ಮಾಧ್ಯಮಗಳ ವಿರುದ್ಧ ಟ್ರಂಪ್ ಸಂಘರ್ಷ: ಡೊನಾಲ್ಡ್ ಆಡಳಿತದ ಕ್ರಮ ಖಂಡಿಸಿ ಒಗ್ಗಟ್ಟು ಪ್ರದರ್ಶಿಸಿದ ಮೀಡಿಯಾ

ವಾಷಿಂಗ್ಟನ್ : ಅಮೆರಿಕದಲ್ಲಿ ಟ್ರಂಪ್ ಏನೇ ಹೇಳಿದರು ಅದಕ್ಕೆ ಸರಿ ಎನ್ನುಬೇಕು ಇಲ್ಲ ಅಂದ್ರೆ ಅವರಿಗೆ ಶಿಕ್ಷೆ ನೀಡುತ್ತಿದ್ದರು ಆದರೆ ಇದೀಗ ಟ್ರಂಪ್‌ ವಿರುದ್ಧ ಮಿಡಿಯಾಗಳು ವಾಗ್ದಾಳಿ ನಡೆಸಿದ್ದಾರೆ,

ಮೂರು ಮಾಧ್ಯಮಗಳಿಗೆ ಶ್ವೇತ ಭವನಕ್ಕೆ ಪ್ರವೇಶವನ್ನು ನಿರಾಕರಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಅಮೆರಿಕದ ಬಹುತೇಕ ಮಾಧ್ಯಮಗಳು ತಿರುಗಿಬಿದ್ದಿರುವ ಮಾಹಿತಿ ಬೆಳಕಿಗೆ ಬಂದಿದೆ.

CNN, MS NOW ಮತ್ತು Politio ಮಾಧ್ಯಮ ಸಂಸ್ಥೆಗಳಿಗೆ ಪ್ರವೇಶ ನಿರಾಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮವನ್ನು ಖಂಡಿಸಿ ಶ್ವೇತ ಭವನದ ಟಿವಿ ಚಾನೆಲ್ ಗಳ ಸದಸ್ಯರು ಸೇರಿದಂತೆ ಬಹುತೇಕ ಸುದ್ದಿಸಂಸ್ಥೆಗಳು ಹೇಳಿಕೆ ಬಿಡುಗಡೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿವೆ.

ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡುವುದಾಗಿ CNN ಹೇಳಿದ್ದರೆ, ABC ನ್ಯೂಸ್, CBS ನ್ಯೂಸ್, ಫಾಕ್ಸ್ ನ್ಯೂಸ್ ಮೀಡಿಯಾ ಮತ್ತು NBC ನ್ಯೂಸ್ ಸೇರಿದಂತೆ ಅನೇಕ ಮಾಧ್ಯಮ ಸಂಸ್ಥೆಗಳು ಶ್ವೇತ ಭವನಕ್ಕೆ ಮಾಧ್ಯಮಗಳ ಪ್ರವೇಶವನ್ನು ಸಮರ್ಥಿಸಿಕೊಂಡಿದ್ದು, ಸುದ್ದಿ ಸಂಸ್ಥೆಗಳ ಮೇಲಿನ ನಿಷೇಧಕ್ಕೆ ಪ್ರತಿಭವನೆ ವ್ಯಕ್ತಪಡಿಸಿವೆ.

ವಿಮರ್ಶಾತ್ಮಕ ವರದಿಯ ಮೇಲೆ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ ಎಂದು ಎಚ್ಚರಿಸಿವೆ. ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕೆ ಶಿಕ್ಷೆಯಾಗಿ ಈ ಮಾಧ್ಯಮ ಸಂಸ್ಥೆಗಳನ್ನು ಅಧ್ಯಕ್ಷೀಯ ಭವನದಿಂದ ನಿಷೇಧಿಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದರು.

