ರೈತರಿಗೆ ಫ್ರೀ ಪವರ್ ಕೊಡ್ತಾ ಇದ್ದೀವಿ, ಅದು ಸಹಾಯ ಅಲ್ಲವಾ? : ಡಿಸಿಎಂ ಪರಮೇಶ್ವರ್

ಬೆಂಗಳೂರು: ರೈತರಿಗೆ ಫ್ರೀ ಪವರ್ ಕೊಡ್ತಾ ಇದ್ದೀವಿ. ಅದು ಸಹಾಯ ಅಲ್ಲವಾ? ಬರ ಪರಿಹಾರ ವಿಚಾರದಲ್ಲಿ ವಿಪಕ್ಷಗಳುರಾಜಕೀಯ ಮಾಡ್ತಾ ಇವೆ ಅಂತ ಡಿಸಿಎಂ ಪರಮೇಶ್ವರ್ ವಿಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಕೊಟ್ಟಿರುವ ಬರ ಪರಿಹಾರ ಕಡಿಮೆ ಆಯ್ತು ಎಂಬ ವಿಪಕ್ಷಗಳ ಆರೋಪ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು,ಪರಿಹಾರದ ಮೊತ್ತ ಜಾಸ್ತಿ ಆಗುತ್ತೆ ಅಂತ ನಾನು ಈಗ ಏನು ಹೇಳೋಕೆ ಆಗೊಲ್ಲ. ಕೇಂದ್ರ ಸರ್ಕಾರ ನಮಗೆ ಯಾವ ರೀತಿ ಸಹಾಯ ಕೊಡುತ್ತದೆ ಅದರ ಮೇಲೆ ನಿರ್ಧಾರ ಆಗುತ್ತದೆ ಎಂದು ತಿಳಿಸಿದರು

ಪರಿಹಾರ ಅಲ್ಲದೆ ಬೇರೆ ಬೇರೆ ಬೆನಿಫಿಟ್‌ಗಳನ್ನ ರೈತರಿಗೆ ಕೊಟ್ಟಿದ್ದೇವೆ. ಪವರ್ ಸಬ್ಸಿಡಿ 22 ಸಾವಿರ ಕೋಟಿ ಕೊಡ್ತಾ ಇದ್ದೇವೆ‌. ರೈತರಿಗೆ ಫ್ರೀ ಪವರ್ ಕೊಡ್ತಾ ಇದ್ದೀವಿ. ಅದು ಸಹಾಯ ಅಲ್ಲವಾ? ಅಕ್ಕಿ ಕೊಡ್ತಾ ಇದ್ದೇವೆ ಸಹಾಯ ಅಲ್ಲವಾ. 2 ಸಾವಿರ ಹಣ ರೈತರ ಹೆಣ್ಣುಮಕ್ಕಳು ಅಲ್ಲವಾ ತಗೊಳ್ಳೋದು. ಎಲ್ಲಾ ಕೊಡುವ ಬೆನಿಫಿಟ್ ಅವರಿಗೆ ಸಹಾಯ ಆಗುತ್ತದೆ. ಇದೂ ಸಣ್ಣ ಸಹಾಯ‌. ಮುಂದೆ ಕೇಂದ್ರ ಸರ್ಕಾರ ಪರಿಹಾರ ಕೊಟ್ಟಾಗ ನೋಡೋಣ ಎಂದರು.

