೆಲವು ಮಕ್ಕಳ ಪೋಷಕರನ್ನು ಮನವೊಲಿಸಿ ಐದು ಮಕ್ಕಳನ್ನು ನಮ್ಮ ಶಾಲೆಯಲ್ಲಿಯೇ ಉಳಿಸಿಕೊಂಡಿದ್ದೇವೆ. ಈ ಶಾಲೆಗೆ ಇನ್ನಷ್ಟು ಮಕ್ಕಳನ್ನು ಕರೆತರುವ ಪ್ರಯತ್ನದಲ್ಲಿದ್ದೇನೆ. ಶಾಲೆಗೆ ಕಂಪ್ಯೂಟರ್, ಸ್ಮಾರ್ಟ್ ಟಿವಿ ವ್ಯವಸ್ಥೆಯನ್ನು ಮಾಡಿದ್ದು, ಹೆಚ್ಚುವರಿ ಶಿಕ್ಷಕರೆಗಾಗಿ ನಾವೇ ಸಂಬಳ ಕೊಡಲು ಮುಂದಿದ್ದೇನೆ. ನನಗೆ ಗ್ರಾಮದ ಸ್ಥಳೀಯರ ಸಹಕಾರ ಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕ ಕೃಷ್ಣ ತನ್ನ ಅಳಲು ಹೇಳಿಕೊಂಡಿದ್ದಾರೆ.

ಇದೇ ಗ್ರಾಮದ ಆಲೆಮನೆ ಕೃಷ್ಣಕುಮಾರ್ ಮಾತನಾಡಿ ನಾವು ಓದಿದ್ದು ಸರ್ಕಾರಿ ಶಾಲೆಯಲ್ಲಿ, ಕಂಪ್ಯೂಟರ್ , ಸ್ಮಾರ್ಟ್ ಟಿವಿ ತರಗತಿಗಳು ಇಲ್ಲದಿದ್ದರೂ ಗ್ರಾಮದ ಪೋಷಕರು ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸುತ್ತಿದ್ದರು. ಈ ಸಾರಿಯಲ್ಲಿ ನಾನು ಕೂಡ ವಿದ್ಯಾಭ್ಯಾಸ ಮಾಡಿದ್ದು, ಎಸ್ ಡಿ ಎಂ ಸಿ ಉಪಾಧ್ಯಕ್ಷನಾಗಿದ್ದೆ. ಆದರೆ ಈ ಕೆಲವು ವರ್ಷಗಳ ಹಿಂದೆಯೇ ಇಂತಹ ಪರಿಸ್ಥಿತಿ ಈ ಶಾಲೆಗೆ ಬಂದೊದಗಿದೆ ಎಂದು ಮಮ್ಮಲ ಮರುಗಿದರು. ಸಂಬಂಧಪಟ್ಟ ಇಲಾಖೆಗಳು ಇಂತಹ ಪರಿಸ್ಥಿತಿಗಳನ್ನು ನಿರ್ವಹಿಸಲು ಮುಂದಡಿ ಇಡಬೇಕೆಂದು ಮನವಿ ಮಾಡಿದರು. ಶಾಲಾ ಆವರಣದಲ್ಲಿ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಸಹ ಶಿಕ್ಷಕಿ ಶ್ರೀಮತಿ ಸುಶ್ಮಿತಾ, ಶಿಕ್ಷಕಿ ದಿವ್ಯ, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸೇರಿದಂತೆ ಹಾಜರಿದ್ದರು.

Share it :

Leave a Reply

Your email address will not be published. Required fields are marked *