ವಿದೇಶದಲ್ಲಿ ವಾಸವಿರುವ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಸಿಎಂ ಡಿಕೆಶಿ

CM DKS

ಬೆಂಗಳೂರು: ಭಾರತೀಯರು ವಿದೇಶಕ್ಕೆ ಓದುವುದಕ್ಕೆ ಇಲ್ಲವೇ ಬದುಕು ಕಟ್ಟಿಕೊಳ್ಳುವುದಕ್ಕೆ ಹೋಗುತ್ತಾರೆ. ಅಲ್ಲಿ ನಮ್ಮ ರಾಜ್ಯದ ಯವ ಜನತೆಯೂ ಹೋಗಿರುತ್ತಾರೆ. ವಿದೇಶದಲ್ಲಿರುವ ನಮ್ಮ ಕನ್ನಡಿಗರಿಗೆ ಯಾವುದೇ ತೊಂದರೆಯಾಗಬಾರದೆಂದು ಸರ್ಕಾರ ಹೊಸ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯದಲ್ಲಿ ಅನಿವಾಸಿ ಭಾರತೀಯ ಇಲಾಖೆ ಸ್ಥಾಪಿಸಲು ಕರ್ನಾಟಕ ಸರ್ಕಾರ ಮಹತ್ತರ ನಿರ್ಧಾರತೆಗೆದುಕೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ 10ಕ್ಕೂ ಹೆಚ್ಚು ಅನಿವಾಸಿ ಭಾರತೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು ಎಂದು ಮಾಹಿತಿ ತಿಳಿದು ಬಂದಿದೆ.

ಈ ಇಲಾಖೆಯ ಪ್ರಮುಖ ಉದ್ದೇಶವೆಂದರೆ, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು, ಬಂಡವಾಳ ಗಿದೆ.ಕ್ರೂಢೀಕರಣ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ವ್ಯಾಪಾರ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದಾಗಿದೆ.

ತಮಿಳುನಾಡು, ಕೇರಳ, ಪಂಜಾಬ್ ರಾಜ್ಯಗಳ ಮಾದರಿಯಲ್ಲಿ ಈ ಇಲಾಖೆಯನ್ನು ತಯಾರಿಸಲಾಗುತ್ತಿದ್ದು, ವಿದೇಶದಲ್ಲಿ ಕಾನೂನು ಸಮಸ್ಯೆಗಳು, ಪಾಸ್‌ಪೋರ್ಟ್ ತೊಂದರೆಗಳು, ಮರಣದಂತಹ ಸಂದರ್ಭಗಳಲ್ಲಿ ನೆರವು ನೀಡಲು ಈ ಇಲಾಖೆ ಮಹತ್ತರ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಅಲ್ಲಿರುವ ಕನ್ನಡಿಗರ ದೂರುಗಳನ್ನು ಪರಿಹರಿಸಲು ಪ್ರತ್ಯೇಕ ವಿಚಾರಣಾ ಡೆಸ್ಕ್ ರಚಿಸುವ ಸಾಧ್ಯತೆಗಳೂ ಇದ್ದು, ಸುಮಾರು 50 ಲಕ್ಷ ಅನಿವಾಸಿ ಭಾರತೀಯರಿಗೆ ನೆರವು ನೀಡುವ ಗುರಿಯನ್ನು ಈ ಇಲಾಖೆ ಹೊಂದಿದೆ.

ಈ ನಿರ್ಧಾರದಿಂದ ರಾಜ್ಯಕ್ಕೆ ವಿದೇಶಿ ವಿನಿಮಯ ಹೆಚ್ಚಳವಾಗುವ ಸಾಧ್ಯಯಿದ್ದು, ಅನಿವಾಸಿ ಕನ್ನಡಿಗರ ಬಹು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಇದು ಮುಖ್ಯಮಂತ್ರಿಗಳ ಆರನೇ ಗ್ಯಾರಂಟಿಗಳಲ್ಲಿ ಒಂದಾಗಿದೆ ಎಂದು ಅನಿವಾಸಿ ಭಾರತೀಯ ಸಂಘಟನೆಗಳು ತಿಳಿಸಿವೆ.

ಒಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ರಾಜ್ಯಕ್ಕೆ ಮತ್ತು ವಿದೇಶದಲ್ಲಿರುವ ನಮ್ಮ ಕನ್ನಡಿಗರಿಗೆ ಎಷ್ಟರ ಮಟ್ಟಿಗೆ ಪರಿಣಾಮ ನೀಡುತ್ತದೆ ಎನ್ನುವುದು ಕಾದುನೋಡಬೇಕಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others