ಶ್ರೀರಂಗಪಟ್ಟಣದ ದರಿಯಾ ದೌಲತ್ ಅರಮನೆ ನೋಡಲು ಬರುವ ಲಕ್ಷಾಂತರ ಪ್ರವಾಸಿಗರು, ಅರಮನೆಯಿಂದ ದಕ್ಷಿಣಕ್ಕೆ ಇರುವ ಎತ್ತರದ ಬಯಲನ್ನು ಗಮನಿಸುವುದೇ ಇಲ್ಲ. ಆದರೆ ಆ ಬಯಲಿನ ಮಧ್ಯೆ ನಿಂತಿರುವ ಬಿಳಿ ಬಣ್ಣದ ಎತ್ತರದ ಕಂಬವೇ ಇತಿಹಾಸದ ಎರಡು ಕರಾಳ ಅಧ್ಯಾಯ ಗಳಿಗೆ ಸಾಕ್ಷಿ. ಅದರ ಹೆಸರೇ ಸಬ್ಬಲ್ ರಾಣಿ ತಿಟ್ಟಿನ ಮೆಮೋರಿಯಲ್ ಪಿಲ್ಲರ್ / ರಣಗಂಭ. ಆ ಹೆಸರು ಬಂದಿದ್ದು ಹೇಗೆ? ಇದಕ್ಕೆ ಆಧಾರ ಇತಿಹಾಸ ಪುಸ್ತಕವಲ್ಲ, ಸ್ವತಃ ಕರ್ನಾಟಕ ಸರ್ಕಾರದ ಪುರಾತತ್ವ, ಸಂಗ್ರಹಾಲಯ ಗಳು ಮತ್ತು ಪರಂಪರೆ ಇಲಾಖೆ, ಮೈಸೂರು ವಿಭಾಗವು ಸ್ಥಳದಲ್ಲೇ ಹಾಕಿರುವ ಅಧಿಕೃತ ಶಿಲಾಫಲಕ.
ಫಲಕದಲ್ಲಿ ಕನ್ನಡದಲ್ಲಿ ಹೀಗೆ ಬರೆಯಲಾಗಿದೆ: ದರಿಯಾ ದೌಲತ್ ದಕ್ಷಿಣಕ್ಕೆ 500 ಮೀಟರ್ ದೂರದಲ್ಲಿ ಎತ್ತರದ ಬಯಲು ಪ್ರದೇಶವಿದ್ದು, ಇದನ್ನು ಸಬ್ಬಲ್ ರಾಣಿ ತಿಟ್ಟು ಎಂದು ಕರೆಯುತ್ತಾರೆ. ಇದರ ಮಧ್ಯದಲ್ಲಿ ರಣಗಂಭವಿದ್ದು ಅದನ್ನು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಗತಿಸಿದ ಬ್ರಿಟಿಷ್ ಸೈನ್ಯದ ಅಧಿಕಾರಿಗಳ ನೆನಪಿನಲ್ಲಿ ನಿರ್ಮಿಸಲಾಗಿದೆ. ಸ್ಥಳೀಯ ಪರಂಪರೆಯಂತೆ ಟಿಪ್ಪು ತನ್ನ ರಾಣಿಯೊ ಬ್ಬಳನ್ನು ರಾಜದ್ರೋಹದ ಅನುಮಾನದ ಮೇಲೆ ಭರ್ಜಿಯಿಂದ ತಿವಿದು ಸಾಯುವವರೆಗೆ ಇಲ್ಲಿ ನೇತುಹಾಕಿದ್ದರಿಂದ ಇದಕ್ಕೆ ಸಬ್ಬಲ್ ರಾಣಿ ತಿಟ್ಟು ಎಂದು ಹೆಸರು ಬಂದಿದೆ.”ಇದೇ ವಿಷಯ ಆಂಗ್ಲ ಫಲಕದಲ್ಲಿ ಇನ್ನಷ್ಟು ನೇರವಾಗಿ ಇದೆ.
“ONE OF THE WOMEN OF TIPU WAS TRACED ALIVE AND HANGED TO DEATH HERE ONLY ON THE SUSPICION OF UNFAITHFUL BY HIMSELF”
ಅಂದರೆ ಸಬ್ಬಲ್ ರಾಣಿ ಟಿಪ್ಪುವಿನ ಅಧಿಕೃತ ಪತ್ನಿ ಖದೀಜಾ ಜಮಾನ್ ಬೇಗಂ ಅಲ್ಲ, ಆತನ ಹರಂನ ಒಬ್ಬ ಮಹಿಳೆ. ಆಕೆಯ ಮೇಲೆ ವಿಶ್ವಾಸದ್ರೋಹದ ಅನುಮಾನ ಬಂದಾಗ ಯಾವುದೇ ವಿಚಾರಣೆ ಯಿಲ್ಲದೆ ಈ ದಿಬ್ಬದಲ್ಲಿ ಮರಣ ದಂಡನೆ ವಿಧಿಸಿತ್ತು. 226 ವರ್ಷಗಳಿಂದ ಆ ದಿಬ್ಬಕ್ಕೆ ಆಕೆಯೇ ಹೆಸರಾಗಿದ್ದಾಳೆ.
