ಬೇಬಿ ಬಂಪ್ ಪ್ರದರ್ಶಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಸಮಂತಾ

ಮಾ ಇಂಟಿ ಬಂಗಾರದ ದೇಶದಲ್ಲಿಯೇ ಸದ್ದು ಮಾಡುತ್ತಿದ್ದು, ಟಿಆರ್ಪಿ ಗಳಿಸುವಲ್ಲಿ ಮಹತ್ತರ ಹೆಜ್ಜೆಯನ್ನು ಹಾಕಿದೆ. ಹೀಗಿರುವಾಗ ಇದರ ಬೆನ್ನಲ್ಲೇ ನಟಿ ಸಮಂತಾ ರುತು ಪ್ರಭಾ ತಾಯಿಯಾಗುತ್ತಿದ್ದಾರೆ.

ಈ ಹಿಂದೆ ಕೇವಲ ವೇದಿಕೆಯ ಮೇಲಷ್ಟೇ ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದ್ದ ಸ್ಯಾಮ್ ಇದೀಗ ಮೊದಲ ಬಾರಿಗೆ ತಮ್ಮ ಬೇಬಿ ಬಂಪ್ ಪ್ರದರ್ಶಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

ನಟಿ ಸಮಂತಾ ಸದ್ಯ ತಾಯ್ತನದ ಸಂತೋಷದಲ್ಲಿದ್ದು, ಪ್ರಸ್ತುತ ಗರ್ಭಿಣಿಯಾಗಿರುವ ಅವರು ತಮ್ಮ ಮೊದಲ ತ್ರೈಮಾಸಿಕ ಹಂತದಲ್ಲಿದ್ದಾರೆ.

ಕಠಿಣ ವರ್ಕೌಟ್‌ ಹಾಗೂ ಅತ್ಯಂತ ಫಿಟ್ ಆದ ದೇಹದ ಮೂಲಕವೇ ಸುದ್ದಿಯಾಗುತ್ತಿದ್ದ ಸಮಂತಾ, ಈ ಹಿಂದೆ ಕಷ್ಟಪಟ್ಟು ಸಿಕ್ಸ್ ಪ್ಯಾಕ್ ಆ್ಯಬ್ಸ್ ಹೊಂದಿದ್ದರು. ಆದರೆ ಈಗ ಸಿಕ್ಸ್ ಪ್ಯಾಕ್ ಇದ್ದ ಜಾಗದಲ್ಲಿ ಪ್ರೀತಿಯ ಬೇಬಿ ಬಂಪ್ ಮೂಡಿರುವುದು ಬೆಳಕಿಗೆ ಬಂದಿದೆ.

ಇದನ್ನೇ ಉಲ್ಲೇಖಿಸಿ ತಮ್ಮ ಹೊಟ್ಟೆಯ ಫೋಟೋ ಪೋಸ್ಟ್ ಮಾಡಿರುವ ಸಮಂತಾ, “ನನ್ನ ಸಿಕ್ಸ್ ಪ್ಯಾಕ್… ಮತ್ತೆ ಯಾವಾಗ ಭೇಟಿಯಾಗಬೇಕೋ ಆವಾಗ ಭೇಟಿಯಾಗೋಣ”ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಗರ್ಭಾವಸ್ಥೆಯ ಈ ಹಂತದಲ್ಲಿ ಕೇವಲ ಸರಳ ವ್ಯಾಯಾಮಗಳನ್ನಷ್ಟೇ ಮಾಡಲು ಸಾಧ್ಯವಿದ್ದು, ಕಠಿಣ ವರ್ಕೌಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಾಕಷ್ಟು ಸಂಕಷ್ಟಗಳಲ್ಲಿ ನೊಂದಿದ್ದ ಸಮಂತಾ ಅವರಿಗೆ ವೈಯಕ್ತಿಕ ಜೀವನದ ಜೊತೆಗೆ ವೃತ್ತಿಜೀವನದಲ್ಲೂ ದೊಡ್ಡ ಯಶಸ್ಸು ಸಿಕ್ಕಿದೆ.
ಇತ್ತ ಸಮಂತಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಾ ಇಂಟಿ ಬಂಗಾರಂ’ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಒಂದು ಕಡೆ ಚಿತ್ರದ ಭರ್ಜರಿ ಸಕ್ಸಸ್ ಮತ್ತು ಇನ್ನೊಂದೆಡೆ ತಾಯ್ತನದ ಮಧುರ ಅನುಭೂತಿ—ಹೀಗೆ ಎರಡೂ ಖುಷಿಗಳನ್ನು ಸಮಂತಾ ಒಟ್ಟಿಗೆ ಸಂಭ್ರಮಿಸಿದ್ದಾರೆ. ಇಂಟರ್‌ನೆಟ್‌ನಲ್ಲಿ ಸ್ಯಾಮ್ ಅವರ ಬೇಬಿ ಬಂಪ್ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸ್ಯಾಮ ಇದೀಗ ಮುಂಬರುವ ಡಿಸೆಂಬರ್ ವೇಳೆಗೆ ಈ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ರೆಡಿಯಾಗಿದ್ದಾರೆ.

ನೋವುಗಳಿಗೆ ಬ್ರೇಕ್‌ ಅಪ್‌ ನೀಡಿ ನಲಿವಿನತ್ತ ಸ್ಯಾಮ ಹೊಸ ಹೆಜ್ಜೆ ಹಾಕುತ್ತಿದ್ದಾರೆ. ಮಗು ಹುಟ್ಟಿದ ನಂತರ ಇನ್ನು ಸಾಕಷ್ಟು ಮಟ್ಟದಲ್ಲಿ ಚಿತ್ರರಂಗದಲ್ಲಿ ಮಿಂಚಲಿ ಎಂದು ಅಭಿಮಾನಿಗಳು ಸಹ ಸಮಾಜೀಕ ತಾಲತಾಣಗಳ ಮೂಲಕ ತಮ್ಮ ಅನಿಕೆಯನ್ನು ವ್ಯಕ್ತಪಡಿಸಿದ್ದಾರೆ.

Share it :

Leave a Reply

Your email address will not be published. Required fields are marked *