ಸಿಎಂ ಡಿಕೆಶಿಗೆ ಸವಾಲ್‌ ಹಾಕಿದ ನಿಖಿಲ್ ಕುಮಾರಸ್ವಾಮಿ ಯಾಕೆ ಗೊತ್ತಾ? ಕಾರಣ ಇಲ್ಲಿದೆ ನೋಡಿ.

Nikhil Kumaraswamy

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ನಾಳೆ ಜೂ.27 ಭೈರಮಂಗಲಕ್ಕೆ ಹೋಗುತ್ತಿದ್ದು, ಸಿಎಂ ಡಿಕೆ ಶಿವಕುಮಾರ್ ಅವರು ಭೈರಮಂಗಲಕ್ಕೆ ಬರಲಿ ನೋಡೋಣ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಿಎಂ ಅವರು ವಿಧಾನಸೌಧದಲ್ಲಿ 4 ಗೋಡೆ ಮಧ್ಯೆ ಚರ್ಚೆ ಮಾಡೋಣ ಅಂತ ಪತ್ರ ಬರೆದಿದ್ದರು. ಕುಮಾರಸ್ವಾಮಿ ಅವರು ರೈತರ ಸಮ್ಮುಖದಲ್ಲಿ ಚರ್ಚೆಗೆ ಕರೆದಿದ್ದಾರೆ. ಕುಮಾರಸ್ವಾಮಿ ‌ರೈತರ ಪರ ಇರೋ ವ್ಯಕ್ತಿ. ನಾಳೆ ಕುಮಾರಸ್ವಾಮಿ ಅವರು ಭೈರಮಂಗಲ ಸರ್ಕಲ್ ನಲ್ಲಿ ರೈತರ ಜೊತೆ ಕೂರುತ್ತಾರೆ‌. ಸಿಎಂ ‌ಅವರು ಬಂದು ಕೂತು ಮಾತಾಡಲಿ, 4 ಗೋಡೆ ಮಧ್ಯೆ ಬೇಡ, ರೈತರ ಮಧ್ಯೆ ಕೂತು ಸಮಸ್ಯೆ ಪರಿಹಾರ ‌ಮಾಡೋಣ ಅಂತ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದಾರೆ. ಸಿಎಂ ಅವರು ಕುಮಾರಸ್ವಾಮಿ ಅವರ ಪತ್ರಕ್ಕೆ ರಿಪ್ಲೈ ಕೊಟ್ಟಿಲ್ಲ. ಸಿಎಂ ಬ್ಯುಸಿ ಇರ್ತಾರೆ ಎಂದು ಹೇಳಿದರು.

ತಮ್ಮ ಕುಟುಂಬದ ವಿರುದ್ಧ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪೋಸ್ಟರ್ ಅಭಿಯಾನ ಕಾಂಗ್ರೆಸ್ ಗೆ ಹೊಸದೇನು ಅಲ್ಲ. ಯಾರು ಎಷ್ಟು ಭೂಮಿ ಕರ್ನಾಟಕದಲ್ಲಿ ಹೊಂದಿದ್ದಾರೆ? ಬೇಕಾದ್ರೆ ದಾಖಲಾತಿ ಬಿಡುಗಡೆ ಮಾಡ್ತೀವಿ. ಆದ್ರೆ ಅಷ್ಟು ಸಣ್ಣತನದ ರಾಜಕೀಯ ಮಾಡಬಾರದು ಅಂತ ನಾವು ನಿರ್ಧಾರ ಮಾಡಿದ್ದೇವೆ. ಬಿಜೆಪಿ ಇದ್ದಾಗ 40% ಕಮೀಷನ್ ಅಂತ ಪೇ ಸಿಎಂ ಅಂತ ಮಾಡಿದ್ರು. ಈಗ ಪರ್ಸೆಂಟೇಜ್ ಕಾಂಗ್ರೆಸ್ ‌ನಲ್ಲಿ‌ ಎಷ್ಟಕ್ಕೆ ಹೋಗಿ ನಿಂತಿದೆ ಅಧಿಕಾರಿಗಳು, ಶಾಸಕರಿಗೆ ಎಲ್ಲವೂ ಗೊತ್ತಿದೆ. ಯಾರ ಭೂಮಿ ಎಲ್ಲಿದೆ? ಎಂದು ಗುಡುಗಿದರು.

ಇದು ರೈತರ ಸಮಸ್ಯೆ ಪ್ರಶ್ನೆ. ಕುಟುಂಬದ ತೇಜೋವಧೆ ಮಾಡಲಿ ಅವರಿಗೆ ಬಿಟ್ಟಿದ್ದು, ಅವರ ಮನಸ್ಥಿತಿ ಅದು. ರೈತರು ಅದಕ್ಕೆ ಉತ್ತರ ಕೊಡ್ತಾರೆ. ನಾವು ರೈತರ ಪರ ಇರ್ತೀವಿ. ಯಾರೋ ಮಾಡ್ತಾರೆ ಅಂತ ನಾವು ಮಾಡಿದ್ರೆ ಅದಕ್ಕೆ ಕೊನೆ ಇರೋದಿಲ್ಲ. ಅದನ್ನ ಮಾಡಿದ್ರೆ ನಮಗೂ ಅವರಿಗೂ ವ್ಯತ್ಯಾಸ ಇಲ್ಲ. ಇಲ್ಲಿ ರೈತರ ಸಮಸ್ಯೆ ಇರೋದು‌. ನಾವು ರೈತರ ಪರ ನಿಲ್ತೀವಿ ಅಂತ ಕಾಂಗ್ರೆಸ್‌ ವಿರುದ್ಧ ಕುಟುಕಿದರು.

ಪಹಣಿ ಇರೋರು, ಸಮಸ್ಯೆ ಇರೋ ರೈತರನ್ನ ಕೂರಿಸಿಕೊಳ್ಳಲಿ. ಯಾವುದೇ, ಸಂಘರ್ಷ ಗಲಭೆಗೆ ಅವಕಾಶ ಇಲ್ಲ. ರೈತರ ಸಮಸ್ಯೆ ಸುಸೂತ್ರವಾಗಿ ಪರಿಹಾರ ಆಗಲಿ. ಕುಮಾರಸ್ವಾಮಿ ಅವರು ನಾಳೆ ಹೋಗ್ತಾರೆ ರೈತರ ಪರ ಕಮಿಟ್ಮೆಂಟ್‌ ಉಳಿಸಿಕೊಳ್ತಾರೆ ಎಂದು ಸೂಚಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post