ಆಡಳಿತದ ಪ್ರಮುಖ ಭಾಷಣಗಳು, ಅಧಿಕೃತ ಪ್ರಕಟಣೆಗಳು ಮತ್ತು ಕಾರ್ಯಕ್ರಮಗಳನ್ನು ಮುಖ್ಯವಾಹಿನಿ ಮಾಧ್ಯಮಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಜನರಿಗೆ ತಲುಪಿಸಲು ಶ್ವೇತಭವನದ ಯೂಟ್ಯೂಬ್ ಚಾನೆಲ್ ಮೂಲಕ ಈ ನಿರಂತರ ಪ್ರಸಾರವನ್ನು ಶುರು ಮಾಡಲಾಗಿದೆ.ಸಿಎನ್‌ಎನ್ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳ ಪ್ರವೇಶ ನಿರ್ಬಂಧ ವಿರೋಧಿಸಿ ಅಮೆರಿಕದ ದಿಗ್ಗಜ ಸುದ್ದಿ ವಾಹಿನಿಗಳು ಅಧ್ಯಕ್ಷರ ಕವರೇಜ್ ಬಹಿಷ್ಕರಿಸಿದ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಆಡಳಿತವು ‘ಟ್ರಂಪ್ ಟಿವಿ’ ಎಂಬ 24/7 ಲೈವ್ ಸ್ಟ್ರೀಮಿಂಗ್ ವೇದಿಕೆಯನ್ನು ಅಧಿಕೃತವಾಗಿ ಆರಂಭಿಸಿದೆ.

ಸರ್ಕಾರದ ಈ ನಿರ್ಧಾರವು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿ ಖಾತರಿಪಡಿಸಿರುವ ಪತ್ರಿಕಾ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿ ಸಿಎನ್‌ಎನ್, ಪೊಲಿಟಿಕೊ ಮತ್ತು ಎಂಎಸ್ ನೌ ಸಂಸ್ಥೆಗಳು ಟ್ರಂಪ್ ಆಡಳಿತದ ವಿರುದ್ಧ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿವೆ.ಟ್ರಂಪ್ ಅವರ ನೀತಿಗಳನ್ನು ತೀವ್ರವಾಗಿ ಟೀಕಿಸಿದ ಕಾರಣಕ್ಕೆ ಸಿಎನ್‌ಎನ್ , ಎಂಎಸ್ ನೌ ಮತ್ತು ಪೊಲಿಟಿಕೊ ಸಂಸ್ಥೆಗಳ ವರದಿಗಾರರನ್ನು ಶ್ವೇತಭವನಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿ, ಅವರ ಪ್ರೆಸ್ ಪಾಸ್‌ಗಳನ್ನು ರದ್ದುಗೊಳಿಸಲಾಗಿತ್ತು.

ಸೀಮಿತ ಸ್ಥಳಾವಕಾಶವಿರುವ ಶ್ವೇತಭವನದಲ್ಲಿ ಪ್ರಮುಖ ಮಾಧ್ಯಮ ಸಂಸ್ಥೆಗಳು ಸರದಿಯಂತೆ ಕಾರ್ಯನಿರ್ವಹಿಸಿ, ಸಂಗ್ರಹಿಸಿದ ವರದಿ ಮತ್ತು ವಿಡಿಯೋ ಫೂಟೇಜ್‌ಗಳನ್ನು ಎಲ್ಲ ಸದಸ್ಯ ಮಾಧ್ಯಮಗಳಿಗೂ ಸಮಾನವಾಗಿ ಹಂಚಿಕೊಳ್ಳುವ ವ್ಯವಸ್ಥೆಯೇ ಪ್ರೆಸ್ ಪೂಲ್. ಟ್ರಂಪ್ ವಿರುದ್ಧದ ಪ್ರತಿಭಟನೆಯಲ್ಲಿ ಸಾಮಾನ್ಯವಾಗಿ ಅವರ ಪರವಾಗಿ ನಿಲ್ಲುವ ‘ಫಾಕ್ಸ್ ನ್ಯೂಸ್’ ಕೂಡ ಕೈಜೋಡಿಸಿರುವುದು ಈ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತದೆ.

