ಸೋಶಿಯಲ್‌ ಮೀಡಿಯಾ, ಸಂಸಾರದಲ್ಲಿ ಕಾರ್ಯನಿರತರಾಗಿರುವವರು ಕರಾಳ ಸತ್ಯ ತಿಳಿದುಕೊಳ್ಳಿ ! ಕಾರಣ ಇಲ್ಲಿದೆ ನೋಡಿ

Social media

ನಿರುದ್ಯೋಗದಿಂದ ಬೇಸತ್ತ ಕೆಲ ಯುವಕರು ಸಾಮಾಜಿಕ ಜಾಲತಾಣಗಳಿಂದ ವೃತ್ತಿ ಆರಂಭಿಸಿದ್ದಾರೆ. ಇನ್ನುಳಿದವರಂತೂ ಸ್ಪಲ್ಪ ಫೇಮಸ್‌ ಆದ್ರೆ ಸಾಕು ದುಡ್ಡಿಗಾಗಿ, ಇಲ್ಲಸಲ್ಲದ ಪ್ರಾಡಕ್ಟ್‌ಗಳನ್ನು ಪ್ರಮೋಟ್‌ ಮಾಡುತ್ತಾರೆ. ಮೋಟಿವೇಶನ್‌ ಹೆಸರಿನಲ್ಲಿ ಲೈಕ್‌ಗಾಗಿ ಸಾಕಷ್ಟು ಸರ್ಕಸ್‌ ಮಾಡುತ್ತಾರೆ. ಒಂದು ಕಾಲದಲ್ಲಿ ಬೆಳೆಗ್ಗೆ ಎದ್ದ ತಕ್ಷಣ ನೇರವಾಗಿ ನಮ್ಮ ಮನೆ ಕೆಲಸಗಳನ್ನು ಮಾಡುತ್ತಿದ್ದೀವಿ. ಆದರೆ ಇದೀಗ ನೇರವಾಗಿ ಎದ್ದ ಕ್ಷಣ ನಮ್ಮ ಕೈ ಮೊಬೈಲ್‌ನ್ನು ಸರ್ಚ್‌ ಮಾಡುತ್ತಿದ್ದು, ಮಲಗಿರುವಲ್ಲಿಯೇ ೧-೨ ತಾಸು ಪೋನ್‌ ಅಲ್ಲಿ ಮುಳುಗಿ ಬಿಡುತ್ತೇವೆ.

ಅಂದು ನಾವು ಹೊರಗಡೆ ಹೋರಟರೆ ಸಾಕು ನಮ್ಮ ಕೈಯಲ್ಲಿ ಕೈಚೀಲ ಇರುತ್ತಿತ್ತು, ಚಿಕ್ಕ ಕೀ ಪ್ಯಾಡ್‌ ಪೋನ್‌ ನಮ್ಮ ಜೇಬಿನಲ್ಲಿ ಮರೆಯಾಗಿತ್ತು. ಇಂದು ನಮ್ಮ ಕೈಯಲ್ಲಿ ಸ್ಮಾಟ್‌ ಪೋನ್‌ ಬಿಟ್ಟರೆ ಬೇರೆ ಏನು ಇರುವುದಿಲ್ಲ ನಮ್ಮ ಕೈ ಕೂಡ ಆ ಪೋನ್‌ ಗೆ ಪಿಕ್ಸ್‌ ಆಗಿ ಬಿಟ್ಟಿದ್ದು, ವಿಪರ್ಯಾಸವೆಂದರೆ ನಾವು ಇಂತಹ ಸನ್ನಿವೇಶಕ್ಕೆ ಬಂದು ತಲುಪಿದ್ದೇವೆ.

