Ramalinga Reddy: ಯಡಿಯೂರಪ್ಪ ಕಾಲದಲ್ಲೇ 4 ಶೂಟೌಟ್ ಆಗಿ, ಮೂರು ಜನ ಸತ್ತಿದ್ದರು: ರಾಮಲಿಂಗಾರೆಡ್ಡಿ

ಬೆಂಗಳೂರು: ಚಾ.ನಗರದಲ್ಲಿ ಕಳ್ಳಬೇಟೆ ಶಿಬಿರಗಳಿಂದ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಹಾನಿಮಾಡಿದವರು ಯಾರೆಂಬುದನ್ನ ಪೊಲೀಸರು ಗುರುತಿಸಿದ್ದಾರೆ. ಅವ್ರು ಹಿಂದಿನ ಕೇಸ್ ಗಳಲ್ಲಿ ಇದ್ದಂಥವರು. ಆದರೂ ರಿಪೋರ್ಟ್ ನಲ್ಲಿ ಏನು ಬಂದಿದೆ ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ,

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳದ್ದು ಏನಾದರೂ ತಪ್ಪಿದ್ದರೆ, ಅವರ ವಿರುದ್ಧ ಶಿಶ್ತು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ 4 ಶೂಟೌಟ್‌ ಆಗಿತ್ತು. ಮೂರು ಜನ ಮತೃಪಟ್ಟಿದ್ದರು. 2011 ರಿಂದ 2026ರ ವರೆಗೆ 300 ಕ್ಕೂ ಹೆಚ್ಚು ಪ್ರಕರಣಗಳು ಚಾಮರಾಜನಗರ ವಿಭಾಗದಲ್ಲೇ ಆಗಿವೆ ಎಂದರು.

ಸುಮಾರು 66 ಬಾರಿ ಶೂಟೌಟ್‌ ಪ್ರಕರಣಗಳು ಆಗಿವೆ. ಈ ರೀತಿ ಪದೇ ಪದೇ ಆಗ್ತಾ ಇರುತ್ತೆ. ಸರ್ಕಾರವೇ ಮೂವರನ್ನು ಕೊಲೆ ಮಾಡಿಸಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ರು ಆವಾಗ ಬನ್ನೇರುಘಟ್ಟದಲ್ಲಿ ಶ್ರೀಗಂಧ ಕದಿಯೋಕೆ ಹೋಗಿದ್ದ ಸಂದರ್ಭದಲ್ಲಿ ಶೂಟೌಟ್ ಆಗಿ, ಒಬ್ಬನಿಗೆ ಗಾಯ ಆಗಿತ್ತು ಎಂದು ಹೇಳಿದ್ದಾರೆ.

ಬೊಮ್ಮಾಯಿ ಕಾಲದಲ್ಲೂ ಕೂಡ ಬನ್ನೇರುಘಟ್ಟದಲ್ಲೇ ಶೂಟೌಟ್‌ ಆಗಿತ್ತು ಆಗ ಒಬ್ಬ ಸತ್ತು ಹೋಗಿದ್ದ. ಪಾಲಾರ್ ನಲ್ಲಿ ಶೂಟೌಟ್ ಆಗಿತ್ತು. ಹೀಗೆ ಬೊಮ್ಮಾಯಿ, ಯಡಿಯೂರಪ್ಪ ಕಾಲದಲ್ಲೇ 4 ಶೂಟೌಟ್ ಆಗಿ, ಮೂರು ಜನ ಸತ್ತಿದ್ದರು. 2011 ರಿಂದ 2026ರ ವರೆಗೆ 300 ಕ್ಕೂ ಹೆಚ್ಚು ಪ್ರಕರಣಗಳು ಚಾಮರಾಜನಗರ ವಿಭಾಗದಲ್ಲೇ ಆಗಿವೆ ಎಂದರು.

ಸುಮಾರು 66 ಬಾರಿ ಗುಂಡಿನ ಚಕಮಕಿ ಆಗಿವೆ ಅರಣ್ಯ ಪ್ರದೇಶಗಳಲ್ಲಿ ಈ ರೀತಿ ಆಗ್ತಾ ಇರುತ್ತೆ. ಇದೆಲ್ಲವನ್ನೂ ಆರೋಪ ಪ್ರತ್ಯಾರೋಪ ರಾಜಕಾರಣಕ್ಕೆ ಮಾಡಬಾರದು. ನಮ್ಮ ಅಧಿಕಾರಿಗಳ ತಪ್ಪು ಸಾಬೀತಾದ್ರೆ ಅವರ ವಿರುದ್ಧವೂ ಕ್ರಮ ತಗೊಳ್ತೇವೆ ಎಂದು ತಿಳಿಸಿದ್ರು.

ಅರಣ್ಯ ಪರಿಸರ ಉಳಿಯಬೇಕು, ವನ್ಯಜೀವಿ ರಕ್ಷಣೆ ಕೂಡ ಆಗಬೇಕು. ನಮ್ಮ ಇಲಾಖೆಯಿಂದ ಸಾರ್ವಜನಿಕರಿಗೂ ತೊಂದರೆ ಆಗಬಾರದು, ಅದೇ ಮುಖ್ಯ. ಆರೋಪ ಪ್ರತ್ಯಾರೋಪದ ಮೂಲಕ ನಮ್ಮ ಇಲಾಖೆಯ ಸಿಬ್ಬಂದಿ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು. ಅದೇ ರೀತಿ ಸಾರ್ವಜನಿಕರಿಗೂ ತೊಂದರೆ ಆಗಬಾರದು ಎಂದರು.

ಶೂಟೌಟ್ ನಂತರ ಗಲಾಟೆ ಮಾಡಿಸಿದ್ದು ಕಾಡುಗಳ್ಳರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇವಾಗ ವಿಧಾನಸಭೆ, ವಿಧಾನ ಪರಿಷತ್ ಕಲಾಪಗಳು ನಡೆಯುತ್ತಿವೆ. ಇದರ ಬಗ್ಗೆ ಇಲ್ಲಿ ಹೆಚ್ಚು ಏನು ಮಾತಾಡೋದು ಬೇಡ. ಉಳಿದಿದೆಲ್ಲವನ್ನು ಸೋಮವಾರ, ಮಂಗಳವಾರ ಸದನದಲ್ಲಿ ಮಾತಾಡ್ತೀನಿ ಎಂದು ಹೇಳಿದ್ರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others