ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಪ್ರಚಾರವಿಲ್ಲದೆ ಬಿಡುಗಡೆಯಾದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆಯುತ್ತಿದೆ. ಕೇವಲ ₹2 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ, ಬಿಡುಗಡೆಯಾದ 15 ದಿನಗಳಲ್ಲಿ ಬರೋಬ್ಬರಿ ₹36.10 ಕೋಟಿ ಗ್ರಾಸ್ ಕಲೆಕ್ಷನ್ ದಾಖಲಿಸಿದೆ.
ಸೆಪ್ಟೆಂಬರ್ 25ರಂದು ಕೇವಲ 45 ರಿಂದ 60 ಪ್ರದರ್ಶನಗಳೊಂದಿಗೆ (ಶೋ) ಆರಂಭವಾದ ಈ ಸಿನಿಮಾ, ಪ್ರೇಕ್ಷಕರಿಂದ ಸಿಕ್ಕ ಅಭೂತಪೂರ್ವ ‘ಮೌತ್ ಪಬ್ಲಿಸಿಟಿ’ಯಿಂದಾಗಿ (ಬಾಯಿಮಾತಿನ ಪ್ರಚಾರ) 2ನೇ ವಾರದ ವೇಳೆಗೆ 700 ಕ್ಕೂ ಹೆಚ್ಚು ಶೋಗಳನ್ನು ತನ್ನದಾಗಿಸಿಕೊಂಡಿತು.
ಮೊದಲ ವಾರದ ಗಳಿಕೆ: ಆರಂಭದಲ್ಲಿ ನಿಧಾನಗತಿಯಲ್ಲಿ ಚಲಿಸಿದ ಚಿತ್ರ ಮೊದಲ ವಾರದಲ್ಲಿ ₹5.32 ಕೋಟಿ ನೆಟ್ (ಸುಮಾರು ₹7.92 ಕೋಟಿ ಗ್ರಾಸ್) ಕಲೆಕ್ಷನ್ ಮಾಡಿತ್ತು. ಎರಡನೇ ವಾರದಲ್ಲಿ ಚಿತ್ರದ ಕಲೆಕ್ಷನ್ ದುಪ್ಪಟ್ಟಾಗಿದ್ದು, 11ನೇ ದಿನವಾದ ಸೋಮವಾರವೂ ₹3 ಕೋಟಿ ಗಳಿಸಿ ಗಮನ ಸೆಳೆಯಿತು. 14 ದಿನಗಳ ಅಂತ್ಯಕ್ಕೆ ಚಿತ್ರದ ಒಟ್ಟು ಗಳಿಕೆ ₹33.75 ಕೋಟಿ ದಾಟಿತ್ತು
ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಆರ್ಭಟವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಮೌತ್ ಪಬ್ಲಿಸಿಟಿಯಿಂದಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ 14ನೇ ದಿನದ ಕಲೆಕ್ಷನ್ನಲ್ಲಿ ಭಾರಿ ಜಿಗಿತ ಕಂಡಿದೆ.
ಅಕ್ಟೋಬರ್ 9ರ ಶುಕ್ರವಾರದಂದು ಒಂದೇ ದಿನ ₹4.77 ಕೋಟಿ ಗಳಿಸುವ ಮೂಲಕ ಚಿತ್ರಮಂದಿರಗಳಲ್ಲಿ ಭದ್ರವಾಗಿ ಮುನ್ನುಗ್ಗುತ್ತಿದೆ.ಪ್ರಸ್ತುತ ಈ ಚಿತ್ರವು ಒಟ್ಟು 39.05 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಸಿನಿಮಾವು ಬಿಡುಗಡೆಯಾದ ಕೇವಲ 14 ದಿನಗಳಲ್ಲಿ ಅಂದರೆ ಎರಡು ವಾರಗಳ ಒಳಗೆ ಬರೋಬ್ಬರಿ 39.05 ಕೋಟಿ ರೂ ಗಳಿಕೆ ಹಾಗೂ 33.47 ಕೋಟಿ ರೂ. ನಿವ್ವಳ ಗಳಿಕೆ ದಾಖಲಿಸಿದೆ. ಸೆಪ್ಟೆಂಬರ್ 25ರಂದು ಕೇವಲ 45 ರಿಂದ 60 ಪ್ರದರ್ಶನಗಳೊಂದಿಗೆ ಆರಂಭವಾದ ‘ಪ್ರೇಮದ ಊರಲಿ’ ಸಿನಿಮಾ, ಪ್ರೇಕ್ಷಕರ ಭಾರಿ ಬೇಡಿಕೆಯಿಂದಾಗಿ 2ನೇ ವಾರದ ವೇಳೆಗೆ ಬರೋಬ್ಬರಿ 700ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ.
ರಂಗಾಯಣ ರಘು ಹಾಗೂ ಗೋವಿಂದೇ ಗೌಡ ನಟನೆಯ ಈ ಚಿತ್ರವು ದಿನದಿಂದ ದಿನಕ್ಕೆ ತನ್ನ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳುತ್ತಾ, ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಹಣ ಬಾಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.ರಂಗಾಯಣ ರಘು, ಶ್ರೀ ರಾಮ್ ಹಾಗೂ ತಪಸ್ವಿನಿ ಪೂನಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಭಾವನಾತ್ಮಕ ಕೌಟುಂಬಿಕ ಚಿತ್ರ, ಸದ್ಯ ಸ್ಯಾಂಡಲ್ವುಡ್ನ ಅತ್ಯಂತ ಯಶಸ್ವಿ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಪ್ರೇಕ್ಷಕರ ಭಾರಿ ಬೇಡಿಕೆಯಿಂದಾಗಿ ಈ ಚಿತ್ರವನ್ನು ತೆಲುಗಿಗೂ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ಡಬ್ ಮಾಡಲಾಗಿದೆ