ಆರಂಭದಲ್ಲಿ ಯುವಕ-ಯುವತಿಯರು ಸೇರಿ ರೀಲ್ಸ್‌ ಮಾಡುತ್ತಿದ್ದು, ತದನಂತರ ಲವ್‌ನಲ್ಲಿ ಬೀಳುತ್ತಾರೆ. ಕೆಲವೊಬ್ಬರು ಲವ್‌ ಮಾಡಿ ಮದುವೆಯಾಗಿ, ಸಂಸಾರ ಮಾಡುವುದನ್ನು ಸಹ ಸೋಶಿಯಲ್‌ ಮೀಡಿಯಾದಲ್ಲಿ ಸಾರುತ್ತಾರೆ. ಇನ್ನು ಸ್ಪಲ್ಪ ಜನ ಬ್ರೇಕ್ ಅಪ್‌ ಮಾಡಿಕೊಂಡು ಮೋಟಿವೇಶನ್‌ ಸ್ಪೀಚ್‌ ಮಾಡುತ್ತಾರೆ. ಬುದ್ಧಿವಂತರಿಗೆ ಇದು ಒಂದು ಕಡೆ ನಗೆ ತರಿಸಿದರೆ, ಮತ್ತೊಂದು ಕಡೆ ಭಯ ಬೀಳಿಸುತ್ತದೆ ಮುಂದೇನಾಗುತ್ತದೆ ಎನ್ನುವ ಆತಂಕ ಕಾಡುತ್ತದೆ.

ಇತ್ತ ಹಲವು ಹುಡುಗಿಯರು ಕೆಲ ಫೇಸ್‌ ಕ್ರೀಮ್‌ಗಳನ್ನು ಶೋಷಿಯಲ್‌ ಮೀಡಿಯಾ ಮೂಲಕ ಜಾಹಿರಾತು ನೀಡುತ್ತಿದ್ದು, ಅದರ ಉಪಯೋಗ, ಆ ಕ್ರೀಮಗಳ ಫಲಿತಾಂಶ ಅವರಿಗೆ ತಿಳಿದಿರುವುದಿಲ್ಲ ಅವುಗಳನ್ನು ಮಾರಾಟ ಮಾಡಿ ಸಮಾನ್ಯರನ್ನು ಬಲಿಪಶು ಮಾಡುತ್ತಾರೆ. ಪ್ರತಿಯೊಂದು ಪ್ರಾಡಕ್ಟ್ ಈ ಜಾಲತಾಣದಿಂದ ಮಾರಾಟ ಮಾಡುತ್ತಾರೆ ಇದು ಅವರು ಬೆಳೆಯುವುದಕ್ಕೆ ಬೇರೆಯವರನ್ನು ಬಕರಾ ಮಾಡುವುದಾಗಿದೆ.

ಇನ್ನು ಹಿರಿಯರು-ಕಿರಿಯರು ಈ ಸಮಾಜಿಕ ಜಾಲತಾಣದಲ್ಲಿ ಬಿಜಿಯಾಗಿದ್ದು, ಇದರಿಂದಲೇ ಒಳ್ಳೆಯ ಸಂಪಾದನೆಯನ್ನು ಸಂಗ್ರಹಿಸುತ್ತಿದ್ದಾರೆ. ಕಾರಣ ಲೈವ್‌ ಅಲ್ಲಿ ಯಾರಿಗೂ ಕೆಲಸವಿಲ್ಲ, ಸೊಶಿಯಲ್‌ ಮಿಡಿಯಾದಲ್ಲಿ ಫೇಮಸ್‌ ಆದ್ರೆ ಸಾಕು ಹೊರಗಡೆ ಎಲ್ಲರಿಗೂ ಪುಲ್‌ ಸೆಲೆಬ್ರಿಟಿ ಫೀಲ್‌ ಇರುತ್ತದೆ.

