ಯತ್ನಾಳ್ ದ್ವೇಷ ಭಾಷಣದ ಪಿತಾಮಹರು : ಯತ್ನಾಳ್ ವಿರುದ್ಧ ಕೈ ಶಾಸಕ ಗರಂ

ರಾಜ್ಯದ ರಾಜಕಾರಣದಲ್ಲಿ ದಿನಕ್ಕೊಂದು ಬಣ್ಣ ಬದಲಾಗುತ್ತಲೇ ಇರುತ್ತೆ, ಒಬ್ಬರ ಮೇಲೆ ಒಬ್ಬರು ಟೀಕೆ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಸದ್ಯಕ್ಕೆ ಪ್ರದೀಪ್‌ ಈಶ್ವರ್‌ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ, ಕೈ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಗೃಹ ಸಚಿವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.

ಛಲವಾದಿ ನಾರಾಯಣಸ್ವಾಮಿಯನ್ನು ಪ್ರದೀಪ್‌ ಈಶ್ವರ್‌ ದೇಶದ್ರೋಹಿ ಎಂದಿರುವುದರ ಜತೆಗೆ ದ್ವೇಷ ಭಾಷಣ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹಾಗೂ . ಸಚಿವರಿಗೆ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಲೇಟರ್‌ ಬರೆದಿರುವುದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಪ್ರದೀಪ್ ಈಶ್ವರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ದ್ವೇಷ ಭಾಷಣದ ಆರೋಪವನ್ನು ತಳ್ಳಿಹಾಕಿದ್ದಾರೆ. ಅಲ್ಲದೆ, ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ದ್ವೇಷ ಭಾಷಣದ ಪಿತಾಮಹರು ಎಂದು ವಾಗ್ದಾಳಿ ನಡೆಸಿದರು.ಛಲವಾದಿ ನಾರಾಯಣಸ್ವಾಮಿ ಅವರನ್ನು ಬುದ್ಧಿವಂತರು ಮತ್ತು ಪ್ರಜ್ಞಾವಂತರು ಎಂದು ತಿಳಿದಿದ್ದೆ ಆದರೆ, ಅವರು ನೀಡಿದ ದೂರು ನೋಡಿದ ನಂತರ ಅವರಿಗೆ ಜ್ಞಾನವಿಲ್ಲ ಎಂದು ನನಗೆ ಈಗ ಅರ್ಥವಾಗಿದೆ.

ಭಾಷಣದ ವೀಡಿಯೊವನ್ನು ನೋಡದೆ ಹೋಮ್ ಮಿನಿಸ್ಟರ್ ಮತ್ತು ಸಿಎಂ ಅವರಿಗೆ ಪತ್ರ ಬರೆಯುವುದು ಸರಿಯಲ್ಲ. ವಿಡಿಯೋದಲ್ಲಿ, ಅಂಧಭಕ್ತರು, ದೇಶದ್ರೋಹಿಗಳು ಈ ದೇಶಕ್ಕೆ ಮಾರಕ’ ಎಂದು ಹೇಳಿದ್ದೇನೆಯೇ ಹೊರತು, ನಿರ್ದಿಷ್ಟವಾಗಿ ಯಾರನ್ನೂ ದೇಶದ್ರೋಹಿಗಳು ಎಂದು ಕರೆದಿಲ್ಲ ಎಂದು ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *