ದ್ವಿತೀಯ ನಿರ್ಬಂಧಗಳಿಗೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ- ಇರಾನ್ ಆಕ್ರೋಶ

ಅಮೆರಿಕ ಇರಾನ್‌ ಗೆ ಯಾರು ಸಹಾಯ ಮಾಡುತ್ತಾರೋ ಅವರ ವಿರುದ್ಧವೂ ಸಹ ಪ್ರತಿಕಾರ ತೀರಿಸಿಕೊಳ್ಳಲಿಉ ಸಜ್ಜಾಗಿದೆ. ಅಲ್ಲದೆ ಅಮೆರಿಕ ಇತ್ತೀಚೆಗೆ ಘೋಷಿಸಿರುವ ಹೊಸ ದ್ವಿತೀಯ ನಿರ್ಬಂಧಗಳ ವಿರುದ್ಧ ಇರಾನ್ ತೀವ್ರ ಆಕ್ರೋಶ ಹೊರಹಾಕಿದೆ.

ಇರಾನ್ ಜೊತೆ ಕಾನೂನುಬದ್ಧವಾಗಿ ವ್ಯಾಪಾರ ನಡೆಸುವ ಇತರ ಸ್ವತಂತ್ರ ರಾಷ್ಟ್ರಗಳನ್ನು ಬಲವಂತವಾಗಿ ತಡೆಯುವ ಅಮೆರಿಕದ ಈ ನೀತಿಯು “ಸ್ಪಷ್ಟ ಮತ್ತು ಪೂರ್ಣ ಪ್ರಮಾಣದ ಹೊಸ ವಸಾಹತುಶಾಹಿ” ಎಂದು ಇರಾನ್ ಕಿಡಿಕಾರಿದೆ.

ಅಮೆರಿಕದ ಕ್ರಮಗಳು “ಬಹಿರಂಗ ಹಾಗೂ ಸಂಪೂರ್ಣ ವಸಾಹತುಶಾಹಿ” ಮರಳುವ ಸಾಧ್ಯತೆಯನ್ನು ಸೃಷ್ಟಿಸಬಹುದು ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಕಿಡಿಕಾರಿದ್ದಾರೆ.

ಒಂದು ದೇಶವು ಮತ್ತೊಂದು ಸಾರ್ವಭೌಮ ರಾಷ್ಟ್ರದಲ್ಲಿರುವ ಸಂಸ್ಥೆಗಳ ಮೇಲೆ ವಿಧಿಸುವ ದ್ವಿತೀಯ ನಿರ್ಬಂಧಗಳಿಗೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ ಎಂದು ಬಘಾಯಿ ಹೇಳಿದ್ದಾರೆ.

ಇಂತಹ ದ್ವಿತೀಯ ನಿರ್ಬಂಧಗಳಿಗೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಚಾರ್ಟರ್‌ನ 2ನೇ ವಿಧಿಯ 1ನೇ ಪ್ಯಾರಾಗ್ರಾಫ್‌ನಲ್ಲಿ ಪ್ರತಿಪಾದಿಸಿರುವ ಸಾರ್ವಭೌಮ ಸಮಾನತೆಯ ಮೂಲ ತತ್ವವನ್ನೇ ಇಂತಹ ನಿರ್ಬಂಧಗಳು ಉಲ್ಲಂಘಿಸುತ್ತವೆ ಎಂದು ಕಿಡಿಕಾರಿದ್ದಾರೆ.

ಆರ್ಥಿಕ ಒತ್ತಡ ಹೇರುವುದು “ಅಂತರರಾಷ್ಟ್ರೀಯ ಅಪರಾಧ ಹಾಗೂ ಕಾನೂನುಬಾಹಿರ ಕೃತ್ಯ” ಎಂದು ಬಣ್ಣಿಸಿದ ಅವರು, ನೌಕಾ ದಿಗ್ಬಂಧನದ ಜೊತೆಗೆ ನಿರ್ಬಂಧಗಳನ್ನು ಬಳಸುವುದು ಇತರ ರಾಷ್ಟ್ರಗಳ ಸಾರ್ವಭೌಮತ್ವಕ್ಕೂ ಮತ್ತಷ್ಟು ಅಪಾಯ ಉಂಟುಮಾಡಲಿದೆ ಎಂದು ಹೇಳಿದ್ದಾರೆ.

ಇಂತಹ ಕ್ರಮಗಳಿಂದ ಒಂದು ದೇಶದ ಸಾರ್ವಭೌಮತ್ವ ಮತ್ತೊಂದು ಶಕ್ತಿಶಾಲಿ ರಾಷ್ಟ್ರದ ನಿರ್ಧಾರಗಳಿಗೆ ಒಳಪಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಕೇವಲ ಅಮೆರಿಕ ಮತ್ತು ಇರಾನ್ ನಡುವಿನ ವಿವಾದವಲ್ಲ, ಬದಲಾಗಿ ಇಡೀ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಎದುರಾಗಿರುವ ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

ಹೊಸ ನಿರ್ಬಂಧಗಳು ಒಂದೇ ದೇಶದ ವಿರುದ್ಧದ ಆರ್ಥಿಕ ಯುದ್ಧವನ್ನು ಮೀರಿವೆ. ಇತರ ಸ್ವತಂತ್ರ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಮೇಲೆ ತನ್ನ ಅಧಿಕಾರವನ್ನು ವಿಸ್ತರಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others