ಇನ್ನು ಟ್ರೋಲ್‌ ಬಗ್ಗೆ ಹೇಳುವುದಾದರೆ ಎಷ್ಟು ಜನ ಹೆಣ್ಣು ಮಕ್ಕಳ ಜೀವ ತೆಗೆದುಕೊಂಡಿದ್ದಾರೆ ಈ ವಿಚಾರಕ್ಕೆ ಕೌಂಟ್‌ ಮಾಡುವವರು ಯಾರು ಇಲ್ಲದಂತಾಗಿದೆ. ಮರ್ಯಾದೆ, ಮಾನದ ಹೆಸರಿನಲ್ಲಿ ನೆರವಾಗಿ ಯುವತಿಯರನ್ನು ಗುರಿ ಮಾಡಿರುತ್ತಾರೆ. ಹುಡುಗಿಯರ ಬಟ್ಟೆ ಬಗ್ಗೆ, ಅವರು ಬೂಬ್ಸ್‌ ಬಗ್ಗೆ, ಅವರ ಬಾಡಿ ಬಗ್ಗೆ, ಕಾಮಪ್ರಚೋದಕ ಕಮೆಂಟ್‌ಗಳು ಇಲ್ಲಿ ಕೇಕೆ ಹಾಕುತ್ತಿರುತ್ತವೆ.

ಹುಟ್ಟಿದ ಮಗು ಸಹ ಕೈಯಲ್ಲಿ ಪೋನ್‌ ಹಿಡಿದುಕೊಂಡು ಬೆಳೆಯುತ್ತಿದ್ದು, ಹೀಗಿರುವಾಗ ಈ ಸಮಾಜಿಕ ಜಾಲತಾಣದಲ್ಲಿ ಅಸಭ್ಯ ವರ್ತನೆ ಯಾಕೆ? ಮತ್ತೊಂದು ಕಡೆ ನೋಡುವುದಾದರೆ ಎಲ್ಲ ವಿಷಯಗಳು ನನಗೆ ಗೊತ್ತು, ಎನ್ನವ ರೀತಿಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಬೋಧನೆ ಮಾಡುತ್ತಾರೆ. ದಾರಿಯಲ್ಲಿ ಹೋಗುವಾಗ ಯಾರಾದರೂ ಬಿದ್ದು ಸಾಯುತ್ತಿದ್ದರೆ ಒಂದು ಹನಿ ನೀರು ನೀಡುವುದಿಲ್ಲ.

ಬಡವರಿಗೆ ಒಂದು ರೂಪಾಯಿ ಕೊಟ್ಟಿದ್ದು ಸಹ ಸೋಶಿಯಲ್‌ ಮೀಡಿಯಾದಲ್ಲಿ ಡಂಗುರ ಬಡಿಯುತ್ತಿದ್ದು, ಇದರ ಬಗ್ಗೆ ಕೇಳಿದರೆ ನಾವು ಸಹಾಯ ಮಾಡಿರುವುದು ಪರರಿಗೆ ಗೊತ್ತಾಗಬೇಕಲ್ಲವೇ ಎನ್ನುತ್ತಾರೆ. ಕೆಲವು ಗಲಾಟೆಗಳು ಅಂತು ಸೋಶಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತವೆ. ಏ ನಾನು ಕಾರ್‌ ತಗೆಕೊಳ್ಳುತ್ತೇನೆ ನೋಡು? ಇವೆಲ್ಲಾ ಚಾಲೆಂಜ್‌ ಹೆಸರಿನಲ್ಲಿ ಜನರಿಗೆ ಕಿರಿ ಕಿರಿ ಮಾಡುವುದಾಗಿದೆ.

ಸೋಶಿಯಲ್‌ ಮೀಡಿಯಾ ಸಂಸಾರಕ್ಕೆ ಕೊನೆ ಇಲ್ಲ ಇದು ಇನ್ನು ಮುಂದುವರೆಯುತ್ತಲೇ ಇರುತ್ತದೆ, ಸೋಶಿಯಲ್‌ ಮೀಡಿಯಾ ಬಳಸುವುದು ತಪ್ಪಲ್ಲ ಬಳಕೆಯ ನೆಪದಲ್ಲಿ ಬೇರೆಯವರಿಗೆ ತೊಂದರೆ ಕೊಡುವುದು ತಪ್ಪು ಅಲ್ಲವೇ? ಈ ಸೋಶಿಯಲ್‌ ಮೀಡಿಯಾ ಕಥೆ ಮುಂದೆನಾಗುತ್ತದೆ ಎನ್ನುವುದು ಕಾದು ನೋಡಬೇಕಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others