ಕರ್ನಾಟಕವು 6,000ಕ್ಕೂ ಹೆಚ್ಚು ಆನೆಗಳನ್ನು ಹೊಂದಿದ್ದು, ಭಾರತದಲ್ಲೇ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ. ಆನೆಗಳನ್ನು ಉಳಿಸಿ, ಪರಿಸರವನ್ನು ಉಳಿಸಿ” ಎಂಬ ಘೋಷಣೆಯೊಂದಿಗೆ ಇಡೀ ವಿಶ್ವ ಆಚರಿಸುವ ಆಗಸ್ಟ್ 12 ರಂದು ಕರ್ನಾಟಕಕ್ಕೆ ವಿಶೇಷ ಹೆಮ್ಮೆ ಇದೆ. ಯಾಕೆಂದರೆ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಸಂಖ್ಯೆಯಲ್ಲಿ ಹೆಮ್ಮೆ ಕರ್ನಾಟಕದ ಗಜಬಲ, 2017ರ ರಾಷ್ಟ್ರೀಯ ಗಣತಿ ಪ್ರಕಾರ ಕರ್ನಾಟಕದಲ್ಲಿ 6,049 ಆನೆಗಳಿವೆ. ಇದು ದೇಶದ ಒಟ್ಟು ಕಾಡಾನೆಗಳ ಶೇಕಡಾ 25 ರಷ್ಟು. ಪ್ರಪಂಚದ ಒಟ್ಟು ಏಷ್ಯನ್ ಆನೆಗಳಲ್ಲಿ ಶೇಕಡಾ 35 ರಷ್ಟು ಒಂದೇ ಭಾರತದಲ್ಲಿವೆ ಎನ್ನಲಾಗಿದೆ.
ಅದರಲ್ಲಿ ದೊಡ್ಡ ಪಾಲು ನಮ್ಮ ಕರ್ನಾಟಕದ್ದು. ಹೀಗಾಗಿ ವಿಶ್ವ ಆನೆ ದಿನದಂದು ಇಡೀ ಜಗತ್ತು ಕರ್ನಾಟಕದತ್ತ ನೋಡುತ್ತದೆ.ಕರ್ನಾಟಕ ದೊಡ್ಡ ಕಾಡುಗಳು ಆನೆಗಳಿಗೆ ಸ್ವರ್ಗ.ನಾಗರಹೊಳೆ,ಬಂಡೀಪುರ,ಮುದುಮಲೈ, ವೈನಾಡು ಸೇರಿ 2,200 ಚ.ಕಿ.ಮೀ ನ ನೀಲಗಿರಿಬಯೋಸ್ಪಿಯರ್’ ಇದೆ. ಇದು ಏಷ್ಯಾದ ಅತಿದೊಡ್ಡ ನಿರಂತರ ಆನೆ ಆವಾಸ. ಕಾವೇರಿ, ಕೃಷ್ಣಾ, ಘಟಪ್ರಭಾ ನದಿಗಳ ನೀರು ಮತ್ತು ವರ್ಷವಿಡೀ ಹಸಿರು ಇರುವ ಪಶ್ಚಿಮ ಘಟ್ಟದ ಕಾಡುಗಳಿಂದ ಆಹಾರ.ಹಾಗೂ ಬ್ರಹ್ಮಗಿರಿ, ದಾಂಡೇಲಿ, ಭದ್ರಾ, ಬಿಲಿಗಿರಿರಂಗನ ಬೆಟ್ಟ ಆನೆಗಳು ನಿರಾಳವಾಗಿ ಓಡಾಡಲು 31 ಗುರುತಿಸಲಾದ ಆನೆ ಕಾರಿಡಾರ್‌ಗಳು.
ಸಂಸ್ಕೃತಿಯಲ್ಲಿ ಆನೆ ಕರ್ನಾಟಕದ ಹೆಗುರುತ್ತಾಗಿದೆ.ಕರ್ನಾಟಕಕ್ಕೆ ಆನೆ ಕೇವಲ ಪ್ರಾಣಿಯಲ್ಲ, ಅದು ಸಂಸ್ಕೃತಿ. ಮೈಸೂರು ಜಂಬೂ ಸವಾರಿ ರಾಜ ಒಡೆಯರ ಕಾಲ 1610 ರಿಂದಲೂ ಆನೆಗಳಿಗೆ ರಾಜಮರ್ಯಾದೆ. 750 ಕೆಜಿ ಚಿನ್ನದ ಅಂಬಾರಿಯಲ್ಲಿ ದೇವಿಯನ್ನು ಹೊರುವ ಅಂಬಾರಿ ಆನೆ ವಿಶ್ವಪ್ರಸಿದ್ಧ.ಪ್ರತಿ ವರ್ಷ ದಸರಾ ಆನೆ ಶಿಬಿರ ಜುಲೈನಿಂದ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ 10-12 ಆನೆಗಳಿಗೆ ತರಬೇತಿ. ವೈದ್ಯರು, ಮಾವುತರು, ಪೌಷ್ಟಿಕ ಆಹಾರ ಇದು ವಿಶ್ವದಲ್ಲೇ ಮಾದರಿ.ಇತಿಹಾಸದಲ್ಲಿ ಟಿಪ್ಪು ಸುಲ್ತಾನನ ಪಟ್ಟದ ಆನೆಗೆ ಕಣ್ಣು ಬರಿಸಿದ ಹಕೀಮ್ ನಂಜುಂಡ ಕಥೆ ನಮ್ಮ ವೈದ್ಯಕೀಯ ಪರಂಪರೆ.