ಪಿಲ್ಲರ್ನಲ್ಲಿ ಏನಿದೆ? ಮೈಸೂರು ಗೆಜೆಟಿಯರ್ ದಾಖಲೆ.ಈ ಪಿಲ್ಲರ್ ಅನ್ನು ಮೊದಲು ನಿರ್ಮಿಸಿದ್ದು ಬ್ರಿಟಿಷ್ ಸೈನ್ಯದ 12ನೇ ಮತ್ತು 74ನೇ ರೆಜಿಮೆಂಟ್ನ ಅಧಿಕಾರಿಗಳು. ನಂತರ 1907ರಲ್ಲಿ ಮೈಸೂರು ಸರ್ಕಾರವು (ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿ) ಇದನ್ನು ಪುನಃ ನಿರ್ಮಿಸಿ ಶಿಲಾಫಲಕ ಹಾಕಿತು.ಮೈಸೂರು ಗೆಜೆಟಿಯರ್ (B.L. Rice, 1897 ಪರಿಷ್ಕೃತ ಆವೃತ್ತಿ) ಮತ್ತು ವಿಕಿಪೀಡಿಯಾ / ಆರ್ಕೈವ್ ದಾಖಲೆಗಳ ಪ್ರಕಾರ, ಪಿಲ್ಲರ್ನ ರಚನೆ ಹೀಗಿದೆ.ವಿಶಾಲವಾದ ವೃತ್ತಾಕಾರದ ಮೆಟ್ಟಿಲುಗಳ ಮಧ್ಯದಲ್ಲಿ ಎತ್ತರದ ಸ್ಥಳದಲ್ಲಿ ನಿರ್ಮಾಣ.ಕೆಳಭಾಗ ಚೌಕಾಕಾರ, ನಾಲ್ಕು ಬದಿಗಳಲ್ಲಿ ಕಪ್ಪು ಶಿಲಾಫಲಕಗಳು,ಮೇಲೆ ಪಿರಮಿಡ್ ಆಕಾರದ ಎತ್ತರದ ಶ್ವೇತವರ್ಣದ ಒಬೆಲಿಸ್ಕ್, ತುದಿಯಲ್ಲಿ ಫಿರಂಗಿ ಗುಂಡುಮುಂಭಾಗದ ಶಾಸನದ ಪೂರ್ಣ ಪಠ್ಯ ಹೀಗಿದೆ:
“THIS MONUMENT WAS ERECTED BY THE OFFICERS OF HIS MAJESTY’S 12TH AND 74TH REGIMENTS TO THE MEMORY OF THE UNDERMENTIONED OFFICERS WHO WERE KILLED OR DIED DURING THE SIEGE OF SERINGAPATAM”
ಹೆಸರುಗಳ ಪಟ್ಟಿ:
H.M. 12th Foot:
Lieut. Geo. Nixon – 5th April 1799 Killed
Lieut. Tho. Falla – 6th April 1799 Killed
Major Jas Allen – 22nd April 1799 Died
Lieut. Walr. Gahan – 7th May 1799 Died
H.M. 74th Foot:
Lieut. Lewis Irwin – 26th April 1799 Killed
Lieut. Jas Farquhar, Lieut. Jas Prendergast, Lieut. Vesey Hill, Lieut. Henry Shawe
ಎಲ್ಲರೂ 4ನೇ ಮೇ ತಿಂಗಳ 1799 ನಾಲ್ಕನೇ ಆಂಗ್ಲೋ ಮೈಸೂರ್ ಯುದ್ಧದಲ್ಲಿ ಶ್ರೀರಂಗಪಟ್ಟಣ ಪತನದ ದಿನ ಮಡಿದವರು.
ಕೆಳಭಾಗದಲ್ಲಿ “DOVE BROS. MYSORE” ಎಂದು ಕೆತ್ತಲಾಗಿದೆ – ಅಂದರೆ ಮೈಸೂರಿನ ಡವ್ ಬ್ರದರ್ಸ್ ಕಂಪನಿ ಈ ಶಿಲೆಗಳನ್ನು ತಯಾರಿಸಿದೆ. ಗೆಜೆಟಿಯರ್ ಪ್ರಕಾರ, ಈ ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮಿತ್ರಪಡೆಗಳು 50,000 ಸೈನಿಕರು, ಟಿಪ್ಪುವಿನ ಸೈನ್ಯ 30,000 ಸೈನಿಕರು ಕಾದಾಡಿದ್ದರು.
ಇಂದಿನ ಸ್ಥಿತಿ ಪಿಲ್ಲರ್ ಸುತ್ತ ಪೊದೆ, ಕಂಟಿ ಗಿಡಗಳು ಬೆಳೆದಿವೆ. ಬಿಳಿ ಬಣ್ಣ ಕಪ್ಪಾಗಿದೆ. ಪುರಾತತ್ವ ಇಲಾಖೆ ಯ ಫಲಕ ತುಕ್ಕು ಹಿಡಿದಿದೆ. ಕಬ್ಬಿಣದ ಗೇಟ್ ನಲ್ಲಿ ಹಸಿರ ಅಂಬು ಹಾಸು ಬೆಳೆದಿದೆ. ಸ್ಮಾರಕ ನೋಡಲು ಹೋದ ಇತಿಹಾಸ ಪ್ರಿಯರಿಗೆ ಮುಳ್ಳು ಗಿಡಗಳು ತೊಂದರೆಗೆ ಹಿಡುಮಾಡುತ್ತವೆ.ಒಂದು ದಿಬ್ಬದಲ್ಲಿ ಎರಡು ಇತಿಹಾಸ ಟಿಪ್ಪುವಿನ ಅಂತಃಪುರದ ಒಬ್ಬ ಮಹಿಳೆಯ ದುರಂತ ಸಾವು ಮತ್ತು ಟಿಪ್ಪುವನ್ನೇ ಕೊಂದ ಯುದ್ಧದಲ್ಲಿ ಸತ್ತ ಬ್ರಿಟಿಷ್ ಅಧಿಕಾರಿಗಳ ಸ್ಮಾರಕ. ಈ ವಿರೋಧಾ ಭಾಸವೇ ಸಬ್ಬಲ್ ರಾಣಿ ತಿಟ್ಟಿನ ವಿಶೇಷವಾಗಿದೆ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.