ವಿಪಕ್ಷಗಳು ಹೇಳೋದು ಹೇಳ್ತಾರೆ ಅವರಿಗೆ ರಾಜಕೀಯ ಬೇಕು.ಅವರಿಗೆ ಜನರು, ರೈತರಿಗೆ ಸಹಾಯ ಮಾಡೋದು ಬೇಕಿಲ್ಲ. 1250 ಕೋಟಿ ಸಣ್ಣ ಹಣನಾ? ಸ್ವಾಭಾವಿಕವಾಗಿ ಅದು ಕಡಿಮೆ ಅನ್ನಿಸುತ್ತದೆ‌. ನಾವು ತಕ್ಷಣ ಮೊದಲ ಹಂತ ಅಂತ ಇಷ್ಟು ಪರಿಹಾರ ಅಂತ ಕೊಡ್ತಾ ಇದ್ದೀವಿ ಅಂತ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಟೆಲಿಗ್ರಾಮ್ ಆಪ್ ಉಪಯೋಗ ಮಾಡಿಕೊಂಡು ಭಯೋತ್ಪಾದಕ ಕೃತ್ಯ ಮಾಡಲು ಗ್ರೂಪ್ ಮಾಡಲು ಮುಂದಾಗಿದ್ರು ಎಂಬ ವಿಚಾರದ ಮಾಹಿತಿ ಇಲ್ಲ ಅಂತ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಅವರು, ಪ್ರಕರಣದ ಮಾಸ್ಟರ್‌ ಮೈಂಡ್‌ ಶಬ್ಬೀರ್‌ ಇನ್‌ಸ್ಟಾಗ್ರಾಮ್‌ ನಲ್ಲಿ ಉಗ್ರರ ಪೋಸ್ಟ್‌ಗಳಿಗೆ ಲೈಕ್‌ ಮತ್ತು ಕಾಮೆಂಟ್‌ ಮಾಡಿ ಬೆಂಬಲಿಸುತ್ತಿದ್ದ. ಇದರಿಂದ ಅನುಮಾನಗೊಂಡಿದ್ದ ಗುಪ್ತಚರ ಇಲಾಖೆ, ಶಬ್ಬೀರ್‌ ಇನ್‌ಸ್ಟಾ ಐಡಿ ಫಾಲೂ ಮಾಡಿ ಸದ್ದಿಲ್ಲದೇ ತನಿಖೆ ನಡೆಸೋದಕ್ಕೆ ಶುರು ಮಾಡಿತ್ತು. ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಮಾಹಿತಿ ಕೂಡ ನೀಡಲಾಗಿತ್ತು.ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಶಬ್ಬೀರ್‌ ಬಂಧನಕ್ಕೆ ಪೊಲೀಸರು ಪ್ಲ್ಯಾನ್‌ ಮಾಡಿಕೊಂಡಿದ್ದರು. ಅದರಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಶಬ್ಬೀರ್‌ನನ್ನ ಬಂಧನ ಮಾಡಿ ಮೊಬೈಲ್‌ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಮೊಬೈಲ್‌ ಪರಿಶೀಲನೆ ವೇಳೆ ಇನ್‌ಸ್ಟಾ, ಟೆಲಿಗ್ರಾಂ ಆಪ್‌ಗಳನ್ನೂ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬೆಬ್ಬಿಬೀಳುವ ಮಾಹಿತಿಗಳು ಲಭ್ಯವಾಗಿವೆ. ಭಯೋತ್ಪಾದನೆಗೆ ಪಿತೂರಿ ನಡೆಸಿರುವುದು ಬಯಲಿಗೆ ಬಂದಿದೆ

ಈ ವಿಚಾರದ ಬಗ್ಗೆ ಗೃಹ ಸಚಿವರನ್ನು ಕೇಳಿ. ನಾನು ಈಗ EX ಗೃಹ ಸಚಿವ ಆಗಿರೋದ್ರೀಂದ ನನಗೆ ಮಾಹಿತಿ ಕೊಡಲ್ಲ. ಹೀಗಾಗಿ ಈ ಬಗ್ಗೆ ಮಾಹಿತಿ ನನಗೆ ಇಲ್ಲ. ಆಗ ಗೃಹ ಸಚಿವ ಇದ್ದೆ ಮಾಹಿತಿ ಕೊಡುತ್ತಿದ್ರು. ಈಗ ಆ ಗೃಹ ಸಚಿವರಿಗೆ ಮಾಹಿತಿ ಕೊಡ್ತಾರೆ ಎಂದು ಹೇಳಿದ್ದಾರೆ

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post