ಮತ್ತೆ ಶುರುವಾಯ್ತು ಮಧ್ಯಪ್ರಾಚ್ಯದಲ್ಲಿ ಯುದ್ಧ; ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಅಟ್ಯಾಕ್ – ಇರಾನ್ ಮೇಲೆ ದಾಳಿ ನಡೆಸಿದ ದೊಡ್ಡಣ್ಣ

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ ಇದರ ಪರಿಣಾಮ ಬೇರೆ ದೇಶಗಳ ಮೇಲೆ ಬೀರುತ್ತಿದ್ದು, ಆದರೂ ಯಾರಿಗೂ ತಲೆಕೆಡಿಸಿಕೊಳ್ಳದೆ ಎನು ಆಗುತ್ತದೆಯೋ ಆಗಲಿ ಎಂದು ವಿದೇಶಿಗಳು ಸಾಗುತ್ತಿವೆ.

ದೊಡ್ಡಣ್ಣ ಎಂದು ಕರೆಸಿಕೊಂಡ ಅಮೆರಿಕ ಒಂದೊಮ್ಮೆ ಶಾಂತಿಗೆ ನಾವು ಸಿದ್ಧ ಎನ್ನುತ್ತಿದ್ದು, ಈ ನಿರ್ಧಾರದ ಬೆನ್ನಲ್ಲೇ ಮತ್ತೆ ಯುದ್ಧ ಘೋಷನೆ ಮಾಡುವುದಾಗಿದೆ.

ಕದನ ವಿರಾಮ ಉಲ್ಲಂಘಿಸಿದ್ದಕ್ಕಾಗಿ ಇರಾನ್‌ ಮೇಲೆ ಸತತ ಎರಡನೇ ರಾತ್ರಿಯೂ ಅಮೆರಿಕ ದಾಳಿ ನಡೆಸಿದೆ. ಹಾರ್ಮುಜ್‌ ಜಲಸಂಧಿಯ ಮೂಲಕ ಹಾದುಹೋಗುವ ಮತ್ತೊಂದು ತೈಲ ಟ್ಯಾಂಕರ್‌ ಮೇಲೆ ಮತ್ತೆ ಇರಾನ್‌ ಸಹ ದಾಳಿ ನಡೆಸಿದೆ.

ಆ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಅಮೆರಿಕ ಆರೋಪಿಸಿದೆ. ಒಪ್ಪಂದದಿಂದ ಇರಾನ್‌ ಎಂದಿಗೂ ಪಾಠ ಕಲಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಿಡಿದೆದ್ದಿದ್ದಾರೆ.

ಹಾರ್ಮುಜ್ ಜಲಸಂಧಿಯ ಮೂಲಕ ಸುಮಾರು 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಪನಾಮ ಧ್ವಜ ಹೊತ್ತ ‘ಕಿಕು’ ಟ್ಯಾಂಕರ್ ಅನ್ನು ಇರಾನ್ ಡಿಕ್ಕಿ ಹೊಡೆದು ಹಾನಿಗೊಳಿಸಿದೆ ಎಂದು ಅಮೆರಿಕ ಆರೋಪಿಸಲಾಗಿದೆ ಇದರ ಪರಿಣಾಮ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎನ್ನುವ ವರದಿ ಬೆಳಕಿಗೆ ಬಂದಿದೆ.

ಕಣ್ಗಾವಲು ಮೂಲಸೌಕರ್ಯ, ಸಂವಹನ ವ್ಯವಸ್ಥೆಗಳು, ವಾಯು ರಕ್ಷಣಾ ತಾಣಗಳು, ಡ್ರೋನ್ ಸಂಗ್ರಹಣಾ ಸೌಲಭ್ಯಗಳು ಮತ್ತು ಮೈನ್‌ಲೇಯರ್ ಸಾಮರ್ಥ್ಯಗಳು ಸೇರಿದಂತೆ 10 ಇರಾನಿನ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಮಿಲಿಟರಿ ತಿಳಿಸಿದೆ.

ಈ ವಿಚಾರಕ್ಕೆ ಪ್ರತಿಯಾಗಿ ಅಮೆರಿಕ ಮರು ದಾಳಿ ನಡೆಸಿದ್ದು, ಈ ಯುದ್ಧ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ ಒಬ್ಬರ ಮೇಲೆ ಒಬ್ಬರು ನೆಪ ಹೇಳಿ ಯುದ್ಧದ ಕಹಳೆ ಉದುತ್ತಲೇ ಇದ್ದಾರೆ. ಈ ಯುದ್ಧ ವಿಚಾರ ಮುಂದೆನಾಗುತ್ತದೆ ಎನ್ನುವುದು ಕಾದು ನೋಡಬೇಕಿದೆ.

Share it :

Leave a Reply

Your email address will not be published. Required fields are marked *