Donald Trump.
ಟೆಹ್ರಾನ್/ವಾಷಿಂಗ್ಟನ್: ಇರಾನ್ ಅಮೆರಿಕ ಕದನ ನಿಲ್ಲುವುದಿಲ್ಲ ಎನ್ನುವ ನಂಬಿಕೆ ಹೊಂದಿದ್ದರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಲೇ ಇರುತ್ತದೆ. ಇದೀಗ ಇರಾನ್ ಜೊತೆಗಿನ ಕದನ ವಿರಾಮ ಅಂತ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿನೆ ಮಾಡಿದ್ದಾರೆ.
ನನ್ನ ಪ್ರಕಾರ ಶಾಂತಿ ಒಪ್ಪಂದ ಅನ್ನೋದು ಮುಗಿದ ಅಧ್ಯಾಯ. ನಾನಿನ್ನು ಇರಾನಿಯನ್ನರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಮೂರು ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಪಡೆ ಪ್ರತೀಕಾರದ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.3 ವಾರಗಳ ಹಿಂದೆ ಇರಾನ್‌ನೊಂದಿಗೆ ಸಹಿ ಹಾಕಿದ ತಿಳುವಳಿಕೆ ಒಪ್ಪಂದದ ಬಗ್ಗೆ ಕೇಳಿದಾಗ, ಟ್ರಂಪ್ ಅದನ್ನು ಸ್ಪಷ್ಟವಾಗಿ ಹೇಳಿದರು.
ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿ ಪ್ರಕಾರ, ಈ ಬಾರಿ ಇರಾನ್ ಒಳಗಿರುವ ಕನಿಷ್ಠ 80ಕ್ಕೂ ಹೆಚ್ಚು ಆಯಕಟ್ಟಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಇದು ಕಳೆದ ಜೂನ್‌ನಲ್ಲಿ ನಡೆದ ದಾಳಿಗಿಂತ 8 ಪಟ್ಟು ಹೆಚ್ಚು ತೀವ್ರ ಮತ್ತು ದೊಡ್ಡದಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದರು.
ಅವರ ಬಳಿ ಪರಮಾಣು ಶಸ್ತ್ರಾಸ್ತ್ರ ಇದ್ದಿದ್ದರೆ ಅದನ್ನ ಬಳಸುತ್ತಿದ್ದರು. ಇನ್ನೂ ಇರಾನ್ ಜೊತೆಗೆ ಮಾತುಕತೆ ನಡೆಸುವುದರಿಂದ ಸಮಯ ವ್ಯರ್ಥ ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.ಇರಾನಿಯನ್ನರು ನಾಲಾಯಕ್ ಜನರು, ವಿಕೃತ ಹಾಗೂ ಕೊಳಕು ಮನಸ್ಸಿನವರು. ಕ್ರೂರಿಗಳೂ ಕೂಡ ಹೌದು. ಅವರನ್ನ ಮುನ್ನಡೆಸುವವರು ಸಹ ವಿಕೃತ ಮನಸ್ಸು ಹೊಂದಿದವರೇ ಆಗಿದ್ದಾರೆ.
ಇದಕ್ಕೂ ಮುನ್ನ ಹಾರ್ಮುಜ್ ಜಲಸಂಧಿಯಲ್ಲಿವಾಣಿಜ್ಯ ಹಡಗುಗಳ ಮೇಲೆ ಇರಾನ್ ಪಡೆಗಳು ನಡೆಸಿದ ದಾಳಿಗೆ ಪ್ರತೀಕಾರವಾಗಿ, ಅಮೆರಿಕ ಮಿಲಿಟರಿ ಇರಾನ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ವಾಯುದಾಳಿಗಳನ್ನು ನಡೆಸಿತು.
ಹಾರ್ಮುಜ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ ಅಮೆರಿಕ ಇರಾನ್‌ಗೆ ತೈಲ ಮಾರಾಟ ಮಾಡಲು ನೀಡಿದ್ದ ಪರವಾನಗಿಯನ್ನ ರದ್ದುಗೊಳಿಸಿದೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಟ್ರಂಪ್, ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಜೊತೆಗೆ ಸಹಿ ಹಾಕಲಾಗಿದ್ದ ಮಧ್ಯಂತರ ಶಾಂತಿ ಒಪ್ಪಂದ ಮುಗಿದಿದೆ ಎಂದಿದ್ದಾರೆ.





