ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ನಾಯಕರೇ ಲೋಕಮಾನ್ಯ ಬಾಲಗಂಗಾಧರ ತಿಲಕ್. “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು” ಎಂಬ ಒಂದೇ ಘೋಷಣೆಯಿಂದ ಇಡೀ ಭಾರತೀಯರಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ ಕ್ರಾಂತಿಕಾರಿಯಾಗಿದ್ದರು.
1856ರ ಜುಲೈ 23ರಂದು ಮಹಾರಾಷ್ಟ್ರದಲ್ಲಿ ಜನಿಸಿದ ತಿಲಕ್ ರವರು , ವಕೀಲ, ಶಿಕ್ಷಣತಜ್ಞ, ಪತ್ರಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡರು. ಅವರು “ಕೇಸರಿ” ಮತ್ತು “ಮರಾಠ” ಪತ್ರಿಕೆಗಳ ಮೂಲಕ ಜನರಲ್ಲಿ ರಾಷ್ಟ್ರಭಕ್ತಿ ತುಂಬಿದರು. ಗಣೇಶೋತ್ಸವ ಮತ್ತು ಶಿವಾಜಿ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ಜನರನ್ನು ಒಗ್ಗೂಡಿಸಿದರು.
ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದಕ್ಕಾಗಿ ಅವರಿಗೆ 6 ವರ್ಷ ಮಂಡಲೆಯ ಜೈಲು ಶಿಕ್ಷೆಯಾಯಿತು. ಜೈಲಿನಲ್ಲಿಯೂ ಅವರು “ಗೀತಾ ರಹಸ್ಯ” ಮತ್ತು “ಆರ್ಕ್ಟಿಕ್ ಹೋಮ್ ಇನ್ ದ ವೇದಾಸ್” ನಂತಹ ಮಹಾನ್ ಗ್ರಂಥಗಳನ್ನು ಬರೆದರು.1920ರ ಆಗಸ್ಟ್ 1ರಂದು ಅವರು ಇಹಲೋಕ ತ್ಯಜಿಸಿದರು. ಆದರೆ ಅವರ ಆದರ್ಶಗಳು ಇಂದಿಗೂ ಪ್ರತಿ ಭಾರತೀಯನ ಹೃದಯದಲ್ಲಿ ಜೀವಂತವಾಗಿವೆ.
ಲೋಕಮಾನ್ಯ್ ಬಾಲ ಗಂಗಾಧರ ತಿಲಕ್ ಅವರ ತ್ಯಾಗ ಮತ್ತು ದೇಶಭಕ್ತಿ ನಮಗೆಲ್ಲರಿಗೂ ಸ್ಪೂರ್ತಿಯಾಗಲಿ. “ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಪಾಪವಲ್ಲ, ಅದು ನಮ್ಮ ಕರ್ತವ್ಯ” ಎಂದು ಅವರ ಈ ಮಾತು ಇಂದಿನ ಯುವಕರಿಗೆ ದಾರಿದೀಪ. ದೇಶಕ್ಕಾಗಿ ಬದುಕಿದ, ದೇಶಕ್ಕಾಗಿ ಮಡಿದ ಮಹಾನ್ ಚೇತನಕ್ಕೆ ಶ್ರೀರಂಗಪಟ್ಟಣ ಸಮರ್ಪಣ ಟ್ರಸ್ಟ್‌ನ ಗೌರವಪೂರ್ವಕ ನಮನ” ಸಲ್ಲಿಸಿದ್ದಾರೆ.
ಭಾರತೀಯ ರಾಷ್ತ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ಬಾಲ ಗಂಗಾಧರ ತಿಲಕರ 100ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅನೇಕ ಗಣ್ಯರು ಅವರನ್ನು ನೆನಪಿಸಿಕೊಂಡಿದ್ದಾರೆ.
‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಪ್ರತಿಪಾದಿಸಿದ್ದ ಭಾರತ ಸ್ವಾತಂತ್ರ್ಯ ಚಳವಳಿಯ ನಾಯಕ ತಿಲಕರ 100ನೇ ವರ್ಷದ ಪುಣ್ಯತಿಥಿಯಾದ ಆಗಸ್ಟ್ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆನೆದು ಹೀಗೆ ಟ್ಟಿಟ್ ಮಾಡಿದ್ದರು.
ಲೋಕಮಾನ್ಯ ಬಾಲ ಗಂಗಾಧರ ತಿಲಕರ 100ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಕೆಲವು ಗ್ರಾಮಗಳಲ್ಲಿಯೂ ಇವತ್ತು ತಿಲಕರ ಸಾಧನೆಯನ್ನು ನೆನಪಿಸಿಕೊಂಡಿದ್ದಾರೆ.





