ವಿದೇಶಿ ಉದ್ಯೋಗಿಗಳನ್ನು ಬಳಸಿಕೊಂಡು ಅಮೆರಿಕದ ಕಾರ್ಮಿಕರ ವೇತನ ಕಡಿಮೆ ಮಾಡಲಾಗುತ್ತಿದೆ; ಭಾರತ ತೀವ್ರ ಆಕ್ರೋಶ

ನವದೆಹಲಿ: ಎಚ್-1ಬಿ (H-1B) ವೀಸಾ ಹೊಂದಿರುವ ಭಾರತೀಯ ವೃತ್ತಿಪರರನ್ನು “ಜೀತದಾಳುಗಳು” ಎಂದು ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಕರೆದಿದ್ದು, ಈ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ವೀಸಾ ವಂಚನೆ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು, ಅಮೆರಿಕದಲ್ಲಿ H-1B ವೀಸಾದಡಿ ಕೆಲಸ ಮಾಡುತ್ತಿದ್ದರೆ, ಅದೇ ಹುದ್ದೆಯಲ್ಲಿ ನೇಮಕಗೊಂಡಿರುವ ಅಮೆರಿಕದ ಪ್ರಜೆಗೆ ಹೋಲಿಸಿದರೆ ನೀವು 20,000 ಡಾಲರ್ ಕಡಿಮೆ ವೇತನ ಪಡೆಯುತ್ತಿದ್ದೀರಿ ಎಂದರು.

ಈ ವಿದೇಶಿ ಹೊರಗುತ್ತಿಗೆ ಕಂಪನಿಗಳಲ್ಲಿ ಯಾವುದಾದರೂ ನಿಮ್ಮನ್ನು ಕರೆತಂದಿದ್ದರೆ, ಅದೇ ರೀತಿಯ ಹುದ್ದೆಯಲ್ಲಿರುವ ಅಮೆರಿಕದ ಪ್ರಜೆಗೆ ಹೋಲಿಸಿದರೆ ನೀವು 48,000 ಡಾಲರ್ ಕಡಿಮೆ ವೇತನ ಪಡೆಯುತ್ತಿದ್ದೀರಿ ಎಂದು ಹೇಳಿದ್ದರು.

ವಿದೇಶಿ ಉದ್ಯೋಗಿಗಳನ್ನು ಬಳಸಿಕೊಂಡು ಅಮೆರಿಕದ ಕಾರ್ಮಿಕರ ವೇತನವನ್ನು ಕಡಿಮೆ ಮಾಡಲಾಗುತ್ತಿದೆ ಮತ್ತು ಸ್ಥಳೀಯ ಉದ್ಯೋಗಿಗಳ ಬದಲಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು.

ವಾನ್ಸ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇಂತಹ ಪದಬಳಕೆಯು ವಸಾಹತುಶಾಹಿ ಮನಸ್ಥಿತಿಯನ್ನು ನೆನಪಿಸುತ್ತದೆ ಮತ್ತು ಅಮೆರಿಕದ ಆರ್ಥಿಕ ಪ್ರಗತಿಗೆ ಭಾರತೀಯರು ನೀಡುತ್ತಿರುವ ಮಹತ್ತರ ಕೊಡುಗೆಯನ್ನು ಅಪಮಾನಿಸಿದಂತಾಗಿದೆ ಎಂದು ತಿಳಿಸಿದೆ.

ಇಂತಹ ವರ್ಣನೆಗಳು ಅನಗತ್ಯವಾಗಿದ್ದು, ಅಮೆರಿಕದ ಆರ್ಥಿಕತೆ ಮತ್ತು ಆವಿಷ್ಕಾರ ವ್ಯವಸ್ಥೆಗೆ ಭಾರತೀಯ ವೃತ್ತಿಪರರು ನೀಡಿರುವ ಕೊಡುಗೆಯನ್ನು ಕಡೆಗಣಿಸುತ್ತವೆ ಎಂದು ಹೇಳಿದೆ.

H-1B ವೀಸಾ ಉದ್ಯೋಗಿಗಳನ್ನು “indentured servants” ಎಂದು ಬಣ್ಣಿಸಿದ್ದರು.

ಅಮೆರಿಕದ ಸಮಾನ ಹುದ್ದೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೋಲಿಸಿದರೆ H-1B ವೀಸಾ ಹೊಂದಿರುವವರು ಕಡಿಮೆ ವೇತನ ಪಡೆಯುತ್ತಿದ್ದಾರೆ. ವಿದೇಶಿ ಹೊರಗುತ್ತಿಗೆ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆತಂದು, ಇಲ್ಲಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ ಎಂದೂ ಆರೋಪಿಸಿದ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post