ರಾಕಿಂಗ್ ಸ್ಟಾರ್ ಯಶ್ ಅಭಿನಯದ,‘ಟಾಕ್ಸಿಕ್’ ಚಿತ್ರ ಬಿಡುಗಡೆಯಾಗುವ ಮುನ್ನ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು ಆದರೆ ಇದೀಗ ಚಿತ್ರದ ಸಾಂಗ್‌ಗಳು ಒಂದರಮೇಲೋಂದು ರಿಲೀಸ್ ಆಗುತ್ತಿದ್ದು ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖ ಸ್ನಾನ ಗಿಟ್ಟಿಸಿಕೊಳ್ಳುವಲ್ಲಿದೆ.
ಗೀತು ಮೋಹನ್ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ದೊರಕಿದೆ.
ಈ ಮೊದಲು ಬಿಡುಗಡೆಯಾಗಿ ಕೋಟ್ಯಂತರ ವೀಕ್ಷಣೆಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದ ಬೋಲ್ಡ್ ಅಂಡ್ ರೊಮ್ಯಾಂಟಿಕ್ ‘ತಬಾಹಿ’ ಹಾಡಿನ ಬೆನ್ನಲ್ಲೇ, ಚಿತ್ರತಂಡ ಎರಡನೇ ಹಾಡನ್ನು ರಿಲೀಸ್ ಮಾಡಿದೆ. ಇಂದು ಬೆಳಿಗ್ಗೆ 11.33ಕ್ಕೆ ರಿಲೀಸ್ ಆಗಿರುವ ‘ಮನಮೋಹಕ..’ ಸಾಂಗ್ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.
‘ಟಾಕ್ಸಿಕ್’ ಚಿತ್ರದ ಮೊದಲ ಹಾಡು ‘ತಬಾಹಿ’ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದರು. ಈಗ ಮನಮೋಹಕ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಸಿದ್ದಾರ್ಥ್ ಬಸರೂರ್ ಅವರು ಹಾಡಿದ್ದಾರೆ. ಈ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ.
‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ನಟನೆ ಮಾಡಿದ್ದಾರೆ. ಯಶ್ ಯಾರ ಜೊತೆ ಫೈಟ್ ಮಾಡುತ್ತಾರೆ, ಯಾರ ಜೊತೆ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವುದು ಯಾರಿಗೂ ತಿಳಿದಿಲ್ಲ ಆದರೇ, ಚಿತ್ರದ ಕುತೂಹಲ ಮಾತ್ರ ಅಭಿಮಾನಿಗಳಿಗಿದೆ. ಆದ್ರೆ ಇದೀಗ ಬಿಡುಗಡೆಯಾಗಿರುವ ತಾರಾ ಸುತಾರಿಯಾ ಜೊತೆಗಿನ ಈ ಮಧುರ ಪ್ರಣಯಗೀತೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಜಾಸ್ತಿ ಮಾಡಿದೆ.
ಮೊದಲ ಹಾಡು ‘ತಬಾಹಿ’ಯಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಮತ್ತು ಇವರ ಬೋಲ್ಡ್ ನೆಸ್ ಮೂಲಕ ನೋಡುಗರ ಗಮನ ಸೆಳೆದಿದ್ದರು. ಸಧ್ಯಕ್ಕೆ ಬಿಡುಗಡೆಯಾದ ‘ಮನಮೋಹಕ’ ಹಾಡು ಮಧುರವಾದ ಪ್ರಣಯಗೀತೆಯಾಗಿದೆ. ಈ ಹಾಡಿನಲ್ಲಿ ಯಶ್ ಹಾಗೂ ತಾರಾ ಸುತಾರಿಯಾ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ ಸ್ಕ್ರೀನ್ ಕೆಮಿಸ್ಟ್ರಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡಿನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಕೂಡ ಕಾಣಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಯಶ್ ಟಾಕ್ಸಿಕ್ ಚಿತ್ರ ಎಲ್ಲರ ಮನಸ್ಸನ್ನು ಸೆಳೆಯುತ್ತಾ ಇಲ್ಲವಾ ? ಎನ್ನುವುದನ್ನು ಚಿತ್ರ ಬಿಡುಗಡೆಯಾದ ನಂತರ ಕಾದು ನೋಡಬೇಕಿದೆ.





