ಕಾಕ್ಪಿಟ್ ಬಾಗಿಲು ತೆರೆದುದಷ್ಟೇ ನನ್ನ ಕೊನೆಯ ಅವಕಾಶವಾಗಿತ್ತು, ಹಾಗಾಗಿ ಕೊನೆಯ ಹೋರಾಟ ನಡೆಸಿದೆ ಎಂದು ಫ್ಲೈದುಬೈ ವಿಮಾನದಲ್ಲಿ ಸಹಪೈಲಟ್ ದಾಳಿ ನಡೆಸಿದ ಭೀಕರ ಕ್ಷಣಗಳನ್ನು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಇದೀಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಭಾರತೀಯ ಪೈಲಟ್, ದಾಳಿ ಆರಂಭಕ್ಕೂ ಮುನ್ನ ಸಹಪೈಲಟ್ ಪ್ರಾರ್ಥನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ FZ1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ವಿಮಾನದಲ್ಲಿ 174 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು. ಘಟನೆಯ ಬಳಿಕ ಬೋಯಿಂಗ್ 737-8 ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ವಿಮಾನ ನಿಲ್ದಾಣಕ್ಕೆ ತುರ್ತು ಮಾರ್ಗ ಬದಲಾವಣೆ ಮಾಡಲಾಗಿತ್ತು.
ಸುದ್ದಿಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿರುವ ವಿಮಾನ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ಸೌದಿ ಅರೇಬಿಯಾದ ಮೇಲೆ ಹಾರುತ್ತಿದ್ದ ವೇಳೆ ವಿಮಾನವು ಕೇವಲ 30ಕ್ಕೂ ಹೆಚ್ಚು ಸೆಕೆಂಡ್ಗಳಲ್ಲಿ ಸುಮಾರು 16,625 ಅಡಿ ಎತ್ತರವನ್ನು ಕಳೆದುಕೊಂಡಿತ್ತು. ಘಟನೆ ಕುರಿತು ಯುಎಇ ಕೂಡ ತನ್ನದೇ ಆದ ವಿವರಗಳನ್ನು ನೀಡಿದೆ.
ಯುಎಇ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್ ಶಮ್ಸಿ ಅವರ ಪ್ರಕಾರ, ತನಿಖೆಯಲ್ಲಿ ಸಹಪೈಲಟ್ ಕ್ರ್ಯಾಶ್ ಆಕ್ಸ್ನಿಂದ ಮಚ್ಚರ್ ಮೇಲೆ ದಾಳಿ ನಡೆಸಿ ವಿಮಾನದ ಹಾರಾಟ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಿದ್ದಾನೆ ಎಂಬುದು ಪತ್ತೆಯಾಗಿದೆ. ಯುಎಇ ಈ ಘಟನೆಯನ್ನು ‘ಭಯೋತ್ಪಾದಕ ಕೃತ್ಯದ ಯತ್ನ’ ಎಂದು ಬಣ್ಣಿಸಿದೆ.
ಆದಾಗ್ಯೂ, ತನಿಖೆ ಇನ್ನೂ ಮುಂದುವರಿದಿದ್ದು, ಘಟನೆಯ ಹಿನ್ನೆಲೆ, ದಾಳಿಯ ಉದ್ದೇಶ ಹಾಗೂ ಇದರಲ್ಲಿ ಬೇರೆಯವರ ಸಂಪರ್ಕವಿತ್ತೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ಪರೀಕ್ಷೆಗಳು ಹಾಗೂ ಭೌತಿಕ ಮತ್ತು ಡಿಜಿಟಲ್ ಸಾಕ್ಷ್ಯಗಳ ವಿಶ್ಲೇಷಣೆಯೂ ಮುಂದುವರಿದಿದೆ ಎಂದು ಯುಎಇ ತಿಳಿಸಿದೆ.
ಹಲವು ಮಾಧ್ಯಮ ವರದಿಗಳಲ್ಲಿ ಸಹಪೈಲಟ್ನನ್ನು ಓಮನ್ ಪ್ರಜೆ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ.
