ಹಳೆಯ ಕಾಲದಲ್ಲಿ ದೇಶ ಭಕ್ತಿ ಸಾರುವ ಸಿನಿಮಾಗಳು ಕಡಿಮೆ ಮಟ್ಟದಲ್ಲಿ ಇದ್ದು, ಇತ್ತೀಚೆಗೆ ಬಹಳ ಮಟ್ಟಿಗೆ ಅಭಿವೃದ್ದಿಯಾಗುತ್ತಿವೆ. ಅತ್ತ ದಕ್ಷಿಣದಲ್ಲಿ ದೇಶಪ್ರೇಮ ಸಾರುವ ಸಿನಿಮಾ. ಸೈನಿಕರ ಬಗೆಗಿನ ಸಿನಿಮಾಗಳು, ರಾಷ್ಟ್ರೀಯತೆ ಸಾರುವ ಸಿನಿಮಾಗಳು ಕಡಿಮೆ ಇದ್ದವು. ಆದರೆ ಇತ್ತೀಚೆಗೆ ದಕ್ಷಿಣದಲ್ಲೂ ಈ ರೀತಿಯ ಚಿತ್ರಗಳು ಬೆಳೆಯುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಸಹ ರಾಷ್ಟ್ರೀಯತೆ ಸಾರುವ, ದೇಶಪ್ರೇಮ ಸಾರುವ ಚಿತ್ರವಾಗಿದ್ದು, ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ವಿಜಯದ ಪಟಾಕಿ ಹಾರಿಸಿದೆ.
ಇತ್ತೀಚೆಗೆ ಮಾಧ್ಯಮವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ರಾಮ್ ಚರಣ್, ಮುಂದಿನ ದಿನಗಳಲ್ಲಿ ‘ರಾಷ್ಟ್ರವೇ ಮೊದಲು’ ಎಂಬ ತತ್ವವಿರುವುದು ಅತ್ಯಗತ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾವು ಹಿಟ್ ಆಗಿದ್ದು, ಸಿನಿಮಾ ಬಿಡುಗಡೆಗೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದರು. ತಮ್ಮ ‘ಪೆದ್ದಿ’ ಸಿನಿಮಾವು ಕೇಂದ್ರ ಸರ್ಕಾರದ ವಿಕಸಿತ್ ಭಾರತ್ ಯೋಜನೆಯನ್ನು ಧ್ವನಿಸುತ್ತದೆ ಎಂದು ಪ್ರಧಾನಿ ಅವರ ಬಳಿ ಹೇಳಿದ್ದರಂತೆ. ‘ಪೆದ್ದಿ’ ಸಿನಿಮಾವು, ಭಾರತದ ಗ್ರಾಮೀಣ ಭಾಗದಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳ ಬಗ್ಗೆ ಕತೆ ಹೊಂದಿದೆ. ಸಿನಿಮಾನಲ್ಲಿ ರಾಮ್ ಚರಣ್ ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
‘ಪೆದ್ದಿ’ ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾನಲ್ಲಿ ಜಾನ್ಹವು ಕಪೂರ್ ರನ್ನು ತೋರಿಸಿರುವ ಬಗ್ಗೆ ಕೆಲವರಿಗೆ ಬೇಸರವಿತ್ತು. ಈ ವಿಚಾರವಾಗಿ ನಿರ್ದೇಶಕ ಬುಚ್ಚಿಬಾಬು ಸನಾ ಅವರು, ಕ್ಷಮೆ ಕೇಳಿ ಜಾನ್ಹವಿಯ ಕೆಲ ಅತಿಯಾದ ಗ್ಲಾಮರಸ್ ದೃಶ್ಯಗಳನ್ನು ಸೆರೆಹಿಡಿದಿದ್ದರು. ಜಾನ್ಹವಿ ಕಪೂರ್ ಪೋಟೋ ವಿವಾದದ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಹಿಟ್ ಆಗಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಸುಮಾರು 350 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಈ ಮೂವಿಸ್‌ನಲ್ಲಿ ರಾಮ್ ಚರಣ್, ಜಾನ್ಹವಿ ಕಪೂರ್ ಜೊತೆಗೆ ಶಿವರಾಜ್ ಕುಮಾರ್ ನಟಿಸಿದ್ದಾರೆ. ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.
ಈ ಸಿನಿಮಾ ಬಗ್ಗೆ ಮಾತನಾಡಿದ ರಾಮ್ ಚರಣ್, ‘ದೇಶ ಮೊದಲು ಎಂದು ಬಿಂಬಿಸುವ, ಮತ್ತು ದೇಶ ಪ್ರೇಮ, ರಾಷ್ಟ್ರೀಯತೆಯ ಸುತ್ತ ಹೆಣೆದ ಕತೆಯುಳ್ಳ ಚಿತ್ರಗಳನ್ನು ಪ್ರೇಕ್ಷಕರು ಸ್ವಾಗತಿಸುತ್ತಿರುವ ಕುರಿತು ಚರಣ್ ತಮ್ಮ ಅಭಿಪ್ರಾಯ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಭವಿಷ್ಯದ ಸಿನಿಮಾಗಳಲ್ಲಿ ‘ಇಂಡಿಯಾ ಫಸ್ಟ್’ ಅಂತಹಾ ರಾಷ್ಟ್ರೀಯ ಸಮಗ್ರತೆಯ ವಿಷಯಗಳು ತುಂಬಾ ಮುಖ್ಯ. ಈ ರೀತಿಯ ಸಿನಿಮಾಗಳು ದೇಶವನ್ನು ಒಗ್ಗೂಡಿಸಿದೆ. ಜನರು ಸಹ ಅಂತಹ ಸಿನಿಮಾ ನೋಡಲು ಬಯಸುತ್ತಿದ್ದಾರೆ ಎಂಬುದನ್ನು ಇಂಥಹಾ ಸಿನಿಮಾಗಳ ಬಾಕ್ಸ್ ಆಫೀಸ್ ನಂಬರ್ಗಳೇ ಹೇಳುತ್ತಿವೆ’ ಎಂದು ರಾಮ್ ಚರಣ್ ತಮ್ಮ ಚಿತ್ರದ ಬಗ್ಗೆ ಮತ್ತು ದೇಶದಲ್ಲಿರುವ ಚಿತ್ರದ ಬಗ್ಗೆ ವಿವರಿಸಿದ್ದಾರೆ.
ಒಟ್ಟಿನನಲ್ಲಿ ಈ ಸಿನಿಮಾದಲ್ಲಿ ಜಾನ್ಹವಿ ಕಪೂರ್ ಪೋಟೋಗಳು ಟೀಕೆಗೆ ಗುರಿಯಾಗಿದ್ದವು, ಇದನ್ನು ಕಂಡ ಕೆಲವವರು ಚಿತ್ರ ಹಿಂದುಳಿಯುವುದು ಗ್ಯಾರಂಟಿ ಎಂದಿದ್ದರು, ಕಂಮೆಟ್‌ಗಳ ನಡುವೆ ಈ ನಿಸಿಮಾ ಸೌಂಡ್ ಮಾಡಿ, ಉನ್ನತ ಮಟ್ಟದಲ್ಲಿ ಬೆಳೆದಿರುವುದು ಸಂತಸದ ವಿಚಾರವಾಗಿದೆ. ಇದೇ ರೀತಿ ನಮ್ಮ ದೇಶ ಬಗ್ಗೆ ಇನ್ನು ಅತಿ ಹೆಚ್ಚು ಸಿನಿಮಾಗಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ.





