ರಾಮ ಮಂದಿರ ದೇಣಿಗೆ ಅಕ್ರಮ: ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ – ಸಿ.ಟಿ.ರವಿ

ಬೆಂಗಳೂರು: ರಾಮ ಮಂದಿರ ದೇಣಿಗೆ ಅಕ್ರಮ ವಿಚಾರ ನನಗೆ ತುಂಬಾ ಬೇಜಾರು ನೀಡಿದೆ. ಈ ವಿಚಾರವನ್ನು ನನಗೆ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ, ಈ ವಿಷಯ ಮನಸಿಗೆ ಘಾಸಿ ಉಂಟು ಮಾಡಿದೆ. ಯೋಗಿ ಯಾರ ತಪ್ಪನ್ನೂ ಸಹಿಸಲ್ಲ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಾಮ ಮಂದಿರ ದೇಣಿಗೆ ಅಕ್ರಮ ವಿಚಾರ ಮತ್ತು ಬಿಜೆಪಿ – ಆರ್‌ಎಸ್‌ಎಸ್‌ಗೆ ಡೊನೇಷನ್ ಫಸ್ಟ್ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಸಿಟಿ ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವರ ಉದ್ದೇಶ ರಾಮ ಮಂದಿರದ ದೇಣಿಗೆ ಕುರಿತು ಅಲ್ಲ. ರಾಮನ ಅಸ್ತಿತ್ವ ಪ್ರಶ್ನೆ ಮಾಡಿದವರು ಇವರು.ರಾಮ ಮಂದಿರ ವಿರೋಧಿಗಳಿಗೆ ಈಗ ಯಾಕೆ ಸಂಕಟ ಆಗುತ್ತಿದೆ. ಅ ರಾಜಕೀಯಕ್ಕೆ ಇದನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಬಳಿ ಬೇರೆ ಮಾಹಿತಿ ಇದ್ದರೆ ಎಸ್‌ಐಟಿಗೆ ಕೊಡಲಿ ಅಂತ ತಿರುಗೇಟು ಕೊಟ್ಟರು. ಕಾಂಗ್ರೆಸ್ ಅವರಿಗೆ ರಾಮನ ಬಗ್ಗೆ ಪ್ರೀತಿ ಇಲ್ಲ. ಚಿಂತೆ ಮಾಡಬೇಡಿ ಅಲ್ಲಿ ಯೋಗಿ ಇದ್ದಾರೆ. ಯೋಗಿ ಯಾರ ತಪ್ಪನ್ನೂ ಸಹಿಸಲ್ಲ. ಹಾಗಾಗಿ 8 ಜನರನ್ನು ಜೈಲಿಗೆ ಹಾಕಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ನೀವು ಅಡತಡೆ ನಿವಾರಿಸಿಲ್ಲ, ವಿರೋಧಿಸಿದ್ರಿ. ಈಗ ಯಾಕೆ ಮಾತನಾಡುತ್ತೀರಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಮ ಮಂದಿರಕ್ಕಾಗಿ ನಾವು ಕರ ಸೇವೆಗೆ ಹೋಗಿದ್ವಿ, ಜೈಲಿಗೆ ಹೋಗಿದ್ವಿ. ನೀವು ರಾಮಮಂದಿರ ಆಗಲಿ ಅಂತ ಹೇಳೋಕಾಗದೇ ಹೇಡಿಗಳು ಆಗಿದ್ರಿ, ಮಿಸ್ಟರ್ ಪ್ರಿಯಾಂಕ್ ಖರ್ಗೆ ಅವರೇ ಈ ಟ್ರಸ್ಟ್ನಲ್ಲಿ ಬಿಜೆಪಿಯ ಯಾವ ಪದಾಧಿಕಾರಿಗಳೂ ಇರಲಿಲ್ಲ. ಎಂದು ಕಿಡಿಕಾರಿದರು.

ರಾಮ ಮಂದಿರ ನಿರ್ಮಾಣ ಕಾರ್ಯ 500 ವರ್ಷಗಳ ಶ್ರಮ. ಇದಕ್ಕಾಗಿ ಲಕ್ಷಾಂತರ ಜನ ಪ್ರಾಣ ಕೊಟ್ಟಿದ್ದಾರೆ. 1 ರೂ.ನಿಂದ ಕೋಟಿ ರೂಪಾಯಿ ಡೊನೇಷನ್ ಕೊಟ್ಟಿದ್ದಾರೆ. ಆ ಭಾವನೆಗೆ ಬೆಲೆ ಕಟ್ಟಲು ಆಗಲ್ಲ. ಆ ಭಾವನೆಗೆ ಘಾಸಿ ಆಗಬಾರದು. ಈ ಸುದ್ದಿ ನಮ್ಮ ಮನಸಿಗೆ ಘಾಸಿ ಮಾಡಿದೆ ಎಂದು ಹೇಳಿದ್ದಾರೆ.

ಈ ವಿಚಾರಕ್ಕೆ ಕೈ ಪಕ್ಷ ಮತ್ತು ಪ್ರಿಯಾಂಕ್‌ ಖರ್ಗೆ ಏನು ಹೇಳುತ್ತಾರೆ ಎನ್ನುವುದು ಕಾದುನೋಡಬೇಕಿದೆ.

Share it :

Leave a Reply

Your email address will not be published. Required fields are marked *