ರೋಗ ಬರದಂತೆ ನೋಡಿಕೊಳ್ಳುವುದು ಸಮಾಜದ ಕರ್ತವ್ಯ : ಡಾ. ಬಿ ಸುಜಯ್ ಕುಮಾರ್

ಗಾಂಧೀಜಿ ಹೇಳಿದ ಮಾತೊಂದು ದೇಹ ಮನಸ್ಸು ಸಮಾಜ ಎಲ್ಲದಕ್ಕೂ ಚಿಕಿತ್ಸೆ ಸತ್ಯವಂತ ವೈದ್ಯನಾಗುತ್ತಾನೆ ಎಂದು ಪ್ರಸಿದ್ಧ ವೈದ್ಯರಾದ ಡಾಕ್ಟರ್ ಬಿ ಸುಜಯ್ ಕುಮಾರ್ ಹೇಳಿದರು.

ವೈದ್ಯರು ಏರ್ಪಡಿಸಿದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಿರಿಯ ಗಾಂಧಿ ವಾದಿಯಾಗಿದ್ದ ಅವರು, ಮಾತನಾಡಿ ರೋಗಿಯನ್ನು ಗುಣಪಡಿಸುವುದು ವೈದ್ಯನ ಕರ್ತವ್ಯ. ರೋಗ ಬರದಂತೆ ನೋಡಿಕೊಳ್ಳುವುದು ಸಮಾಜದ ಕರ್ತವ್ಯ ಎಂದು ತಿಳಿಸಿದ್ದಾರೆ.

ಇಂದು ನಾವು ಇಲ್ಲಿ ಸೇರಿರುವುದು ಕೇವಲ ಒಬ್ಬ ವೈದ್ಯರನ್ನು ಸ್ಮರಿಸಲಿಕ್ಕಲ್ಲ. ಒಂದು ತತ್ವವನ್ನು ಜೀವಿಸಲಿಕ್ಕೆ.ಆ ತತ್ವದ ಹೆಸರು ವೈದ್ಯ ಕೆ.ವೈ. ಶ್ರೀನಿವಾಸ್. ಎಂದರು.

ರೋಗ ಬರುವ ಮುನ್ನ ಎಚ್ಚರಿಕೆಯಿಂದ ಇರಬೇಕು,ನಿಮ್ಮ ಆರೋಗ್ಯದಲ್ಲಿ ಯಾವುದೇ ಸಣ್ಣ-ಪುಟ್ಟ ಸಮಸ್ಯೆ ಕಾಣಿಸಿಕೊಂಡರು ಸಹ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಆರೋಗ್ಯ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ.

ಉತ್ತಮ ಆರೋಗ್ಯಕ್ಕಾಗಿ ಮೊದಲು ಮನೆ ಮನಸ್ಸನ್ನು ಶುದ್ಧವಾಗಿ ಇಟ್ಟಕೊಳ್ಳಬೇಕು.ಗ್ರಾಮ ನಗರದಲ್ಲಿಯೂ ಸ್ಪಚ್ಛತೆಯನ್ನು ಕಾಪಡಬೇಕು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಎಸ್ ಎಂ ಶಿವಕುಮಾರ್, ಐಕ್ಯ ಅಲೆಯನ್ಸ್ ಸಂಸ್ಥೆಯ ಅಧ್ಯಕ್ಷೆ ಎನ್ ಸರಸ್ವತಿ, ಪುರಸಭಾ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ ಎಸ್ ವೆಂಕಟೇಶ್, ಸಾಹಿತಿ ಗಣoಗೂರು ನಂಜೇಗೌಡ, ಮುಸ್ಲಿಂ ಸೌಹಾರ್ದ ವೇದಿಕೆ ಅಧ್ಯಕ್ಷ ಅಪ್ಸರ್ ಖಾನ್,ಡಾ. ಅಭಿನಯ್, ಡಾ. ಬಿ ಕೆ ರಾಮು, ಕ್ಯಾತನಹಳ್ಳಿ ಅಮಿತ್ ಕೃಷ್ಣ, ಪುಷ್ಪ ಕೆ ವೈ ಶ್ರೀನಿವಾಸ್, ಪ್ರೊ ಮಹಾದೇವ್, ಸಾಹಿತಿ ಚಂದ್ರಶೇಖರಯ್ಯ, ಎಸ್ ಆರ್ ಧನ್ಯಕುಮಾರ್, ವಕೀಲ ಎಸ್ ಆರ್ ಸಿದ್ದೇಶ್, ಟಿ.ಬಾಲರಾಜು, ಪುಟ್ಟಸ್ವಾಮಿ, ಕ್ಯಾತನಹಳ್ಳಿ ಚಂದ್ರಣ್ಣ, ರಂಗನಾಥ್, ಚಿಕ್ಕಮ್ಮೇಗೌಡ, ಅಯೂಬ್ ಮುಂತಾದವರು ಭಾಗಿಯಾಗಿದ್ದರು

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others