ಇನ್ನು ನಮ್ಮ ಮುಂದಿರುವ ಸವಾಲುಗಳು ಸಂಖ್ಯೆ ಹೆಚ್ಚಿದ್ದರೂ ಸಮಸ್ಯೆ ಕಡಿಮೆ ಇಲ್ಲ. ಮಾನವ-ಆನೆ ಸಂಘರ್ಷ ಆವಾಸಸ್ಥಾನ ಕಡಿಮೆಯಾಗುತ್ತಿರುವುದರಿಂದ ಆನೆಗಳು ಬೆಳೆಗೆ ಬರುತ್ತಿವೆ.ಆಗ ಎರಡೂ ಕಡೆ ಪ್ರಾಣಹಾನಿ.2023-24ರಲ್ಲಿ ರಾಜ್ಯದಲ್ಲಿ 42 ಜನರು ಮತ್ತು 12 ಆನೆಗಳು ಈ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿವೆ.ಕಾರಿಡಾರ್ ರಸ್ತೆ ನಾಶ ರೈಲ್ವೆ, ರೆಸಾರ್ಟ್‌ನಿಂದ ಆನೆ ಹಾದಿ ಮುಚ್ಚುತ್ತಿದೆ.ವಿದ್ಯುತ್ ಆಘಾತ ಅಕ್ರಮ ಬೇಲಿಯಿಂದ ಆನೆಗಳ ಸಾವು
ವಿಶ್ವ ಆನೆ ದಿನದಂದು ಕರ್ನಾಟಕ ಪ್ರತಿಜ್ಞೆಗೆ ಮುಂದಾಗಬೇಕು.ನಾವು ಪ್ರಥಮ ಸ್ಥಾನ ರಾಜ್ಯ ಎಂಬ ಹೆಮ್ಮೆಯ ಜೊತೆ ಜವಾಬ್ದಾರಿಯೂ ಇದೆ. ಕಾರಿಡಾರ್ ಉಳಿಸಿ ಆನೆ ಹಾದಿಯಲ್ಲಿ ಕಟ್ಟಡಕ್ಕೆ ಅನುಮತಿಕೊಡ ಬಾರದು.”ಗಜಸ್ನೇಹಿ ಕಾರಿಡಾರ್” ಯೋಜನೆಗೆ ಬೆಂಬಲ.ಸಹಬಾಳ್ವೆ ಕಾಡಂಚಿನಲ್ಲಿ ಸೋಲಾರ್ ಬೇಲಿ, ಟ್ರಿಪ್ ಅಲಾರಂ, ಮುಂಚಿನ ಎಚ್ಚರಿಕೆ ವ್ಯವಸ್ಥೆ. ಪ್ರವಾಸಕ್ಕೆ ಹೋದಾಗ ಪ್ಲಾಸ್ಟಿಕ್ ಮುಕ್ತ.ಆನೆಗಳು ಪ್ಲಾಸ್ಟಿಕ್ ತಿಂದು ಸಾಯುತ್ತವೆ.ಶಾಲಾ ಕಾಲೇಜು ವಿದ್ಯರ್ಥಿಗಳಿಂದಲೇ ಜಾಗೃತಿ”ಆನೆ ಶತ್ರುವಲ್ಲ, ಅದು ಕಾಡಿನ ಎಂಜಿನಿಯರ್” ಎಂದು ಕಲಿಸಿ.
ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ರಾಜ್ಯ ಸರ್ಕಾರ ಆನೆಗಳ ವೈದ್ಯಕೀಯ, ಆಹಾರ, ರಕ್ಷಣೆಗೆ ಪ್ರತಿ ವರ್ಷ ಕೋಟಿ ರೂ. ಖರ್ಚು ಮಾಡುತ್ತಿದೆ. ಕರ್ನಾಟಕ ದಲ್ಲಿ ಆನೆಗಳಿವೆ, ಹಾಗಾಗಿ ಕಾಡಿದೆ. ಕಾಡಿರುವುದರಿಂದ ಮಳೆಯಿದೆ. ಮಳೆ ಯಿರುವುದರಿಂದ ನಾವಿದ್ದೀವಿ.ವಿಶ್ವ ಆನೆ ದಿನ ನಮಗೆ ನೆನಪಿಸುವುದು ಒಂದೇ ಸಂಖ್ಯೆಯಲ್ಲಿ ಪ್ರಥಮ ಆಗಿರುವ ನಾವು, ಸಂರಕ್ಷಣೆಯಲ್ಲೂ ಪ್ರಥಮ ಸ್ಥಾನ ಆಗಬೇಕು.ಆನೆಗಳನ್ನು ಉಳಿಸಿದರೆ ಮಾತ್ರ “ಆನೆಗಳ ನಾಡು ಕರ್ನಾಟಕ” ಎಂಬ ಬಿರುದು ಉಳಿಯುತ್ತದೆ.
ಸಮರ್ಪಣ ಟ್ರಸ್ಟ್ ವಿಶ್ವ ಆನೆ ದಿನ ಆಚರಿಸಿ “ನಮ್ಮ ಗಜರಾಜರನ್ನು ಉಳಿಸೋಣ, ಕರ್ನಾಟಕದ ಕೀರ್ತಿಯನ್ನು ಬೆಳೆಸೋಣ” ಎಂಬ ಸಂದೇಶ ಒಂದನ್ನು ಸಾರಲುಹೊರಟಿದೆ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.