ಈ ಹೆಸರು ಪ್ರಕರಣದ ಬಗ್ಗೆ ನೇರ ಮಾಹಿತಿ ಹೊಂದಿರುವ ವ್ಯಕ್ತಿ ಹಾಗೂ ತನಿಖೆಯ ಕುರಿತು ಮಾಹಿತಿ ಪಡೆದ ಮತ್ತೊಬ್ಬ ಮೂಲದಿಂದ ದೊರೆತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ, ಯುಎಇ ಅಧಿಕಾರಿಗಳು ಈ ಗುರುತನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ಅವರ ಖಾಸಗಿ ಕ್ಷಣಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ತಾನು ಉದ್ದೇಶಪೂರ್ವಕವಾಗಿ ಬೇರೆಡೆ ನೋಡುತ್ತಿದ್ದೆ ಎಂದು ಮಚ್ಚರ್ ತಿಳಿಸಿದ್ದಾರೆ.ಕಾಕ್ಪಿಟ್ನ ನೆಲದ ಮೇಲೆ ಬಿದ್ದಿದ್ದಾಗ ವಿಮಾನ ಕೆಳಮುಖವಾಗಿ ಇಳಿಯುತ್ತಿರುವುದು ಗಮನಕ್ಕೆ ಬಂದಿತ್ತು. ಗಾಯಗಳಿಂದಾಗಿ ತೀವ್ರ ಗೊಂದಲಕ್ಕೊಳಗಾಗಿದ್ದೆ. ಹೀಗಾಗಿ ಸರಿಯಾಗಿ ನೋಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೆ. ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ.
ಈ ವೇಳೆ ಕಾಕ್ಪಿಟ್ ಬಾಗಿಲು ಸಮೀಪದಲ್ಲೇ ಇದೆ ಎಂಬುದು ಅವರಿಗೆ ಬಂದಿತು. ಗಾಯಗಳ ನಡುವೆಯೂ ಅಲ್ಲಿಗೆ ತಲುಪಿ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದೆ. ಆದರೆ, ಸಹ ಪೈಲಟ್ ಮತ್ತೆ ಬಾಗಿಲು ಮುಚ್ಚಿದ. ನಂತರ ಹೋರಾಟ ಮುಂದುವರೆಸಿ, ನನ್ನಲ್ಲಿದ್ದ ಎಲ್ಲಾ ಶಕ್ತಿಯನ್ನು ಬಳಸಿ ಮತ್ತೆ ಬಾಗಿಲು ತೆಗೆದೆ. ಈ ವೇಳೆ ಹೊರಗಿದ್ದವರು ಕಾಕ್ಪಿಟ್ಗೆ ಪ್ರವೇಶಿಸಿ ಸಹಪೈಲಟ್ನನ್ನು ನಿಯಂತ್ರಿಸಲು ನೆರವಾದರು.
“ನನ್ನೊಳಗೆ ಉಳಿದಿದ್ದ ಕೊನೆಯ ಹೋರಾಟವನ್ನೂ ನಡೆಸಿದೆ. ನಾನು ಹಾಗೆ ಮಾಡದಿದ್ದರೆ ಸಾಯುತ್ತಿದ್ದೆ” ಎಂದು ಹೇಳಿದ್ದಾರೆ.
ಆದರೆ, ಕೆಲ ನಿಮಿಷಗಳ ಬಳಿಕ ನನ್ನ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿದ್ದಿತ್ತು. ಈ ವೇಳೆ “ವಿಮಾನಕ್ಕೆ ಏನೋ ಆಗಿದೆ ಎಂದು ನಾನು ಭಾವಿಸಿದೆ. ಆದರೆ, ಹೊಡೆತಗಳು ಮುಂದುವರಿದಾಗ, ಅಪಾಯ ವಿಮಾನದಿಂದಲ್ಲ, ಕಾಕ್ಪಿಟ್ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ದಾಳಿ ನಡೆಸುತ್ತಿದ್ದಾನೆಂಬುದು ಅರ್ಥವಾಯಿತು ಎಂದರು.