ಮಾಧ್ಯಮಗಳ ವಿರುದ್ಧ ಟ್ರಂಪ್ ನಿರಂತರ ಸಂಘರ್ಷ: 2016 ರ ತಮ್ಮ ಮೊದಲ ಅವಧಿಯಿಂದಲೂ ಮುಖ್ಯವಾಹಿನಿಯ ಮಾಧ್ಯಮಗಳನ್ನು ಫೇಕ್ ನ್ಯೂಸ್ ಮತ್ತು ಜನರ ಶತ್ರು ಎಂದು ಕರೆಯುತ್ತಾ ಬಂದಿರುವ ಟ್ರಂಪ್, ಪತ್ರಿಕಾ ಸಮಾವೇಶಗಳಲ್ಲಿ ನಿರಂತರವಾಗಿ ಜಟಾಪಟಿ ನಡೆಸುತ್ತಿದ್ದರು. ಇದೀಗ ನೇರವಾಗಿ ತಮ್ಮದೇ ಆದ ಸರ್ಕಾರಿ ಮಾಧ್ಯಮ ಪ್ರಸಾರವನ್ನು ಪ್ರಾರಂಭಿಸುವ ಮೂಲಕ ಮುಖ್ಯವಾಹಿನಿ ಸುದ್ದಿಮನೆಗಳಿಗೆ ಪರ್ಯಾಯ ಸೃಷ್ಟಿಸಲು ಮುಂದಾಗಿದ್ದಾರೆ.

ರಿಯಲ್ ಟೈಮ್ ಅಪ್‌ಡೇಟ್‌ಗಳನ್ನು ನೀಡುತ್ತದೆ. ಟ್ರಂಪ್ ಅವರ ಪ್ರಮಾಣವಚನ ಸಮಾರಂಭ, ಐತಿಹಾಸಿಕ ಭಾಷಣಗಳು ಮತ್ತು ಸರ್ಕಾರದ ಪ್ರಮುಖ ನಿರ್ಧಾರಗಳ ದೃಶ್ಯಗಳನ್ನು ಯಾವುದೇ ಸುದ್ದಿ ವಾಹಿನಿಗಳ ಹಸ್ತಕ್ಷೇಪವಿಲ್ಲದೆ ದಿನದ 24 ಗಂಟೆಯೂ ನಿರಂತರವಾಗಿ ಪ್ರಸಾರ ಮಾಡಲಾಗುತ್ತಿದೆ

ಶ್ವೇತಭವನದ ಈ ಕ್ರಮವನ್ನು ಖಂಡಿಸಿ ಅಮೆರಿಕದ ದಿಗ್ಗಜ ಮಾಧ್ಯಮಗಳಾದ ಎಬಿಸಿ , ಸಿಬಿಎಸ್ , ಸಿಎನ್‌ಎನ್ , ಎನ್‌ಬಿಸಿ ಮತ್ತು ಫಾಕ್ಸ್ ನ್ಯೂಸ್ ಅಧ್ಯಕ್ಷ ಟ್ರಂಪ್ ಅವರ ಶ್ವೇತಭವನದ ಜಂಟಿ ಪತ್ರಿಕಾ ಪೂಲ್ ಕವರೇಜ್‌ನಲ್ಲಿ ಭಾಗವಹಿಸುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ದಾಖಲಿಸಿದವು.

ಮಾಧ್ಯಮಗಳ ನಿರ್ಬಂಧವನ್ನು ಸಮರ್ಥಿಸಿಕೊಂಡ ಅಧ್ಯಕ್ಷ ಟ್ರಂಪ್, ಅವರು ನನ್ನನ್ನು ಬಹಿಷ್ಕರಿಸುವುದಾಗಿ ಹೇಳುತ್ತಾರೆ, ಆದರೆ ಎಂದಿಗೂ ಬಹಿಷ್ಕರಿಸಲು ಸಾಧ್ಯವಿಲ್ಲ. ನನ್ನ ಸುತ್ತಲೂ ಇರುವ ಪತ್ರಿಕಾ ಮಾಧ್ಯಮಗಳನ್ನು ನೋಡಿ, ಇದರ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದು ಬಹಿಷ್ಕಾರದ ಬೆದರಿಕೆಯನ್ನು ಲಘುವಾಗಿ ತಳ್ಳಿಹಾಕಿರುವ ಮಾಹಿತಿ ತಿಳಿದು ಬಂದಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post