‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಾವು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಪುನರುಚ್ಚರಿಸುತ್ತಾ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಸರ್ವನಾಶದ ಎಚ್ಚರಿಕೆಯನ್ನು ನೀಡಿದ್ದಾರೆ.

“ನಾವು ಇರಾನ್ ಅನ್ನು ಆರ್ಥಿಕವಾಗಿ ಪ್ರತ್ಯೇಕಿಸಿದ್ದೇವೆ ಮತ್ತು ಅವರು ಶೀಘ್ರದಲ್ಲೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ… ಒಂದು ಸಮಯ ಬರುತ್ತದೆ, ಆಗ ತೀರಾ ತಡವಾಗಿರುತ್ತದೆ ಮತ್ತು ಒಂದು ರಾಷ್ಟ್ರವಾಗಿ ಅವರು ಉಳಿದುಕೊಳ್ಳಲು ಬಿಡಲು ನಮಗೆ ಅವಕಾಶವಿರುವುದಿಲ್ಲ. ನಾನು ಅದನ್ನು ನೋಡಲು ಬಯಸುತ್ತೇನೆ ಮತ್ತು ಈ ಮೇಜಿನ ಸುತ್ತಲಿರುವ ಜನರು ಕೂಡ ಅದನ್ನು ನೋಡಲು ಬಯಸುತ್ತಾರೆ ಎಂದು ನಾನು ನಿಮಗೆ ಹೇಳಬಲ್ಲೆ,” ಎಂದು ಅವರು ಹೇಳಿದರು.

ಆದರೆ ಅದೇ ಸಮಯದಲ್ಲಿ, ಕಳೆದ ವರ್ಷ ಅಮೆರಿಕ ನಡೆಸಿದ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ (Operation Midnight Hammer) ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ಅದು ಈಗ ಅವಶೇಷಗಳ ರಾಶಿಯಡಿ ಹೂತುಹೋಗಿದೆ ಎಂದು ಟ್ರಂಪ್ ಹೇಳಿದರು.

‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ ಎಂಬುದು ಬಹುರಾಷ್ಟ್ರೀಯ ಮತ್ತು ಬಹು-ಮಾದರಿಯ ಸಂಪರ್ಕ ಹಾಗೂ ಮೂಲಸೌಕರ್ಯ ಉಪಕ್ರಮವಾಗಿದ್ದು, ಇದನ್ನು ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯಲ್ಲಿ ನಡೆದ G20 ಶೃಂಗಸಭೆಯ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಾಗಿತ್ತು.

ಪ್ರಸ್ತಾವಿತ ಯೋಜನೆ ಎರಡು ಪ್ರತ್ಯೇಕ ಕಾರಿಡಾರ್‌ಗಳನ್ನು ಒಳಗೊಂಡಿರುತ್ತದೆ – ಪೂರ್ವ ಕಾರಿಡಾರ್ ಮತ್ತು ಉತ್ತರ ಕಾರಿಡಾರ್. ಮೊದಲನೆಯದು ಭಾರತವನ್ನು ಅರೇಬಿಯನ್ ಗಲ್ಫ್‌ಗೆ ಸಂಪರ್ಕಿಸಿದರೆ, ಎರಡನೆಯದು ಅರೇಬಿಯನ್ ಗಲ್ಫ್ ನ್ನು ಯುರೋಪ್‌ಗೆ ಸಂಪರ್ಕಿಸುತ್ತದೆ.

ಈ ವ್ಯವಸ್ಥೆಯು ರೈಲು ಮಾರ್ಗವೊಂದನ್ನು ಒಳಗೊಂಡಿರುತ್ತದೆ; ಇದು ಅಸ್ತಿತ್ವದಲ್ಲಿರುವ ಸಮುದ್ರ ಮತ್ತು ರಸ್ತೆ ಸಾರಿಗೆ ಮಾರ್ಗಗಳಿಗೆ ಪೂರಕವಾಗಿ, ವೆಚ್ಚ-ಪರಿಣಾಮಕಾರಿ ಗಡಿಯಾಚೆಗಿನ ‘ಹಡಗು-ರೈಲು’ ಸಾರಿಗೆ ಜಾಲವಾಗಿ ಕಾರ್ಯನಿರ್ವಹಿಸುತ್ತದೆ. ಸದಸ್ಯ ರಾಷ್ಟ್ರಗಳು ಇಂಧನ ಮತ್ತು ಡಿಜಿಟಲ್ ಸಂಪರ್ಕಕ್ಕಾಗಿ ಕೇಬಲ್ ನ್ನು ಹಾಗೂ ಸ್ವಚ್ಛ ಹೈಡ್ರೋಜನ್ ರಫ್ತಿಗಾಗಿ ಪೈಪ್‌ಲೈನ್ ಅನ್ನು ಅಳವಡಿಸಲು ಬಯಸುತ್ತವೆ.

ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಾದ್ಯಂತ ಸಂಪರ್ಕ, ವ್ಯಾಪಾರ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವುದು ಈ ಕಾರಿಡಾರ್‌ನ ಗುರಿಯಾಗಿದೆ.

‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEEC) ಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂಧನ ಮೂಲಸೌಕರ್ಯವನ್ನು ಇರಾನ್‌ನ ನಿಯಂತ್ರಣಾ ಕೇಂದ್ರಗಳಿಂದ (ಚೆಕ್‌ಪಾಯಿಂಟ್‌ಗಳಿಂದ) ದೂರ ಸ್ಥಳಾಂತರಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಸಂದರ್ಭದಲ್ಲಿ ‘ಗಲ್ಫ್ ಸಹಕಾರ ಮಂಡಳಿ’ಯೊಂದಿಗಿನ ಬಹುಪಕ್ಷೀಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅಮೆರಿಕದ ನಾಯಕ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

“ನೆರೆಯ ದೇಶಗಳ ವ್ಯಾಪಾರಿ ನೌಕೆಗಳ ಮೇಲೆ ಇರಾನ್ ನಡೆಸಿದ ಭಯೋತ್ಪಾದಕ ದಾಳಿಗಳು, ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯವನ್ನು ಇರಾನ್‌ನ ನಿಯಂತ್ರಣಾ ಕೇಂದ್ರಗಳಿಂದ ದೂರ ಸ್ಥಳಾಂತರಿಸುವ ಅಗತ್ಯವನ್ನು ಎತ್ತಿ ತೋರಿಸಿವೆ,” ಎಂದು ಟ್ರಂಪ್ ಹೇಳಿದರು

“ಅದಕ್ಕಾಗಿಯೇ ನನ್ನ ಆಡಳಿತ ‘ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್’ ಹಾಗೂ ತೈಲ ರವಾನೆಗಾಗಿ ಪೈಪ್‌ಲೈನ್ ಅಥವಾ ಇತರ ಯಾವುದೇ ವಿಧಾನಗಳ ಮೂಲಕ ಕೈಗೊಳ್ಳುವ ಯೋಜನೆಗಳನ್ನು ಬಲವಾಗಿ ಬೆಂಬಲಿಸುತ್ತದೆ. ಈ ಪ್ರದೇಶವನ್ನು ದಶಕಗಳಿಂದ ಕಾಡುತ್ತಿರುವ ಸವಾಲುಗಳನ್ನು ಜಂಟಿಯಾಗಿ ಮೆಟ್ಟಿ ನಿಲ್ಲುವ ಹಂತದಲ್ಲಿದ್ದೇವೆ,” ಎಂದು ಅವರು ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *