ಬೆಂಗಳೂರು: ರಾಮ ಮಂದಿರದಲ್ಲಿ ಲೂಟಿ ಹೊಡೆದವರು ನಾಗೇಂದ್ರ ಬಗ್ಗೆ ಮಾತನಾಡುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾಗೇಂದ್ರಗೆ ಸಚಿವ ಸ್ಥಾನ ಕೊಟ್ಟಿರೋದಕ್ಕೆ ಬಿಜೆಪಿ ವಿರೋಧ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ,ರಾಮ ಮಂದಿರದಲ್ಲಿ ಲೂಟಿ ಹೊಡೆದವರು ಇದರ ಬಗ್ಗೆ ಮಾತನಾಡುತ್ತಾರೆ. ಕೋವಿಡ್ ಸಮಯದಲ್ಲಿ ಪಿಎಂ ಫಂಡ್ ಅಂತ 20 ಸಾವಿರ ಕೋಟಿ ಕಲೆಕ್ಟ್ ಮಾಡಿದ್ದರು. ಅದರ ಬಗ್ಗೆ ಉತ್ತರ ಕೊಡಲ್ಲ. ಅದರ ಬಗ್ಗೆ ಚರ್ಚೆಯೇ ಮಾಡಬೇಡಿ ಎನ್ನುತ್ತಾರೆ.
ನಾಗೇಂದ್ರ ವಿಚಾರ ಸದನದಲ್ಲಿ ಚರ್ಚೆ ಮಾಡಲಿ, ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು ನಾಗೇಂದ್ರ ವಿಚಾರದಲ್ಲಿ ಕ್ಲಾರಿಟಿ ಇದೆ. ಸದನದಲ್ಲಿ ಇಲಾಖೆ ವಿಚಾರ ಬಂದರೆ ಅದಕ್ಕೆ ಉತ್ತರ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಾದ ನಂತರ ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆಯ ಕಗ್ಗಂಟ್ಟನ್ನು ಬಿಡಿಸುವ ಕೆಲಸವನ್ನು ಕೈ ಹೈಕಮಾಂಡ್ ಮಾಡಬೆಕಿದ್ದು ಇಂದು ಸಂಜೆ ಅಥವಾ ನಾಳೆಯೊಳೆ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ ಇದರ ವಿಚಾರವಾಗಿಯೂ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾರ್ಮಿಕ ಇಲಾಖೆ ಕೊಟ್ಟರೂ ಕೆಲಸ ಮಾಡುತ್ತೇನೆ. ಇಲ್ಲದಿದ್ದರೇ ಯಾವುದೇ ಖಾತೆ ಕೊಟ್ಟರೂ ಪರವಾಗಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ
ಯಾವುದೇ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ. ಆದರೆ ನನಗೆ ಕಾರ್ಮಿಕ ಇಲಾಖೆ ಮೇಲೆ ಜಾಸ್ತಿ ಪ್ರೀತಿ ಎಂದಿದ್ದಾರೆ.ಈ ಮಧ್ಯೆ ಸಚಿವ ಸಂತೋಷ್ ಲಾಡ್ ತಾವು ಹಿಂದೆ ನಿರ್ವಹಿಸಿದ್ದ ಖಾತೆ ಕಾರ್ಮಿಕ ಇಲಾಖೆಯ ಬಗ್ಗೆ ಹೆಚ್ಚು ಒಲವು ತೋರಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಸಚಿವರಿಗೆ ಇಂದು ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.





